ಶಹಾಪುರ: ಡಾ.ಬಿ.ಆರ್. ಅಂಬೇಡ್ಕರವರ ಮುಂಬೈ ನಗರದ ದಾದರನ ಮೂರನೆಯ ಮಹಡಿಯ ಐತಿಹಾಸಿಕ ಆವರಣಕ್ಕೆ ಅಪರಿಚಿತ ವ್ಯಕ್ತಿಗಳು ನುಗ್ಗಿ ಕಲ್ಲಿನಿಂದ ಲೇಖನಗಳು, ಸಿ.ಸಿ.ಕ್ಯಾಮರಾಗಳು,ಗಾಜಿನ ಫಲಕಗಳು ಮತ್ತು ಹೂವಿನ ಮಡಿಕೆಗಳು ಒಡೆದು ಹಾಕಿ ಪರಾರಿಯಾಗಿದ್ದಾರೆ.
ಈ ಘಟನೆಯನ್ನು ಖಂಡಿಸಿ ಅಂಬೇಡ್ಕರ ಸ್ವಾಭಿಮಾನಿ ಸೇನೆಯ ವತಿಯಿಂದ ಭಾರತ ರತ್ನ, ಸಂವಿಧಾನ ಶಿಲ್ಪಿಯ ಪುಸ್ತಕ ಬಂಡಾರ ಸಂರಕ್ಷಿಸುವುದು ಭಾರತ ಸರ್ಕಾರದ ಕರ್ತವ್ಯವಾಗಿರುತ್ತದೆ. ಆದ ಕಾರಣ ಸರ್ಕಾರ ಕೂಡಲೇ ಅವರನ್ನು ಬಂಧಿಸಿ ಅಂತಹ ದೇಶ ದ್ರೋಹಿಗಳನ್ನು ಗಡಿಪಾರು ಮಾಡಬೇಕು ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ವತಿಯಿಂದ ರಾಜ್ಯದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಶಹಾಪುರದ ತಹಸೀಲ್ದಾರರ ಮೂಲಕ ಪ್ರಧಾನಮಂತ್ರಿ ಹಾಗೂ ಮಹಾರಾಷ್ಟ್ರ ಸರ್ಕಾರದ ಗೃಹಸಚಿವ ಅನಿಲ್ ದೇಶಮುಖ ಅವರಿಗೆ ಮನವಿ ಮಾಡಲಾಗುವುದು.
ಇದೆ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷರಾದ ಅಖಂಡೇಶ್.ಡಿ.ಬಿರನೂರ, ಉಪಾಧ್ಯಕ್ಷ ದಿಲೀಪ್ ಎಮ್. ಪರಸಾಪುರ, ದಲಿತ ಮುಖಂಡರಾದ ನಾಗರಾಜ ವಾಡಗೇರಾ, ನಿಂಗರಾಜ ರಾಮೋಜಿ, ಭಿಮಾಶಂಕರ್ ಹೈಯಾಳ್ ಇತರರು ಉಪಸ್ಥಿತರಿದ್ದರು.