ಕಲಬುರಗಿ: ಹೆಚ್ಚಿನ ದರದಲ್ಲಿ ತಂಪು ಪಾನೀಯ/ ಮಿನಿರಲ್ ವಾಟರ್ ಬಾಟಲ್‌ಗಳನ್ನು ರಿಟೇಲ್ ಅಂಗಡಿಗಳು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಯಾದ್ಯಂತ ಒಟ್ಟು ೩೪ ಅಂಗಡಿಗಳನ್ನು ತಪಾಸಣೆ ಮಾಡಿ ೧೦ ಜನ ಮಾರಾಟಗಾರರ ಮೇಲೆ ಮೊಕದ್ದಮೆ ಹೂಡಿ ಒಟ್ಟು ೪೪,೫೦೦ ರೂ.ಗಳ ಅಭಿಸಂಧಾನ ಶುಲ್ಕ ವಸೂಲಿ ಮಾಡಲಾಗಿದೆ ಎಂದು ಕಲಬುರಗಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕಸಾಬ ಲಾಡಜಿ ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಹಾಗೂ ವಿವಿಧ ಸಂಘಟನೆಗಳ ದೂರಿನನ್ವಯ ಕಾನೂನು ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಮೇ ೧೫ರಿಂದ ೨೨ರವರೆಗೆ ಜಿಲ್ಲೆಯಾದ್ಯಂತ ಕಾರ್ಯಾಚರಣೆ ಮಾಡಿ ಈ ಅಭಿಸಂಧಾನ ಶುಲ್ಕವನ್ನು ವಸೂಲಿ ಮಾಡಲಾಗಿದೆ. ಇಂತಹ ಪ್ರಕರಣ ಕಂಡು ಬಂದಲ್ಲಿ ಗ್ರಾಹಕರು ಜಾಗೃತಗೊಂಡು ಕಲಬುರಗಿ ಕಾನೂನು ಮಾಪನಶಾಸ್ತ್ರ ಇಲಾಖೆಯ ದೂರವಾಣಿ ಸಂಖ್ಯೆ 08472-220443ಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.