ಸಮಾಜ ಪರಿವರ್ತನೆಯ ಹರಿಕಾರ ಬಸವಣ್ಣ: ಯಾತನೂರ

0
69

ಕಲಬುರಗಿ: ಬಸವ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಕುಲಪತಿಗಳು. ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಪರಿವರ್ತನೆಗೆ ಅನುಭವ ಮಂಟಪ ಸ್ಥಾಪನೆ ಮಾಡಿ ಸಮಾಜದ ಕೆಳವರ್ಗದ ಶರಣರನ್ನು ಒಂದು ಗೂಡಿಸಿ ವಚನ ಚಳುವಳಿಯ ಮೂಲಕ ಸಮಾನತೆ ತರಲು ಚಳುವಳಿ ಮಾಡಿದ ಶರಣ ಬಸವಣ್ಣನವರು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ ಚಂದ್ರಕಾಂತ್ ಯಾತನೂರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸುಭಾಷ್ ಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ್ ಟ್ರಸ್ಟ್ ಹಮ್ಮಿಕೊಂಡ ಎರಡನೇ ವರ್ಷದ ಬಸವ ಪುರಸ್ಕಾರ ಸಮಾರಂಭದಲ್ಲಿ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಬಸವಣ್ಣನವರು ಶೋಷಿತ ಸಮಾಜಕ್ಕೆ ಎತ್ತಿ ಹಿಡಿದ ಮಹಾನ್ ಚಿಂತಕರು ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ ಎಚ್ ಟಿ ಪೋತೆ ನುಡಿದರು.

Contact Your\'s Advertisement; 9902492681

ಕಾಯಕ್ರಮದಲ್ಲಿ ಮುಖ್ಯ ಅತಿಥಿ ಗಳಾದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದಶ್ರೀ ಕುಪೇಂದ್ರ ಪಾಟೀಲ, ಸಾಹಿತಿ ಹಾಗೂ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಹಾಗೂ ಕಾಯಕ್ರಮದ ರೂವಾರಿ ಶರಣಗೌಡ ಪಾಟೀಲ ವೇದಿಕೆಯ ಮೇಲೆ ಇದ್ದರು. ರಾಷ್ಟ್ರೀಯ, ರಾಜ್ಯ, ಕಲ್ಯಾಣ್ ಕರ್ನಾಟಕ ಬಸವಪುರಸ್ಕಾರ ಸ್ವೀಕರಿಸಿದ ಡಾ ವಿ ಜಿ ಪೂಜಾರ,ಕಲ್ಯಾಣ್ ರಾವ ಪಾಟೀಲ, ಬದರಿನಾತ ಜಹಗೀರದಾರ, ಧಾಕ್ಷಾಯಣಿ ಬಳಬಟ್ಟಿ ಮಠ,ಡಾ ಚಿ. ಸಿ.ನಿಂಗಣ್ಣ, ಪ್ರೇಮಾ ಹೂಗಾರ, ಶರಣು ಅತನೂರ, ಮನೋಹರ ಮರಗುತ್ತಿ, ನೀಲಮ್ಮ ಹಿರೇಮಠ, ಎಲ್ ಬಿ ಕೆ ಆಲ್ದಾಳ, ಹೇಮಾ ದೇಶಮುಖ ಇವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಕಾಯಕ್ರಮ ನಿರೂಪಣೆ ಡಾ ಶರಣಬಸಪ್ಪ ವಡ್ಡಣಕೇರಿ ಮಾಡಿದರು. ಖ್ಯಾತ ಗಾಯಕ ಶಿವಶಂಕರ ಬಿರಾದಾರ್ ಅವರಿಂದ ಸಂಗೀತ ಕಾಯಕ್ರಮ ನೆರವೇರಿತು, ಕಾರ್ಯಕ್ರಮದಲ್ಲಿ ಸಾಹಿತಿ ಸಿದ್ದರಾಮ ಹೊನ್ಕಲ, ಬಿ ಎಚ್ ನಿರಗುಡಿ, ಡಾ ನಾಗಪ್ಪ ಗೋಗಿ, ವಿಶ್ವನಾಥ ಪಾಟೀಲ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here