ಮೇ 29 ರಂದು ವಿವಿಧ ಹುದ್ದೆಗಳಿಗೆ ಕಲಬುರಗಿಯಲ್ಲಿ ನೇರ ಸಂದರ್ಶನ

0
320

ಕಲಬುರಗಿ: ಕೆಳಕಂಡ ಕಂಪನಿಗಳಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇದೇ ಮೇ 29 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕಲಬುರಗಿ ಸ್ವತಂತ್ರ ಮೈಕ್ರೋ ಫೈನಾನ್ಸ್‌ನಲ್ಲಿ ಬ್ರ್ಯಾಂಚ ಆಪರೇಷನ್ ಮ್ಯಾನೇಜರ್, ಸ್ವತಂತ್ರ ರಿಸ್ಕ್ ಆಫೀಸರ್, ಸ್ವತಂತ್ರ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾಗಿರಬೇಕಲ್ಲದೇ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕಲಬರಗಿ ಎಕೈಡ್ ಲೈಫ್‌ನಲ್ಲಿ ಸೇಲ್ಸ್ ಮ್ಯಾನೇಜರ್, ಫೈನಾನ್‌ಶಿಯಲ್ ಕನ್ಸಲ್‌ಟಂಟ್ ಮತ್ತು ಅಡ್ವೈಸರ್ ಹುದ್ದೆಗಳಿಗೆ ಪಿಯುಸಿ ಮತ್ತು ಯಾವುದೇ ಪದವಿ ಪಾಸಾಗಿರಬೇಕು.

Contact Your\'s Advertisement; 9902492681

ಬೆಂಗಳೂರಿನ ಲುಮ್ಯಾಕ್ಸ್‌ನಲ್ಲಿ ೫೦ ಆಪರೇಟರ್ ಹುದ್ದೆಗಳಿಗೆ ಡಿಪ್ಲೋಮಾ (ಮೆಕ್ಯಾನಿಕಲ್, ಅಟೋಮೊಬೈಲ್, ಇ ಆಂಡ್ ಸಿ, ಇ ಆಂಡ್ ಇ) ಪಾಸಾಗಿರಬೇಕು. ಬೀದರಿನ ಸಾಹಿತಿ ಡ್ರಗ್ಸ್ ಆಂಡ್ ಇಂಟರ್‌ಮಿಡಿಯೆಟ್ಸ್ ಪೈ.ಲಿ.ನಲ್ಲಿ ಟ್ರೇನಿ ಕೇಮಿಸ್ಟ 20 ಹುದ್ದೆಗಳಿಗೆ ಬಿ.ಎಸ್ಸಿ, (ಕೇಮಿಸ್ಟ್ರಿ)/ ಬಿ.ಫಾರ್ಮಸಿ ಪಾಸಾಗಿರಬೇಕು. ಬೆಂಗಳೂರಿನ ಸ್ವಿಗ್ಗಿಯಲ್ಲಿ 400 ಡೆಲಿವರಿ ಬಾಯ್ಸ್ ಹುದ್ದೆಗಳಿಗೆ 8ನೇ ತರಗತಿ ಮೇಲ್ಟಟ್ಟು ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ 18 ರಿಂದ 35 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳು ತಮ್ಮ (ರೆಸ್ಯೂಮ್) ಬಯೋಡಾಟಾ ಹಾಗೂ ಆಧಾರ ಕಾರ್ಡ್ ದಾಖಲಾತಿಗಳೊಂದಿಗೆ ಮೇಲ್ಕಂಡ ದಿನದಂದು ಸಂದರ್ಶನಕ್ಕೆ ಹಾಜರಾಗಬೇಕು. ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದೋಗ್ಯ ವಿನಿಮಯ ಕಚೇರಿ ಅಥವಾ ಕಚೇರಿ ದೂರವಾಣಿ ಸಂಖ್ಯೆ 08472-274846ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here