ಬಡತನದಲ್ಲಿ ಅರಳಿದ ಗ್ರಾಮೀಣ ಪ್ರತಿಭೆ

0
32

ಆಳಂದ; ತಂದೆ ಕೂಲಿ ಕೆಲಸ ಮನೆಯಲ್ಲಿ ಬಡತನ ಇದ್ದರೂ ಓದಿಗೆ ಯಾವುದೆ ಬಡತನವಿಲ್ಲ ಸತತ ಅಧ್ಯಯನದಿಂದ ವಿಜ್ಞಾನ ವಿಭಾಗದಲ್ಲಿ ೯೫.೩೩% ಪಡೆದು ಸಾಧನೆ ಮಾಡಿದ ವಿದ್ಯಾರ್ಥಿ ವಿಜಯಕುಮಾರ ಬಸವರಾಜ ಮುಂದಿನಕೇರಿ.

ಆಳಂದ ತಾಲೂಕಿನ ಮಾದನಹಿಪ್ಪರಗಾ ಸಮೀಪದ ನಿಂಗದಳ್ಳಿ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಸಾಧನೆಗೆ ಯಾವುದು ಕಮ್ಮಿ ಇಲ್ಲ ಎಂಬುದನ್ನು ತೋರಿಸಿದ್ದಾನೆ. ಪ್ರಾಥಮಿಕ ಶಿಕ್ಷಣ ಗ್ರಾಮದಲ್ಲಿ ಪಡೆದು ಪ್ರೌಢ ಶಿಕ್ಷಣ ಮುರಾರ್ಜಿ ಶಾಲೆಯಲ್ಲಿ ಪಡೆದು ಪಿಯುಸಿ ಕಲಬುರಗಿಯ ದಿಶಾ ಕಾಲೇಜಿನಲ್ಲಿ ಪಡೆದು ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾನೆ.

Contact Your\'s Advertisement; 9902492681

ಗಣಿತದಲ್ಲಿ ೧೦೦ಕ್ಕೆ ೧೦೦ ಅಂಕ ಬೌತಶಾಸ್ತ್ರ ೯೫ ರಸಾಯನಶಾಸ್ತ್ರ ೯೯ ಜೀವಶಾಸ್ತ್ರ ೯೫ ಕನ್ನಡ ೯೫ ಇಂಗ್ಲೀಷ ೮೪ ಒಟ್ಟು ೫೭೨ ಅಂಕ ಪಡೆದು ಗ್ರಾಮಕ್ಕೆ ಕಿರ್ತಿ ತಂದಿದ್ದಾನೆ. ಗ್ರಾಮೀಣ ಭಾಗದಲ್ಲಿ ಓದಿದವರು ಕೂಡಾ ಕಡಿಮೆ ಇಲ್ಲ ಮನಸ್ಸು ಮಾಡಿದರೆ ಸಾಧನೆ ಮಾಡಬಹುದಾಗಿದೆ. ನನ್ನ ತಂದೆ ಓದಿಲ್ಲ ನನ್ನ ಮಗ ಓದಬೇಕೆಂದು ಬೆಂಗಳೂರಲ್ಲಿ ಕೂಲಿ ಕೆಲಸ ಮಾಡಿ ನನಗೆ ಶಿಕ್ಷಣ ಕೊಡಿಸಿದ್ದಾರೆ.

ನನ್ನ ಚಿಕ್ಕಪ್ಪ ನನ್ನ ಓದಿಗೆ ಸಹಾಯ ಮಾಡಿದ್ದಾರೆ ಅವರ ಕನಸು ನನಸು ಮಾಡುವುದೆ ನನ್ನ ಗುರಿಯಾಗಿದೆ. ಮುಂದೆ ವೈದ್ಯನಾಗಿ ಸಮಾಜ ಸೇವೆ ಮಾಡುವುದಾಗಿ ಹೇಳುತ್ತಾನೆ ವಿಜಯ, ಗ್ರಾಮೀಣ ಪ್ರತಿಭೆಯ ಈ ಸಾಧನೆಗೆ ಗ್ರಾಮಸ್ಥರು ದಿಶಾ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here