ಕಲಬುರಗಿ: ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಜೀವಿತಾವಧಿಯಲ್ಲಿ ನಿರ್ಮಿಸಿದ ಮುಂಬೈಯಲ್ಲಿರುವ ’ರಾಜಗ್ರಹ’ ಮನೆಯ ಮೇಲೆ ಕೆಲವು ಕಿಡಿಗೇಡಿ ದುಷ್ಕರ್ಮಿಗಳು ದಾಂದಲೆ ಮಾಡಿ ಮನೆಗೆ ಹಾನಿ ಮಾಡಿರುವುದು ಖಂಡನೀಯ. ಹೀಗಾಗಿ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಬಹುಜನ ವಾಲೆಂಟರಿ ಫೋರ್ಸ್ ತಾಲೂಕು ಸಮಿತಿ ಅಧ್ಯಕ್ಷ ಯಲಿಂಗ ದಂಡಿನ್ ಚಿಮ್ಮಾಇದಯಿ ಒತ್ತಾಯಿಸಿದ್ದಾರೆ.
ಜು.೭ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ಪುಸ್ತಕಗಳು ಸಂಗ್ರಹಿಸಲು ನಿರ್ಮಿಸಿದ ಮನೆಯ ಮೇಲೆ ಮುಂಬಯಿನಲ್ಲಿರುವ ದುಷ್ಕರ್ಮಿಗಳು ದಾಂಧಲೆ ನಡೆಸಿ ಹಾಗೂ ಮನೆಗೆ ಹಾಕಿರುವ ಕಿಟಕಿಗಳು ಹೂವಿನ ಕುಂಡಗಳು ಸಿಸಿಟಿವಿ ಕ್ಯಾಮೆರಾಗಳು ಮನೆ ಇನ್ನಿತರ ಸಾಮಾನುಗಳು ಒಡೆದು ಚೂರುಚೂ ಮಾಡಿದ್ದಾರೆ. ಹೀಗಾಗಿ ಈ ಘಟನೆಗೆ ಸಂಬಂಧಿಸಿದ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿ ದೇಶದಿಂದ ಗಡಿಪಾರು ಮಾಡಬೇಕು.
ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಆಗದಂತೆ ನೋಡಿಕೊಳ್ಳಬೇಕು. ಮತ್ತು ಡಾ. ಬಿ.ಆರ್.ಅಂಬೇಡ್ಕರ್ ವಂಶಸ್ಥರಿಗೆ ಸರಕಾರದಿಂದ ಸೂಕ್ತವಾಗಿ ಭದ್ರತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.