ಕಲಬುರಗಿ: ಕೊರೊನಾ ನಿಯಂತ್ರಣ ಹೆಸರಿನಲ್ಲಿ ರಾಜ್ಯ ಸರಕಾರ ಕೋಟಿ ರೂಪಾಯಿಗಳ ಅವ್ಯವಹಾರದ ಬಗ್ಗೆ ವಿಶೇಷ ತ೦ಡ ರಚಿಸಿ ತನಿಖೆಗೆ ನಡೆಸಬೇಕೆಂದು ಎಸ್ಡಿಪಿಐ ಪಕ್ಷದ ಜಿಲ್ಲಾ ಘಟಕ ಸಮಿತಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಈ ವೇಳೆಯಲ್ಲಿ ಪ್ರತಿಭಟನಾ ನೀರತ ಕಾರ್ಯಕರ್ತರು ರಾಜ್ಯ ಸರಕಾರದ ಆರೋಗ್ಯ. ಕಂದಾಯ ಸಚಿವರು ನೈತಿಕಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸೈಯದ್ ದಸ್ತಗೀರ್, ಅಬ್ದುಲ್ ರಹೀಮ್ ಪಟೇಲ್. ಮೊಹಮ್ಮದ್ ಮೊಹಸೀನ್, ಸೈಯದ್ ಅಲೀಮ್ ಇಲಾಹಿ, ಡಾ.ರಿಜ್ಜಾನ್ ಅಷ್ಮದ್, ಸೈಯದ್ ಜಾಕೀರ್, ಫಹಿಮ್ ಅಹ್ಮದ್, ಶಕೀಲ್ ಪಾಶಾ, ಮಿನಾಜೊದ್ದೀನ್ ಸೇರಿದಂತೆ ಮುಂತಾದವರು ಇದ್ದರು.