ಶೋಷಣೆಗೆ ಒಳಗಾಗಿದ್ದರೋ ಬಹುಸಂಖ್ಯಾತರು: ಡಾ.ಈಶ್ವರಯ್ಯ

0
47

ಕಲಬುರಗಿ: ಬಸವ ಸಮಿತಿ ಅನುಭವ ಮಂಟಪದಲ್ಲಿ ಲಿಂ.ಶಾಂತಾಬಾಯಿ ಬಿ.ಆಲೂರು, ಲಿಂ. ಮಾಣಿಕಬಾಯಿ ಜಿ. ದೇವಪ್ಪ ಮತ್ತು ಲಿಂ.ಅಕ್ಕಮಹಾದೇವಿ ಬಿ.ಮಾಯಾಣಿ, ಲಿಂ.ತೇಜಮ್ಮಆರ್. ಮಾಯಾಣಿ ಸ್ಮರಣಾರ್ಥ ಅರಿವಿನ ಮನೆ ೬೩೪ ನೆಯ ದತ್ತಿ ಕಾರ್ಯಕ್ರಮದಲ್ಲಿ  ಪ್ರಾಧ್ಯಾಪಕರಾದ ಮಠ ರವರು ಬಸವಣ್ಣನೆಂಬ ಲೋಕಚುಂಬಕ ಎಂಬ ವಿಷಯದ ಕುರಿತು ಮಾತನಾಡುತ್ತಾ ಬಸವಣ್ಣನವರು ವಿಶ್ವಮಾನ್ಯರಾಗಿದ್ದಾರೆ. ಯಾರು ಶೋಷಣೆಗೆ ಒಳಗಾಗಿದ್ದರೋ ಅವರನ್ನು ಬಹುಸಂಖ್ಯಾತರು ಎಂದು ಹೇಳುತ್ತಾ ಅವರೇ ಬಸವಣ್ಣನವರಿಗೆ ಪ್ರೀಯವಾದರು ಅವರೆ ಶರಣರು. ಬಸವಣ್ಣನೆಂದರೆಚೈತನ್ಯಒಂದು ಶಕ್ತಿ ಎಂದು ಹೇಳಿದ್ದಾರೆ.

ಫ.ಗು. ಹಳಕಟ್ಟಿಯವರ ಜಯಂತಿಯ ಅಂಗವಾಗಿ ಅವರ ಸ್ಮರಣಾರ್ಥಡಾ. ಜಯಶ್ರೀ ದಂಡೆಯವರು ಮಾತನಾಡಿ ನುಡಿ ನಮನ ಸಲ್ಲಿಸಿದರು. ಬಸವಣ್ಣನವರನ್ನು ಶರಣರ ಸಮೂಹ ತುಂಬಾಗೌರವದಿಂದ ಸ್ಮರಿಸುತ್ತಾರೆ. ಈ ಆಧಾರದಿಂದ ಬಸವಣ್ಣ ಲೋಕಚುಂಬಕರಾಗಿದ್ದರು. ಬಸವಣ್ಣನವರುತಮ್ಮ ದೋಷಗಳ ಬಗ್ಗೆ ಮಾತಾನಾಡಿಆತ್ಮ ವಿಮರ್ಶೆ ಮಾಡಿಕೊಂಡಿರುವುದರಿಂದ ಲೋಕಪೂಜ್ಯರಾದರು.ಬಸವಣ್ಣನವರುಎಲ್ಲಾರೀತಿಯ ವಿಚಾರ ಸಿದ್ಧಾಂತದವರನ್ನು ಒಂದುಗೂಡಿಸಿದರು.ತನ್ಮೂಲಕಎಲ್ಲರ ಹೃದಯದಲ್ಲಿ ನೆಲೆಸಿದರು. ನಿಮ್ಮ ಶರಣರ ಪಾದವಲ್ಲದೆ ಅನ್ಯಕ್ಕೆಳಸದಂತೆ ಇರಿಸಯ್ಯಕೂಡಲ ಸಂಗಮದೇವಎಂದು ಹೇಳುವುದರ ಮೂಲಕ ಶರಣರ ಮನಸ್ಸನ್ನುಗೆದ್ದರು.ಒಬ್ಬ ವ್ಯಕ್ತಿ ಕಳಂಕಿತನಾಗಿದ್ದರೂಅವನನ್ನು ವೈಯಕ್ತಿಕವಾಗಿಅವಮಾನ ಮಾಡಬಾರದೆಂಬದು ಶರಣರ ಸಿದ್ಧಾಂತ.ಇವ ನಮ್ಮವ ಇವ ನಮ್ಮವಎನ್ನುವ ಮೂಲಕ ಜಾತಿಯತೆಯನ್ನು ನಿರಾಕರಿಸುವುದರ ಮುಖಾಂತರ ಬಸವಣ್ಣನವರು ಬಹುಸಂಖ್ಯಾತರಿಗೆ ಪ್ರಿಯವಾದವರು.

Contact Your\'s Advertisement; 9902492681

ವಚನ ಸಾಹಿತ್ಯಕ್ಕೆ ಫ.ಗು. ಹಳಕಟ್ಟಿಯವರ ಕೊಡುಗೆಅಪಾರವಾಗಿದೆ. ಹಳಕಟ್ಟಿಯವರು ವಚನ ಸಾಹಿತ್ಯ ಶೋಧನೆ ಪ್ರಚಾರಕ್ಕೆತರದಿದ್ದರೆ  ನಮಗಿಂದು ವಚನಗಳು ಓದಲು ಸಿಗುವುದು ವಿರಳವಾಗುತ್ತಿತ್ತು. ಬಿ.ಎಲ್.ಡಿ. ಸಂಸ್ಥೆಯನ್ನು ಹುಟ್ಟು ಹಾಕಿದಕ್ರಾಂತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಹಳಕಟ್ಟಿಯವರಯ ಶಿವಾನುಭವ ಪತ್ರಿಕೆ ಆರಂಭಿಸಿ ತುಂಬಾ ದಿನಗಳವರೆಗೆ ಅದನ್ನು ಮುಂದುವರಿಸಿದರು. ಹಳಕಟ್ಟಿಯವರು ತಮ್ಮ ಬಡತನದಲ್ಲಿ ಹರಿದಅಂಗಿಯನ್ನು ಮುಚ್ಚಲು ಕೋಟನ್ನು ಹಾಕಿ ತಿರುಗುತ್ತಿದ್ದರು. ಹಳಕಟ್ಟಿಯವರ ಕೆಲಸದಿಂದಅವರಿಗೆ ವಚನ ಪಿತಾಮಹಎಂದು ಬಿರುದುಸಲ್ಲುತ್ತದೆ.

ಅಧ್ಯಕ್ಷತೆ ವಹಿಸಿ ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆಅವರು ಮಾತನಾಡಿ ಸಕಲ ಲೋಕದವರಿಗೂ ಬಸವಣ್ಣ ಚುಂಬಕ ಶಕ್ತಿಯಾಗಿದ್ದರು.ಅವರಘನತರವಾದ ವ್ಯಕ್ತಿತ್ವಎಂಥವರನ್ನೂ ಮೋಡಿ ಮಾಡುವಂತಿತ್ತುಎಂದರು.

ವೇದಿಕೆಯ ಮೇಲೆ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ದತ್ತಿ ದಾಸೋಹಿಗಳಾದ ಶ್ರೀ ಬಸವರಾಜ ಮಾಯಾಣಿಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಶ್ರೀ ಹೆಚ್.ಕೆ.ಉದ್ದಂಡಯ್ಯಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here