ಕಲಬುರಗಿ: ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್/ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರದಲ್ಲಿ 2020-21 ನೇ ಸಾಲಿಗೆ ಉದ್ಯೋಗ ಆಧಾರಿತ ಡಿಪ್ಲೋಮಾ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆಯ ದಿನವನ್ನು 2020ರ ಜುಲೈ 31 ರವರೆಗೆ ವಿಸ್ತರಿಸಲಾಗಿದೆ ಎಂದು ಸಿಪೆಟ್ ಸಂಸ್ಥೆಯ ನಿರ್ದೇಶಕ ಹಾಗೂ ಮುಖ್ಯಸ್ಥರಾದ ಆರ್.ಟಿ. ನಾಗರಳ್ಳಿ ಅವರು ಪ್ರಕಟಣಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್-19 ಲಾಕ್ಡೌನ್ ಪ್ರಯುಕ್ತ ಹಾಗೂ ಭಾರತ ಸರ್ಕಾರದ ಆದೇಶದನ್ವಯ ಕರ್ನಾಟಕದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ. ಮೂರು ವರ್ಷದ ಡಿಪೆÇ್ಲೀಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಡಿಪಿಟಿ), ಡಿಪೆÇ್ಲೀಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಹಾಗೂ ಎರಡು ವರ್ಷದ ಪೆÇೀಸ್ಟ್ ಗ್ರ್ಯಾಜುಯೇಟ್ ಡಿಪೆÇ್ಲೀಮಾ ಇನ್ ಪ್ಲಾಸ್ಟಿಕ್ಸ್ ಪೆÇ್ರೀಸೆಸ್ಸಿಂಗ್ ಆಂಡ್ ಟೆಸ್ಟಿಂಗ್ (ಪಿಜಿಡಿ-ಪಿಪಿಟಿ) ಕೋರ್ಸ್ಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ. (ವಿಜ್ಞಾನ) ಮತ್ತು ಬಿ.ಎಸ್.ಸ್ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದವರು/ ಹಾಜರಾದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ http://eadmission.cipet.gov.in ಅಥವಾ ದೂರವಾಣಿ ಸಂಖ್ಯೆ 0821-2510618 ಹಾಗೂ ಮೊಬೈಲ್ ಸಂಖ್ಯೆ 9480253024, 9141075968 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.