ವಾಸ್ತವ ಸತ್ಯಕ್ಕಿಂತ ಭಾವಸತ್ಯ ಮುಖ್ಯ, ವಿದೇಶಿ ಛಂದಸ್ಸಿನಲ್ಲಿ ಅರಳಿದ ದೇಶಿ ಕಾವ್ಯ ‘ ಅರಿವೇ ಪ್ರಮಾಣು’ ಕೃತಿ

0
144

ಕಲಬುರಗಿ: ದೂರ ದೂರದ ವ್ಯಕ್ತಿಗಳನ್ನು ಅನುಬಂಧಕ್ಕೆ ತರುವ ಚಮತ್ಕಾರಿಕ ಮಾಧ್ಯಮವೇ ಸಾಹಿತ್ಯ ಎಂದು ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.

ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಜಿಲ್ಲಾ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಲೇಖಕ ಮಹಾಂತಪ್ಪ ನಂದೂರ ಅವರ ‘ಅರಿವೇ ಪ್ರಮಾಣು’ ಅಕ್ಕನಾಗಮ್ಮನ ಜೀವನ ಕಾವ್ಯ ಸುನೀತ ಕಾವ್ಯ ಕೃತಿ ಜನಾರ್ಪಣೆ ಗೊಳಿಸಿ ಮಾತನಾಡಿದ ಅವರು, ವಾಸ್ತವ ಸತ್ಯಕ್ಕಿಂತ ಭಾವ ಸತ್ಯ ಮುಖ್ಯ ಎಂದರು.

Contact Your\'s Advertisement; 9902492681

ವಚನ ಸಾಹಿತ್ಯವನ್ನು ಗಂಭೀರವಾಗಿ, ಆಳವಾಗಿ ಅಧ್ಯಯನ ಮಾಡಿರುವ ಮಹಾಂತಪ್ಪ ನಂದೂರ ಅವರು ಅಕ್ಕನಾಗಮ್ಮನ ಜೊತೆಗೆ ಚನ್ನಬಸವಣ್ಣ ಮತ್ತು ಬಸವಾಲ್ಲಮರ ದರ್ಶನ ಮಾಡಿಸುತ್ತಾರೆ ಎಂದರು.

ಬಹಳಷ್ಟು ಜನ ಕಲ್ಯಾಣದ ಬಸವಾದಿ ಶರಣರನ್ನು ವಾಸ್ತವದವರೆಗೆ ತಂದು ನೋಡಿದ್ದಾರೆ. ಆದರೆ ಮಹಾಂತಪ್ಪ ಅವರು, ಬಸವಾಲ್ಲಮರಿದ್ದ ಕಲ್ಯಾಣಕ್ಕೆ ಹೋಗಿ ಅವರ ವ್ಯಕ್ತಿತ್ವನ್ನು ಕಟ್ಟಿಕೊಡುವ ವಿಶಿಷ್ಟ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಕೃತಿ ಕುರಿತು ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಮಾತನಾಡಿ, ವಿದೇಶಿ ಛಂದಸ್ಸಿನಲ್ಲಿ ಅರಳಿದ ದೇಶಿ ಕಾವ್ಯ ಇದಾಗಿದೆ ಎಂದು ಅಭಿಪ್ರಾಯಪಟ್ಟರು. ಕಲ್ಯಾಣದ ಶರಣ-ಶರಣೆಯರಲ್ಲೇ ಬಹಳಷ್ಟು ಸಂಕೀರ್ಣ ವ್ಯಕ್ತಿತ್ವದ ಅಕ್ಕನಾಗಮ್ಮನ ಜೀವನ ಕಾವ್ಯ ಕಟ್ಟಿಕೊಡುವ ಸವಾಲು ಸ್ವೀಕರಿಸಿ ಯಶಸ್ವಿಯಾಗಿದ್ದಾರೆ ಎಂದರು.

ಚರಿತ್ರೆ, ಪುರಾಣ, ಭಾವುಕತೆ, ವೈಚಾರಿಕತೆ, ವಾಸ್ತವತೆಯ ಹೂರಣ ಹೊಂದಿರುವ ಈ ಕಾವ್ಯ ಮಹಿಳಾ ವ್ಯಕ್ತಿತವವನ್ನು ಈ ಸಂದರ್ಭದಲ್ಲಿ ಸ್ಪಷ್ಟವಾಗಿ, ನಿಖರವಾಗಿ ಬರೆದಿದ್ದಾರೆ. ಇದೊಂದು ಸಂಶೋಧನಾತ್ಮಕ ಜೀವನ ಕಾವ್ಯವಾಗಿದೆ ಎಂದು ತಿಳಿಸಿದರು.

ಲೇಖಕ ಮಹಾಂತಪ್ಪ ನಂದೂರ ಮಾತನಾಡಿದರು.‌ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಆಶಯ ಭಾಷಣ ಮಾಡಿದರು.‌ ಗುಲ್ಬರ್ಗ ವಿವಿ ಪ್ರಸಾರಾಂಗ ನಿರ್ದೇಶಕ ಡಾ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸಿದ್ದರು.

ಡಾ.‌ಮಲ್ಲಿಕಾರ್ಜುನ ತಳವಾರ ನಿರೂಪಿಸಿದರು.‌ ಎನ್.ಎಸ್. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಸ್ವಾಗತಿಸಿದರು. ಎನ್.ಎಸ್. ಹಿರೇಮಠ ವಂದಿಸಿದರು. ಡಾ. ಎಸ್.ಎಸ್. ಗುಬ್ಬಿ, ಡಾ. ಶ್ರೀಶೈಲ ನಾಗರಾಳ, ಎ.ಕೆ. ರಾಮೇಶ್ವರ, ಬಸವರಾಜ ಕೊನೇಕ್, ಪಿ.ಎಂ.‌ಮಣ್ಣೂರ, ಡಾ.‌ಸೂರ್ಯಕಾಂತ ಪಾಟೀಲ, ನಳಿನಿ ಮಹಾಗಾಂವಕರ,  ಪ್ರೇಮಾ ಹೂಗಾರ ಪ್ರಭಾಕರ ಸಾತಖೇಡ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here