ಶಹಾಬಾದ: ಅರಿವಿನ ಬೆಳಕನ್ನು ನೀಡಿ ಉತ್ತಮ ಬದುಕನ್ನು ನಡೆಯಲು ಪ್ರೇರೇಪಿಸುವಂತೆ ಮಾರ್ಗದರ್ಶನ ಮಾಡಿದ ಗುರುವಿಗೆ ಧನ್ಯತೆ ಅರ್ಪಿಸುವುವ ದಿನವೇ ಗುರು ಪೂರ್ಣಿಮೆ ಎಂದು ನಿಜಾಮ ಬಜಾರನ ಮುಖಂಡ ವಿಠ್ಠಲ ಚವ್ಹಾಣ ಹೇಳಿದರು.
ಅವರು ನಗರದ ನಿಜಾಮ ಬಜಾರನ ಸದ್ಗುರು ಸದಾಶಿವ ಬೆಂಕಿತಾತನವರ ಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ಭಕ್ತರು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕಿರಿಯ ಪೂಜ್ಯರಾದ ಸದ್ಗುರು ಮಂಗಲಸಿಂಗ್ ಬೆಂಕಿತಾತನವರನ್ನು ಸತ್ಕರಿಸಿ ಮಾತನಾಡಿದರು.
ಬದುಕಿನುದಕ್ಕೂ ಗುರು ನಮ್ಮ ಕಷ್ಟಗಳಲ್ಲಿ, ಜೀವನುದಕ್ಕೂ ನಮ್ಮ ಬದುಕಿನ ಶ್ರೇಯಸ್ಸಿಗೆ ಮಾರ್ಗದರ್ಶನ ಮಾಡಿ ಅರಿವಿ ಮಾರ್ಗ ತೋರುತ್ತಾರೆ. ಅವರಿಗೆ ನಾವುಬೆಲೆ ಕಟ್ಟಲು ಸಾಧ್ಯವಿಲ್ಲ.ಆದ್ದರಿಂದ ಸನಾತನ ಕಾಲದಿಂದಲೂ ಗುರುವಿಗೆ ಧನ್ಯತೆ ಅರ್ಪಿಸುವ ಕಾರ್ಯ ನಡೆಯುತ್ತಿದೆ.ಅದುವೇ ಗುರು ಪೂರ್ಣಿಮೆ ಎಂದು ಹೇಳಿದರು.
ಬೆಳಗ್ಗೆ ಬೆಂಕಿತಾತನವರ ಮೂರ್ತಿಗೆ ಮಹಾ ಅಭಿಷೇಕ, ಬಿಲ್ವಾರ್ಚನೆ ನಡೆಯಿತು. ಸಂಜೆ ಸದ್ಗುರು ಸದಾಶಿವ ಬೆಂಕಿತಾತನವರ ಪಾದುಕೆಗೆ ವಿಶೇಷ ಪೂಜೆ, ಅರ್ಚನೆ ನಡೆಸಲಾಯಿತು. ನಂತರ ನಡೆದ ಸಮಾರಂಭದಲ್ಲಿ ಕಿರಿಯ ಪೂಜ್ಯರಾದ ಮಂಗಲಸಿಂಗ್ ಠಾಕೂರ ಬೆಂಕಿತಾತನವರಿಗೆ ಭಕ್ತರು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಭಕ್ತರಾದ ಗುಂಡೇರಾವ ಮಾಣಿಕ, ಶಂಭುಲಿಂಗ ನಾಯ್ಕಲ್, ದೇವೆಂದ್ರ ಬಾಗೋಡಿ, ಭೀಮರಾವ ಮದ್ರಿ, ಡಾ.ವೆಂಕಟೇಶ ನಾಯ್ಕೊಡಿ, ಸುನೀಲ ಭಗತ್, ಸಿದ್ದಲಿಂಗ ಶಿರಗೂಂಡ, ವಿಶ್ವನಾಥ ರಾಠೋಡ, ಕೀಶನ್ ಪವಾರ, ಬಾಬುಮಿಯ್ಯಾ ಚನ್ನವೀರ ಇತರರು ಇದ್ದರು.