ಈರಣ್ಣ ಝಳಕಿ ಅವರ ಸರಳ ಜನ್ಮದಿನಾಚರಣೆ

0
98

ಕಲಬುರಗಿ: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಈರಣ್ಣ ಝಳಕಿ ಅವರು ಪಕ್ಷದ ಕಚೇರಿಯಲ್ಲಿ ಇಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಮುಖದಲ್ಲಿ ಸರಳ ಜನ್ಮದಿನಾಚರಣೆ ಆಚರಿಸಿಕೊಂಡರು.

ಈ ವೇಳೆಯಲ್ಲಿ ಪಕ್ಷದ ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಸಂಯೋಜಕರಾದ ಸಾಜಿದ್ ಅಲಿ ರಂಜೋಳ್ವಿ ಮಾತನಾಡಿ, ಝಳಕಿ ಪಕ್ಷದ ಡೈನಾಮಿಕ್ ನಾಯಕ, ಅವರ ನೇತೃತ್ವದಲ್ಲಿ ಕಾರ್ಯಕರ್ತರಿಗೆ ಹೊಸ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದರು.

Contact Your\'s Advertisement; 9902492681

ಪಕ್ಷದಲ್ಲಿ ಹೊಸ ಯೋಜನೆಯೊಂದಿಗೆ ಕೆಲಸ ಮಾಡುತ್ತಿರುವ ಯುವ ನಾಯಕ ಝಳಕಿ  ಜಿಲ್ಲಾಮಟ್ಟದಲ್ಲಿ ಮಿಂಚಿನ ಸಂಚಲನ ಮೂಡಿಸುತ್ತಿದ್ದಾರೆಂದು ಯುವ ಸದಸ್ಯರಾದ ಶಕೀಲ್ ಸರಡಗಿ ಅಭಿಪ್ರಾಯ ಹಂಚಿಕೊಂಡು ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚೇತನ್ ಪಾಟೀಲ್ ಗೋನಾಯಕ್, ನಯಾ ಸವೇರಾ ಸಂಘಟನೆಯ ಮೋದಿನ ಪಟೇಲ ಅಣಬಿ, ಅಮರ ಶಿರವಾಳ, ಅವೈಜ್ ಶೇಖ್, ಕಾರ್ತಿಕ್ ನಟೇಕರ್, ಶಿವರಾಜ ಕೊಳ್ಳೂರು ಸೇರಿದಂತೆ ಇನ್ನು ಹಲವಾರು ಯುವ ಕಾರ್ಯಕರ್ತರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here