ಕಲಬುರಗಿ: ಕಿಲ್ಲರ್ ಕೊರೊನಾ ವೈರಸ್ ತನ್ನ ಅಟ್ಟಹಾಸ ದೇಶದ್ಯಂತ ದಾಂಡವ ಆಡುತ್ತಿದ್ದು, ಕಲಬುರಗಿಯಲ್ಲಿ ಮೊದಲ ಬಲಿ ಪಡೆದ ಸೋಂಕು ದಿನೆ ದಿನೆ ಪೀಡಿತರ ಸಂಖ್ಯೆ ಭಾರೀ ಏರಿಕೆ ಕಾಣುತ್ತಿದೆ.
ಈ ಹಿನ್ನೆಲ್ಲೆಯಲ್ಲಿ ರಾಜ್ಯಸರಕಾರದಿಂದ ಪ್ರತಿ ಭಾನುವಾರ ರಾಜ್ಯವ್ಯಾಪ್ತಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ ಇದರ ಪ್ರಯುಕ್ತ ಇಂದು ಕಲಬುರಗಿ ಜಿಲ್ಲಾ ಖಾಕಿ ಪಡೆ ರಸ್ತೆಗೆ ಇಳಿದು ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘಿಸಿ ರಸ್ತೆಗೆ ಇಳಿದವರಿಗೆ ಮತ್ತು ಕದ್ದು ಮುಚ್ಚಿ ವ್ಯಾಪರದಲ್ಲಿ ತೊಡಗಿದ ಅಂಗಡಿ ಮಾಲಿಕರಿಗೆ ಕ್ಲಾಸ್ ತೆಗೆದುಕೊಂಡರು.
ಕಲಬುರಗಿ ಜಿಲ್ಲಾಡಳಿತದ ಜು. 14 ರಿಂದ 20ರ ವರಗೆ ಲಾಕ್ ಡೌನ್ ಘೋಷಣೆ ಮಾಡಿದ್ದು, ನಾಳೆ ಕೊನೆಗೊಳಲಿದೆ. ಕೊರೊನಾ ವೈರಸ್ ನಿಯಂತ್ರಣಕಾಗಿ ಲಾಕ್ ಡೌನ್ ಮುಂದುಡುವ ಚಿಂತನೆ ನಡೆಯುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದ್ದು, ಇನ್ನೂ ಅಧಿಕೃತವಾಗಿ ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲ.
ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಬಹುತೇಕ ಸಬ್ದವಾಗಿ ಕಂಡು ಬಂತು. ಈ ಪ್ರಯುಕ್ತ ಇ-ಮೀಡಿಯಾ ಲೈನ್ ಓದುಗರಿಗೆ ಒಂದು ಚಿತ್ರ ಗ್ಯಾಲರಿ