ಅಂಬೇಡ್ಕರ ಮನೆ ಮೇಲೆ ದಾಳಿ ಮಾಡಿದವರನ್ನು ಬಂಧಿಸಿ- ಮರೆಪ್ಪ ಹಳ್ಳಿ

0
90

ಶಹಾಬಾದ: ಡಾ. ಬಿ.ಆರ್.ಅಂಬೇಡ್ಕರ ಅವರ ಮನೆಯ ಮೇಲೆ ದಾಳಿ ಮಾಡಿದವರ ಬಂಧನಕ್ಕೆ ಒತ್ತಾಯಿಸಿ ಸೋಮವಾರ ತಾಲೂಕಾ ದಸಂಸ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, ದೇಶದಲ್ಲಿ ದಿನನಿತ್ಯವೂ ಕೂಡ ದಲಿತರ ಮೇಲೆ ಹಲ್ಲೆಗಳು ಕೊಲೆಗಳು ನಡೆಯುತ್ತಿವೆ ಅಲ್ಲದೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಬದುಕಿದ ಮುಂಬೈನ ದಾದರನಲ್ಲಿರುವ ಮನೆಯ ಮೇಲೆ ದಾಳಿ ಮಾಡಿರುವ ಕೋಮುವಾದಿಗಳು ಮನೆಯ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ ಅಲ್ಲದೆ ಮನೆಯ ಹಿಂಬದಿಯ ಗ್ರಂಥಾಲಯವನ್ನು ಕೂಡ ಧ್ವಂಸಗೊಳಿಸಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.


ತಾಲೂಕ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಪೂಜಪ್ಪ ಮೇತ್ರೆ ಮಾತನಾಡಿ, ಜಗತ್ತಿಗೆ ಮಾದರಿಯಾಗುವ ಸಂವಿಧಾನವನ್ನು ನಮ್ಮ ದೇಶಕ್ಕೆ ಕೊಡುಗೆ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ನಿವಾಸವನ್ನು ಒಂದು ಪವಿತ್ರ ಸ್ಥಳವಾಗಿ ಕಾಣುತ್ತೇವೆ.ಆದರೆ ಕೆಲವು ದುಷ್ಕರ್ಮಿಗಳನ್ನು ಮನೆಯ ಮೇಲೆ ದಾಳಿ ಮಾಡಿ ಹೇಯ ಕೃತ್ಯ್ಕ ಎಸಗಿರುವುದು ಇಡಿ ದೇಶವೆ ತಲೆತಗ್ಗಿಸುವ ಸಂಗತಿಯಾಗಿದೆ.ಈ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸದೆ ಸಕರ್ಾರ ನಿದ್ದೆ ಮಾಡುತ್ತಿದೆ.ಅಂಬೇಡ್ಕರರನ್ನು ಅವಮಾನಿಸಿದರೆ ಅದು ದೇಶಕ್ಕೆ ಅಪಮಾನಿಸಿದಂತಾಗಲಿದೆ. ಆದ್ದರಿಂದ ಅಂಬೇಡ್ಕರರ ರಾಜಗೃಹದ ಮೇಲೆ ದಾಳಿ ಮಾಡಿದವರನ್ನು ಕೂಡಲೆ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ತಾಲೂಕ ಸಂಚಾಲಕ ಶಿವರುದ್ರ ಗಿರೆನೂರ, ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರಿ ಮಾತನಾಡಿದರು.
ಮಲ್ಲಣ್ಣ ಮಸ್ಕಿ, ಶರಣಪ್ಪ ಹಿರೇಮನಿ, ಶಿವಮೂರ್ತಿ ಪಟ್ಟೇದಾರ, ಮಲ್ಲಿಕಾರ್ಜುನ ಹಳ್ಳಿ, ಹೊನ್ನಪ್ಪ ಖನ್ನಾ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here