ಕಲಬುರಗಿ: ಜಿಲ್ಲೆಯಲ್ಲಿ ಇತ್ತೀಚಿಗೆ ಜಾತಿ ರಾಜಕೀಯ ಜೋರಾಗುತ್ತಿದ್ದು, ವೀರಶೈವ ಲಿಂಗಾಯತ ಸಮಾಜದ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ, ಇದರಲ್ಲಿ ಲೋಕಸಭಾ ಸದಸ್ಯ ಡಾ ಉಮೇಶ ಜಾಧವ ಮುಂಚುಣಿಯಲ್ಲಿದ್ದಾರೆಂದು ಅಖೀಲ ಭಾರತ ವೀರಶೈವ ಮಹಾಸಭಾ ಯುವ ಘಟಕ ಜಿಲ್ಲಾ ಗೌರವ ಅಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಆರೋಪಿಸಿದ್ದಾರೆ.
ಇತ್ತೀಚಿಗೆ ಚಿತ್ತಾಪೂರ ಶಾಸಕ ಪ್ರೀಯಾಂಕ ಖರ್ಗೆ ಬಿ.ಜೆ.ಪಿಯವರು ರೇಟ್ ಕಾರ್ಡ ಫೀಕ್ಷ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದು, ನೀಡಿದ ಹೇಳಿಕೆ ನೂರಕ್ಕೆ ನೂರರಷ್ಟು ಸತ್ಯವಾಗಿದೆ. ದುಡ್ಡಿಗಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮುಖಾಂತರ ವರ್ಗಾವಣೆ ದಂದೆ ಬಿ.ಜಿ.ಪಿ ಕೆಲ ಪ್ರತಿನಿದಿಗಳು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ವೀರಶೈವ ಸಮಾಜ ಬಿ.ಜೆ.ಪಿ ಪಕ್ಷವನ್ನು ಬೆಂಬಲಿಸುವುದಕ್ಕೆ ಪ್ರಮುಖ ಕಾರಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮುಖನೋಡಿ ವೀರಶೈವ ಸಮಾಜ ಬಿ.ಜೆ.ಪಿ ಪಕ್ಷವನ್ನು ಬೆಂಬಲಿಸಿದೆ ಎಂದರು. ಸದ್ಯದ ಬೆಳವಣಿಗೆ ಬಗ್ಗೆ ಸಿಎಂ ಜೊತೆ ಸಮಾಜದ ಮುಖಂಡರು ದೂರವಾಣಿಯಲ್ಲಿ ಮಾತನಾಡಿ ವಿವರಿಸಿದಾರೆ ಎಂದು ತಿಳಿಸಿದ್ದಾರೆ.
ವಿಚಿತ್ರ ಎಂದರೆ ಜಾಧವ ಅವರ ಜೊತೆ ಕೆಲವು ವೀರಶೈವ ಸಮಾಜದ ಜನಪ್ರತಿ ನಿದಿಗಳು ಮತ್ತು ಪಕ್ಷದ ಮುಖಂಡರು ಸೇರಿ ಅವರ ತಾಳಕ್ಕೆ ತಕ್ಕಂತೆ ಕುಣಿದು ವೀರಶೈವ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವುದು. ವೀರಶೈವ ಸಮಾಜ ಸಹಿಸುವುದಿಲ್ಲ. ಇವರನ್ನು ಕೂಡಾ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಖೀಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಘಟಕದ ಕಾರ್ಯಕಾರಣಿ ಸಭೆ ನಡೆಯಲಿದ್ದು ಸಭೆಯಲ್ಲಿ ಈ ವಿಷಯ ಚರ್ಚಿಸಿ ಅಧ್ಯಕ್ಷರಾದ ಡಾ. ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿಗಳಾದ ಡಾ.ಶರಣ ಬಿ. ಪಾಟೀಲ್ ಅವರ ಗಮನಕ್ಕೆ ತಂದು ಮಹಾಸಭೆ ಯುವ ಘಟಕ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿ ಇಲ್ಲಿನ ಎಲ್ಲಾ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯುವ ಘಟಕ ಒತ್ತಾಯಿಸಿದೆ.