ಸುರಪುರ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಕತಾ ಹಂದರವುಳ್ಳ ಮಹಾನಾಯಕ ಧಾರವಾಹಿ ನೋಡಲು ಸಿಗುತ್ತಿರುವುದು ನಮಗೆ ತುಂಬಾ ಸಂತೋಷದ ಸಂಗತಿಯಾಗಿದೆ.ಆದರೆ ಈ ಧಾರವಾಹಿ ಪ್ರಸಾರವಾಗುವ ಸಂದರ್ಭದಲ್ಲಿಯೆ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ಜೆಸ್ಕಾಂ ಇಲಾಖೆ ಕಡಿತಗೊಳಿಸುವುದನ್ನು ನಿಲ್ಲಿಸಬೇಕೆಂದು ಕಾಂಗ್ರೇಸ್ ಪಕ್ಷದ ಮುಖಂಡ ಮಲ್ಲು ಬಿಲ್ಲವ್ ಆಗ್ರಹಿಸಿದರು.
ನಗರದ ರಂಗಂಪೇಟೆಯಲ್ಲಿನ ಜೆಸ್ಕಾಂ ಕಚೇರಿಗೆ ತೆರಳಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ೬ ಗಂಟೆಯಿಂದ ೭ ಗಂಟೆಯ ವರೆಗೆ ಖಾಸಗಿ ವಾಹಿನಿಯೊಂದರಲ್ಲಿ ಮಹಾನಾಯಕ ಎಂಬ ಹೆಸರಲ್ಲಿ ಧಾರವಾಹಿ ಪ್ರಸಾರ ವಾಗುತ್ತದೆ.ನಾವು ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೋಡಿಲ್ಲ,ಆದರೆ ಇಂದು ಅವರ ಜೀವನದ ಕತಾಹಂದರವಿರುವ ಧಾರವಾಯಿಯ ಮೂಲಕ ಅವರ ಬದುಕಿನ ಕುರಿತು ತಿಳಿಯುವ ಅವಕಾಶ ಲಭಿಸಿದೆ.
ಇದರಿಂದ ನಾಡಿನ ಲಕ್ಷಾಂತರ ಜನರು ಕಾತುರರಾಗಿ ಕುಳಿತು ಶನಿವಾರ ಮತ್ತು ಭಾನುವಾರ ಸಂಜೆ ವೀಕ್ಷಿಸುತ್ತಾರೆ.ಆದರೆ ನಮ್ಮ ರಂಗಂಪೇಟೆ ಸೇರಿದಂತೆ ತಾಲೂಕಿನಲ್ಲಿ ಸಂಜೆ ೬ ಗಂಟೆಗೆ ವಿದ್ಯೂತ್ ಕಡಿತಗೊಳಿಸಲಾಗುತ್ತಿದೆ.ಇದರಿಂದ ಅಂಬೇಡ್ಕರರ ಅಭಿಮಾನಿಗಳಿಗೆ ತುಂಬಾ ನಿರಾಸೆಯಾಗುತ್ತಿದೆ. ಆದ್ದರಿಂದ ಈ ಮುಂದೆ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ೬ ಗಂಟೆಯಿಂದ ೭:೩೦ರ ವರೆಗೆ ವಿದ್ಯೂತ್ ಕಡಿತಗೊಳಿಸದಂತೆ ವಿನಂತಿಸಿದರು.ಒಂದು ವೇಳೆ ವಿದ್ಯೂತ್ ಕಡಿತಗೊಳಿಸಿದಲ್ಲಿ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ನಂತರ ಜೆಸ್ಕಾಂ ಎಇಇ ಈರಣ್ಣ ಹಳಿಚಂಡಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹನುಮಗೌಡ ಪಾಟೀಲ್,ದೇವಿಂದ್ರ ಸುಗೂರ,ಗೇಣೆಪ್ಪ ಬಿಲ್ಲವ್,ರಂಗಪ್ಪ ಮೇತ್ರಿ,ಮರೆಪ್ಪ ತುಪ್ಪದ್,ಚಂದು ಬಿಲ್ಲವ್,ನಾಗರಾಜ ಬಲ್ಲಿದವ್,ಆನಂದ ಕಟ್ಟಿಮನಿ,ಮಾನಪ್ಪ ಹೊಸ್ಮನಿ,ಬಲಭೀಮ ಬಿಲ್ಲವ್,ಮಲ್ಲಿಕಾರ್ಜುನ ಬಿಲ್ಲವ್,ಕೃಷ್ಣಾ ಜೀವಣಗಿ,ಹುಸೇನಸಾಬ್ ರುಕ್ಮಾಪುರ ಸೇರಿದಂತೆ ಅನೇಕ ಜನ ಅಂಬೇಡ್ಕರರ ಅಭಿಮಾನಿಗಳಿದ್ದರು.