ಕಲಬುರಗಿ: ಮಹಾಮಾರಿ ಕೊರೊನಾ ದೇಶವ್ಯಾಪ್ತಿ ಸಂಪೂರ್ಣ ಹರಡಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ತನ್ನ ಜನ್ಮದಿನವನ್ನು ಆಚರಿಸದಿರಲು ರಾಜ್ಯ ಸಭೆ ಸದಸ್ಯ, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಕೊರೊನಾ ಹರಡುತ್ತಿರುವುದನ್ನು ತಡೆಯಲು ನಾವು ಸಿದ್ಧರಿರಬೇಕಿದೆ. ಲಾಕ್ ಡೌನ್ ಜಾರಿಯಲಿರುವ ಕಾರಣ ಕಾರ್ಯಕರ್ತರು ಹುಟ್ಟುಹಬ್ಬ ಆಚರಿಸದೇ, ಸುತ್ತಮುತ್ತಲಿನ ಸಂತ್ರಸ್ತರಿಗೆ ಕೈಲಾದಷ್ಟು ಸಹಾಯ ಮಾಡಿ ನೆರವಾಗಬೇಕೆಂದು ಕರೆ ನೀಡಿ ಅಭಿಮಾನಿಗಳಿಗೆ ಖರ್ಗೆ ಮನವಿ ಮಾಡಿದ್ದಾರೆ.