ಅಂಬೇಡ್ಕರ್‌ರ ರಾಜಗೃಹದ ದಾಳಿಕೋರರಿಗೆ ದೇಶದಿಂದ ಗಡಿಪಾರಿಗೆ ಆಗ್ರಹ

0
59

ಕಲಬುರಗಿ: ಮಹಾರಾಷ್ಟ್ರದ ಮುಂಬೈನ ಮಹಾನಗರದ ದಾದರ್‌ದಲ್ಲಿರುವ ವಿಶ್ವರತ್ನ, ಸಂವಿಧಾನ ಶಿಲ್ಪಿ ದೇಶ ಕಂಡ ಮಹಾನಾಯಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಜೀವಿತಾವಧಿಯಲ್ಲಿ ವಾಸವಾಗಿದ್ದ ರಾಜಗೃಹದ ಮನೆಯ ಕಿಟಕಿಯ ಗ್ಲಾಸ ಒಡೆದು, ಹೂವಿನ ಕುಂಡಗಳನ್ನು ಎತ್ತಿ ಬಿಸಾಡಿ ಮತ್ತು ಬಾಬಾ ಸಾಹೇಬರ ಅಮೂಲ್ಯ ಕೃತಿಗಳನ್ನು ನಾಶಗೊಳಿಸಲು ಯತ್ನಿಸಿ, ಹೀನ ಕೃತ್ಯವನ್ನು ಎಸಗಿದ ಕೀಡಿಗೇಡಿಗಳನ್ನು ಕೂಡಲೆ ಪತ್ತೆಹಚ್ಚಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ರಿಪಬ್ಲಿಕನ್ ಯೂತ್ ಫೆಡರೇಷನ್ ಸಂಘಟನೆಯ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಸ್ಥಾಪಕ ಅಧ್ಯಕ್ಷ ಹನುಮಂತ ಇಟಗಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾಜಿ ಮಹಾಪೌರ ಸೋಮಶೇಕರ ಮೇಲಿನಮನಿ, ಯುವ ಮುಖಂಡ ವಿಶ್ವನಾಥ ಕರ್ನಾಡ, ಸಂತೋಷ ಮೇಲಿನಮನಿ, ನಾಗೇಂದ್ರ ಕೆ. ಜವಳಿ, ಧರ್ಮಣ್ಣ ಕೋಣೆಕರ್, ನಗರಾಧ್ಯಕ್ಷ ಶಿವಕುಮಾರ ಜಾಲವಾದ, ಡಾ. ಅನೀಲ ಟೆಂಗಳಿ, ರಾಣು ಮುದ್ದನಕರ್, ಸಿದ್ಧಾರ್ಥ ಚಿಂಚನಸೂರ, ಸಿದ್ಧಾರ್ಥ ಸಾಳುಂಕೆ, ಸತೀಶ ಮಾಲೆ, ಅಂಬರೀಶ ಅಂಬಲಗಿ, ಗೌತಮ ಸರಸಂಬಾ, ಮಿಲಿಂದ ಸನಗುಂದಿ, ವಿಜಯ ಸಿಂಧೆ, ವಿನೋದ ಕಾಂಬಳೆ, ಪ್ರಕಾಶ ಭಾಲೆ, ಸಂಘಾನಂದ ರಂಗಾರೆ, ನಾಗಭೂಷಣ ಹರಳಕಟ್ಟಿ, ರವಿ ಡೋಣಿ, ರತನ್ ಕನ್ನಡಗಿ, ಅರುಣ ಸಾಗರ ಅಜಯ ಕೋರಳ್ಳಿ ಸುನೀಲ ವಗ್ಗನ, ಶ್ರವಣಕುಮಾರ ಖಜನ್‌ದಾರ್, ಅನೀಲ ಸಿಂಗೆ, ಸುದರ್ಶನ ದೇಗಾಂವ, ಮಹೇಶ ಬೆಡ್ಜುರ್ಗಿ, ಅನೀಲ ದೇವರಮನಿ, ಅನೀಲ ಸಾಜರೆ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಅವರು, ದೇಶದಲ್ಲಿ ಮನುವಾದಿಗಳು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ಶ್ರೇಷ್ಟವಾದ ಸಂವಿಧಾನವನ್ನು ಬರೆದುಕೊಟ್ಟು ಸರ್ವರು ಸಮಾನರು ಸರ್ವರಿಗೂ ಸಮಪಾಲು ಎಂದು ಸಂವಿಧಾನದ ಅಡಿಯಲ್ಲಿ ಹಕ್ಕನ್ನು ಕೊಟ್ಟು ಎಲ್ಲ ಜಾತಿಯ ಜನರು ಶಾಂತಿ ನೆಮ್ಮದಿಯಿಂದ ಬಾಳಲು ಕಾನೂನನ್ನು ರಚಿಸಿದರು.

ಅದಕ್ಕಾಗಿ ಮನುವಾದಿಗಳು ಸಹಿಸಲಾಗದೆ ಪದೆ ಪದೆ ಮೂರ್ತಿಗೆ ಅವಮಾನ ಮಾಡುವುದು, ಅವರ ಮನೆಯ ರಾಜ ಗೃಹದ ಮೇಲೆ ಹಲ್ಲೆಮಾಡಿ ಕಿಟಕಿಯ ಗ್ಲಾಸ್ ಒಡೆದುಹಾಕಿ ಹೂವಿನ ಕುಂಡಗಳು ಎತ್ತಿ ಚೆಲ್ಲಾಪಿಲ್ಲಿಯಾಗಿ ಬಿಸಾಡಿ, ರಾಜ ಗೃಹದಲ್ಲಿರುವ ಡಾ. ಬಾಬಾಸಾಹೇಬ್ ಅಂಬೆಡ್ಕರ್ ಅವರ ಅಮೂಲ್ಯವಾದ ಕೃತಿಗಳನ್ನು ನಾಶಪಡಿಸಲು ಯತ್ನಿಸಿ ಕ್ರೌರ್ಯವನ್ನು ಮೆರೆದಂತಹ ನೀಚ ಮನುವಾದಿ ದೇಶ ದ್ರೋಹಿಗಳನ್ನು ಕೂಡಲೆ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.

ಕುಕೃತ್ಯದ ಹಿಂದಿರುವ ಕಾಣದ ಕೈಗಳನ್ನು ಪತ್ತೆಹಚ್ಚಿ ಅವರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕು. ವಿಳಂಬ ನೀತಿ ಅನುಸರಿಸಿದರೆ ರಾಷ್ಟ್ರದಾದ್ಯಂತ ಉಗ್ರ ಚಳುವಳಿ ನಡೆಸಬೇಕಾಗುತ್ತದೆಂದು ಅವರು ಎಚ್ಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here