ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಅರ್ಭಟ ಮುಂದು ವರೆದಿದ್ದು, ಇಂದು ಮತ್ತೆ 89 ಕೋಂಕು ದೃಢಪಟ್ಟಿವೆ. 29 ಪೀಡಿತರು ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಕಲಬುರಗಿಯಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶರತ್ ಬಿ 13 ರಿಂದ 18 ವರೆಗೆ ಲಾಕ್ ಡೌನ್ ಘೋಷಣೆಗೆ ರಾಜ್ಯ ಸರಕಾರಕ್ಕೆ ಅನುಮತಿ ಕೋರಿದ್ದು, ಸದ್ಯದ ವರೆಗೆ ಸರಕಾರದಿಂದ ಈ ಕುರಿತು ಯಾವುದೇ ಅಧಿಕೃತ ಆದೇಶ ಬಂದಿಲ್ಲ.
ಜಿಲ್ಲೆಯಲ್ಲಿ ಬಹುತೇಕ ಲಾಕ್ ಡೌನ್ ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿದ್ದು, ಇನ್ನೂ ಅಧಿಕೃತ ಆದೇಶ ಹೋರ ಬೀಳಬೇಕಿದೆ.