ಗುಲಬರ್ಗಾ ಲೋಕಸಭೆ ಚುನಾವಣೆ: ಮತ ಎಣಿಕೆ ಕೇಂದ್ರದ ಇಣುಕು ನೋಟ

0
303

ಕಲಬುರಗಿ: ಗುಲಬರ್ಗಾ (ಮೀಸಲು) ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆ ಕಾರ್ಯವು ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶಾಂತಿಯುತವಾಗಿ ಜರುಗಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ಉಮೇಶ ಜಾದವ ಅವರು ೯೫೪೫೨ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಘೋಷಿಸಿ ಅಭ್ಯರ್ಥಿಗೆ ಪ್ರಮಾಣಪತ್ರ ವಿತರಿಸಿದರು.

Contact Your\'s Advertisement; 9902492681

ಅಭ್ಯರ್ಥಿಗಳು ಪಡೆದ ಮತಗಳ ವಿವರ:- ಅಂಚೆ ಮತ್ತು ಇಟಿಪಿಬಿಎಸ್ ಮತಗಳು ಸೇರಿದಂತೆ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ಉಮೇಶ ಜಿ.ಜಾಧವ ಅವರು ೬೨೦೧೯೨, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ೫೨೪೭೪೦, ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಕೆ.ಬಿ.ವಾಸು ಅವರು ೧೦೮೬೫, ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿ ಡಿ.ಕೆ.ಕೊಂಕಟೆ ಕೆರೂರು ಅವರು ೧೪೮೫, ಭಾರತೀಯ ಬಹುಜನ ಕ್ರಾಂತಿ ದಳ ಅಭ್ಯರ್ಥಿ ರಾಜಕುಮಾರ ಅವರು ೯೫೧, ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ಮಹೇಶ ಲಂಬಾಣಿ ಅವರು ೧೭೮೩, ಸರ್ವ ಜನತಾ ಪಾರ್ಟಿ ಅಭ್ಯರ್ಥಿ ವಿಜಯ ಜಾಧವ ಅವರು ೬೫೦೭, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಷ್ಟ್) ಅಭ್ಯರ್ಥಿ ಎಸ್.ಎಂ.ಶರ್ಮಾ ಅವರು ೨೨೪೯, ಭಾರತೀಯ ಪೀಪಲ್ಸ್ ಪಾರ್ಟಿ ಅಭ್ಯರ್ಥಿ ಶಂಕರ ಜಾಧವ ಅವರು ೧೬೪೯, ಪಕ್ಷೇತರ ಅಭ್ಯರ್ಥಿ ಜಿ.ತಿಮ್ಮರಾಜು ಅವರು ೧೩೬೧, ಪಕ್ಷೇತರ ಅಭ್ಯರ್ಥಿ ಡಾ.ಎಂ.ಪಿ.ದಾರಕೇಶ್ವರಯ್ಯ ಅವರು ೨೦೩೬, ಪಕ್ಷೇತರ ಅಭ್ಯರ್ಥಿ ರಮೇಶ ಭೀಮಸಿಂಗ್ ಚವ್ಹಾಣ ಅವರು ೫೦೫೬ ಮತಗಳನ್ನು ಪಡೆದಿದ್ದಾರೆ. ೧೦೪೮೭ ಮತಗಳು ನೋಟಾಗೆ ಚಲಾವಣೆಯಾದರೆ, ೧೧೧೦ ಮತಗಳು ತಿರಸ್ಕೃತಗೊಂಡಿವೆ.

ಬೆಳಿಗ್ಗೆ ೮ ಗಂಟೆಯಿಂದಲೆ ವಿವಿಧ ಕಟ್ಟಡಗಳಲ್ಲಿ ವಿಧಾನಸಭಾವಾರು ಮತ ಎಣಿಕೆ ಕಾರ್ಯ ನಡೆಯಿತು. ಆರಂಭದಲ್ಲಿ ಅಂಚೆ ಮತ್ತು ಇಟಿಪಿಬಿಎಸ್ ಮತಗಳನ್ನು ಎಣೆಕೆಗೆ ತೆಗೆದುಕೊಳ್ಳಲಾಯಿತು. ತದನಂತರ ಇವಿಎಂ ಎಣಿಕೆ ಮಾಡಿ ಕೊನೆಯದಾಗಿ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾವಾರು ೫ ವಿವಿಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಇವಿಎಂ ಮತಗಳೊಂದಿಗೆ ತಾಳೆ ಹಾಕಲಾಯಿತು. ೨೨ ಸುತ್ತುಗಳಲ್ಲಿ ನಡೆದ ಮತ ಎಣಿಕೆ ಕಾರ್ಯ ಶಾಂತಿಯುತವಾಗಿ ನಡೆಯಿತು. ಎಣಿಕೆ ಕಾರ್ಯಕ್ಕೆ ವಿಶ್ವವಿದ್ಯಾಲಯದ ಆವರಣದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಗುಲಬರ್ಗಾ ಲೋಕಸಭಾ ಮತಕ್ಷೇತ್ರದ ಮತ ಎಣಿಕೆ ವೀಕ್ಷಕರಾದ ಸೋನಾಲಿ ಪೋಂಕ್ಷೆ, ಬ್ರಿಟೀಶಚಂದ್ರ ಬರ್ಮನ್ ಹಾಗೂ ಫೂಲ ಸಿಂಗ್ ಧುರ್ವ ಮತ ಎಣಿಕೆ ಕೇಂದ್ರದಲ್ಲಿಯೆ ಇದ್ದು ಸುಸೂತ್ರವಾಗಿ ಮತ ಎಣಿಕೆ ಜರುಗುವಂತೆ ನೋಡಿಕೊಂಡರು. ಸಹಾಯಕ ಚುನಾವಣಾಧಿಕಾರಿ ಟಿ.ಯೋಗೇಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here