ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳು ತಡೆ ಹಿಡಿಯದಂತೆ ಆಗ್ರಹ

0
74

ಸುರಪುರ: ರಾಜ್ಯದಲ್ಲಿ ಅತೀ ಹಿಂದುಳಿದ ಭಾಗವೆಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ಸರಕಾರಗಳು ಅಭೀವೃಧ್ಧಿಗೆ ಆದ್ಯತೆ ನೀಡಿವೆ.ಆದರೆ ಈಗ ಮಾನ್ಯ ಯಡಿಯೂರಪ್ಪನವರು ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿ ತಡೆಹಿಡಿಯುವಂತೆ ಆದೇಶ ಮಾಡಿರುವುದು ಈ ಭಾಗಕ್ಕೆ ಮಾಡುವ ಅನ್ಯಾಯವಾಗಿದೆ ಎಂದು ಅನ್ನದಾತ ಪೌಂಡೇಶನ್ ಅಧ್ಯಕ್ಷ ಹಾಗು ಕುರುಬ ಸಮುದಾಯದ ಯುವ ಮುಖಂಡ ರಂಗನಗೌಡ ಪಾಟೀಲ್ ದೇವಿಕೆರಾ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಅಖಂಡ ಕರ್ನಾಟಕದ ಅಭೀವೃಧ್ಧಿಗಾಗಿ ಹಾಗು ಕಾವೇರಿ,ಮಹಾದಾಯಿ ವಿಚಾರವಿರಲಿ. ನಾಡು ನುಡಿ ಗಡಿಯ ವಿಚಾರವಿರಲಿ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಬಂದಾಗ ಮೊದಲು ಧ್ವನಿ ಎತ್ತುವವರು ಕಲ್ಯಾಣ ಕರ್ನಾಟಕ ಭಾಗದ ಜನತೆ.ಆದರೆ ಇಂದು ಸರಕಾರ ಈ ಭಾಗದ ಅಭೀವೃಧ್ಧಿಗೆ ಕೊಡಲಿ ಪೆಟ್ಟು ನೀಡುವ ರೀತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿ ತಡೆ ಹಿಡಿಯುವಂತೆ ಆದೇಶ ಹೊರಡಿಸಿರುವುದು ನೋವಿನ ಸಂಗತಿಯಾಗಿದೆ.ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡಲೆ ಆದೇಶವನ್ನು ವಾಪಸ್ ಪಡೆದು ಈ ಭಾಗದ ಅಭೀವೃಧ್ಧಿಗಾಗಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ತುಂಬಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here