ಶಹಾಬಾದ:ತಾಲೂಕಿನ ಪ್ರೌಢಶಾಲೆಯ ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಪರೀಕ್ಷಾ ಮಂಡಳಿಯ ಆದೇಶದ ಮೇರೆಗೆ ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎರಡು ಮಿನಿ ಬಸ್ ವ್ಯವಸ್ಥೆ ಮಾಡುವ ಮೂಲಕ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಕೊರೊನಾ ವೈರಸ್ ಹರಡದಿರುವಂತೆ ಜುಲೈ 13 ರಿಂದ ಪ್ರಾರಂಭವಾದ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಚಿತ್ತಾಪೂರ ಹಾಗೂ ಶಹಾಬಾದನ ತಾಲೂಕಿನ ಶಿಕ್ಷಕರಿಗೆ ಮೌಲ್ಯಮಾಪನ ಕೇಂದ್ರಕ್ಕೆ ಹೋಗಿ ಬರಲು ತೊಂದರೆಯಾಗದಂತೆ ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ. ಒಂದು ಕಡೆ ಕೊರೊನಾ ಭೀತಿ, ಇನ್ನೊಂದು ಲಾಕ್ಡೌನ್ ಮತ್ತೊಂದೆಡೆ ಸತತವಾಗಿ ಬೀಳುತ್ತಿರುವ ಮಳೆಯಿಂದ ಎಲ್ಲಿಲ್ಲದ ತೋದರೆಗೆ ಈಡಾಗುವುದು ತಪ್ಪಿದೆ. ಚಿತ್ತಾಪೂರದಿಂದ ಕಲಬುರಗಿ ನಗರಕ್ಕೆ ಒಂದು ವೇಳೆ ಮಿನಿ ಬಸ್ ಹೋಗಲು ಅನುಕೂಲ ಮಾಡಿಕೊಡ್ಡಿದ್ದರೇ ಶಿಕ್ಷಕರು ಮೌಲ್ಯಮಾಪನ ಕೇಂದ್ರಕ್ಕೆ ಹೋಗಲು ಪರದಾಡಬೇಕಾಗುತ್ತಿತ್ತು.ಚಿತ್ತಾಪೂರದಿಂದ ಶಹಾಬಾದ ಮೂಲಕ ಕಲಬುರಗಿಯ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಕರನ್ನು ದಿನಾಲೂ ಕರೆದುಕೊಂಡು ಹೋಗುತ್ತಿದ್ದಾರೆ. ಬಸ್ ಮೂಲಕ ಬರುವ ಶಿಕ್ಷಕರ ಹೆಸರನ್ನು ಮೊದಲೇ ನೊಂದಾಯಿಸಲಾಗಿತ್ತು. ಅಂತಹ ಶಿಕ್ಷಕರು ಇದರ ಸಂಪೂರ್ಣ ಲಾಭ ಪಡೆದಿದ್ದಾರೆ.ಕೆಲವು ಶಿಕ್ಷಕರು ಬಸ್ ಮೂಲಕ ಬರುವ ಆಸಕ್ತಿ ತೋರದೇ ಬೈಕ್ ಮೂಲಕ ಬರುವ ಸಮಯದಲ್ಲಿ ಮಳೆಯಲ್ಲಿ ಸಿಕ್ಕು ತೊಂದರೆ ಅನುಭವಿಸಿದ್ದಾರೆ.ಅಲ್ಲದೇ ಲಾಕ್ಡೌನ್ ಸಮಯದಲ್ಲಿ ಪೊಲೀಸರ ಕಿರಿಕಿರಿಗೆ ಒಳಗಾಗಿದ್ದಾರೆ. ಇಂತಹ ಶಿಕ್ಷಕರು ಬಸ್ನಲ್ಲಿ ಬಂದಿದ್ದರೇ ಆರಾಮವಾಗಿ ಬರುತ್ತಿದ್ದೆವು.ಆದರೆ ಆ ಅವಕಾಶದಿಂದ ವಂಚಿತರಾಗಿದ್ದೆವೆ ಎಂದು ಅಳಲು ತೋಡಿಕೊಂಡಿದ್ದಾರೆ.ಅಲ್ಲದೇ ಬಸನಲ್ಲಿ ಸಂಚರಿಸುವ ಅವಕಾಶ ಮಾಡಿಕೊಟ್ಟ ಶಿಕ್ಷಕರಿಗೆ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲವೆಂದು ಪರೀಕ್ಷಾ ಮಂಡಳಿ ಸೂಚಿಸಿದೆ. ಆದರೆ ಬಸ್ನ ವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಟ್ಟ ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ರಮಕ್ಕೆ ಶಿಕ್ಷಕರು ಹರ್ಷವ್ಯಕ್ತಪಡಿಸಿದ್ದಾರೆ.
ಕೊರೊನಾ ಹಾವಳಿ ಇರುವುದರಿಂದ ಶಿಕ್ಷಕರಿಗೆ ಬಸ್ಸಿನ್ ಅನುಕೂಲ ಮಾಡಿಕೊಟ್ಟಿದ್ದರಿಂದ ಮಳೆ, ಮತ್ತು ಕೊರೊನಾ ಹಾವಳಿಯಿಂದ ತಪ್ಪಿಸಿಕೊಂಡಿದ್ದೆವೆ.ಬಸ್ನಲ್ಲಿ ಕೇವಲ ಹನ್ನೇರಡು ಜನರು ಇದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳು ಸಹಕಾರಿಯಾಗಿದೆ. ಇದೇ ರೀತಿ ಪ್ರತಿ ವರ್ಷ ಮಾಡಿದರೇ ಶಿಕ್ಷಕರಿಗೆ ಬಹಳ ಅನುಕೂಲವಾಗುತ್ತದೆ- ಚಂದ್ರಾಮ, ಛತ್ರು, ದತ್ತಪ್ಪ ಕೋಟನೂರ್ ಶಿಕ್ಷಕರು.
ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಪರೀಕ್ಷಾ ಮಂಡಳಿಯ ಆದೇಶದ ಮೇರೆಗೆ ಮಿನಿ ಬಸ್ ವ್ಯವಸ್ಥೆ ಮಾಡಿದ್ದೆವೆ. ಆದರೆ ಬಹಳಷ್ಟು ಶಿಕ್ಷಕರು ಬಸನಲ್ಲಿ ಬರಲು ಹೆಸರು ನೊಂದಾಯಿಸಿಕೊಂಡಿಲ್ಲ. ನೊಂದಾಯಿಸಿದ ಶಿಕ್ಷಕರು ಬಹಳ ಅನುಕೂಲ ಪಡೆದುಕೊಂಡಿದ್ದಾರೆ- ಶಂಕ್ರಮ್ಮ ಢವಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ತಾಪೂರ.