ಕಾಂಗ್ರೆಸ್, ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರಿಂದ 650 ಬೆಡ್ ಗಳ ರವಾನೆ

0
116

ಕಲಬುರಗಿ: ಕೊವೀಡ್ 19 ಸೋಂಕು ವ್ಯಾಪಿಸಿದ ಪರಿಣಾಮ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಕಲಬುರಗಿಯ ಜಿಮ್ಸ್, ಇಎಸ್ಬೈಸಿ ಹಾಗೂ ರಾಯಚೂರಿನ ರಿಮ್ಸ್ ಹಾಗೂ ಒಪೆಕ್ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ತಲೆದೋರಿದೆ.‌ ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಸಮುದಾಯ ಭವನಗಳನ್ನು ಛತ್ರಗಳನ್ನೂ ಹಾಗೂ ಕ್ರೀಡಾಂಗಣಗಳನ್ನೂ ಐಸೋಲೇಶನ್ ವಾರ್ಡ್ ಗಳನ್ನು ಪರಿವರ್ತಿಸಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಹಕಾರಿಯಾಗುವಂತೆ ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ವತಿಯಿಂದ 650 ಬೆಡ್ ಗಳನ್ನು ರವಾನಿಸಲಾಗಿದೆ.

ಬೆಂಗಳೂರಿನಲ್ಲಿ ಇಂದು ಬೆಡ್ ಗಳನ್ನು ರವಾನಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಹಸಿರು‌ ನಿಶಾನೆ ತೋರಿಸಿದರು. ಒಟ್ಟು 650 ಬೆಡ್ ಗಳಲ್ಲಿ 550 ಬೆಡ್ ಗಳು ಕಲಬುರಗಿ ಗೆ ಹಾಗೂ 100 ಬೆಡ್ ಗಳು ರಾಯಚೂರಿಗೆ ಇನ್ನೆರಡು ದಿನಗಳಲ್ಲಿ ತಲುಪಲಿವೆ.

Contact Your\'s Advertisement; 9902492681

ರಾಜ್ಯದಲ್ಲಿ ಮೊಟ್ಟ ಮೊದಲಬಾರಿಗೆ ಪರಿಸರ ಸ್ನೇಹಿ ಹಾಗೂ ಇತರೆ ಸೌಲಭ್ಯಗಳುಳ್ಳ ಬೆಡ್ ಗಳನ್ನು ಕೊವೀಡ್ 19 ಸೋಂಕಿತರಿಗೆ ಬಳಸಬಹುದಾಗಿದೆ. ನೀರಿನಿಂದ ರಕ್ಷಿಸಲ್ಪಡುವ ಅತ್ಯುನ್ನತ ಶ್ರೇಣಿಯ ತಳಮಟ್ಟದಲ್ಲಿ ಅಳವಡಿಸಲಾದ ಬೋರ್ಡ್ಗಳನ್ನು ಈ ಬೆಡ್ ಹೊಂದಿದ್ದು ಯಾವುದೇ ಸ್ಥಳದಲ್ಲಾದರೂ ಸುಲಭವಾಗಿ ಹಾಕಬಹುದಾಗಿದ್ದು ಐಸೋಲೇಷನ್ ವಾರ್ಡ್ ಗಳನ್ನಾಗಿ ಸ್ಟೇಡಿಯಂ ಗಳನ್ನು ಸಮುದಾಯ ಭವನಗಳನ್ನು ಪರಿವರ್ತಸಿ ಈ ಬೆಡ್ ಗಳನ್ನು ಅಳವಡಿಸಬಹುದಾಗಿದೆ ಎಂದು ಡಿ.ಕೆ.ಶಿವಕುಮಾರ ಹಾಗೂ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದರು.

ಪ್ರಸ್ತುತ ಬೆಡ್ ಗಳಿಗೆ ಸರಕಾರ ಪ್ರತಿದಿನಕ್ಕೆ ರೂ 800 ರಂತೆ ಬಾಡಿಗೆ ನಿಗದಿ ಮಾಡಿದೆ ಬಳಿಸಿಕೊಳ್ಳುತ್ತಿದೆ. ಆದರೆ ಕೆಪಿಸಿಸಿ ವತಿಯಿಂದ ಕಳಿಸಲಾಗಿರುವ ಬೆಡ್ ಗಳ ಮೊತ್ತ ಪ್ರತಿಯೊಂದಕ್ಕೆ ಒಂದು ಸಾವಿರದಷ್ಟಿದ್ದು ತುಕ್ಕುಗಟ್ಟದೆ ಬಹುಕಾಲ ಬಾಳಿಕೆ ಬರುವ ಹಾಗೂ ಯಾವುದೇ ಸಂದರ್ಭದಲ್ಲಿಯೂ ಮರುಬಳಕೆ ಮಾಡುವಂತೆ ತಯಾರಿಸದಾದ ವಿಶಿಷ್ಠ ಶೈಲಿಯ ಪರಿಸರ ಸ್ನೇಹಿ ಬೆಡ್ ಗಳು ಇವಾಗಿದ್ದು ಕನಿಷ್ಠ 400 ಕೆಜಿ ಭಾರ ತಾಳಬಲ್ಲವು. ಜಿಲ್ಲಾಡಳಿತಗಳು ಈ ಬೆಡ್ ಗಳನ್ಮು ಸರಿಯಾಗಿ ಬಳಕೆ ಮಾಡಿಕೊಂಡು ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ಪಾಸಿಟಿವ್ ಹೊಂದಿರುವ ಅಸಿಂಪ್ಟಮೇಟಿಕ್ ಸೋಂಕಿತರಿಗೆ ಈ ಬೆಡ್ ಗಳನ್ನು ಬಳಸಿದರೆ ಜಿಮ್ಸ್, ಇ‌ಎಸ್ ಐಸಿ,‌ರಿಮ್ಸ್ ಹಾಗೂ ಒಪೆಕ್ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರೆತಯನ್ನು ನೀಗಿಸುವುದರೊಂದಿಗೆ ತೀವ್ರತರ ಸೋಂಕಿತರಿಗೆ ಅಲ್ಲಿ ಚಿಕಿತ್ಸೆ ಕೊಡಬಹುದಾಗಿದೆ ಎಂದು ಶಾಸಕರು ವಿವರಿಸಿದರು.

ಕಾಂಗ್ರಸ್ ಪಕ್ಚ ಸಂಕಷ್ಟದ‌ ಸಮಯದಲ್ಲಿ ಜನರ ನೋವಿಗೆ ಸ್ಪಂದಿಸುವುದರ ಜೊತೆಗೆ ಸರಕಾರದೊಂದಿಗೆ ಸಹಕರಿಸುವುದಾಗಿ ಈ ಹಿಂದೆ ಹಲವಾರು ಬಾರಿ ಹೇಳಿತ್ತು. ಅದರಂತೆ ನಡೆದುಕೊಂಡು ಜನರಿಗೆ ನೆರವಿನ‌ ಹಸ್ತ‌ಚಾಚಿ ಅವರಿಗೆ ಮಾನಸಿಕ ಸ್ಥೈರ್ಯ ತುಂಬಿತ್ತು. ಈಗ ಪ್ರತಿನಿತ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೊವೀಡ್ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಕಾಣಿಸಿದ್ದು ಪರಿಸರ ಸ್ನೇಹಿ ಹಾಗೂ ಗಟ್ಟಿಮುಟ್ಟಾದ ಬೆಡ್ ಗಳನ್ನು ರವಾನಿಸುವುದರ ಮೂಲಕ ಪಕ್ಷ ತಮ್ಮ ಸಮಾಜಿಕ ಜವಾಬ್ದಾರಿ ಹಾಗೂ ನೈತಿಕತೆಯನ್ನು ಮೆರೆದಿದೆ‌ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಇದಲ್ಲದೆ ಇನ್ನೂ ಮುಂಬರುವ ದಿನಗಳಲ್ಲಿ ಕೊವೀಡ್ ಸೋಂಕಿತರಿಗೆ ಸೂಕ್ತ ನೆರವು ನೀಡಲು ಅನುಕೂಲವಾಗುವಂತ ಮೂಲಭೂತ ಸೌಲಭ್ಯದ ಜೊತೆಗೆ ವೈದ್ಯಕೀಯ ನೆರವು ನೀಡಲು ಪಕ್ಷ ಸದಾ‌ ಸಿದ್ದವಿದೆ‌ ಎಂದು ಇದೇ ಸಂದರ್ಭದಲ್ಲಿ ಶಾಸಕರು ಭರವಸೆ‌ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here