ಕಲಬುರಗಿಯಲ್ಲಿ ವೆಂಟಿಲೇಟರ್ ಕೊರತೆಯಿಂದ ಮತ್ತೊಬ್ಬ ಶಿಕ್ಷಕ ಸಾವು: ಕುಟುಂಬಸ್ಥರ ಆರೋಪ

0
76

ಕಲಬುರಗಿ: ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆಯಿಂದ ಅಂಗನವಾಡಿ ಕಾರ್ಯಕರ್ತೆ ಓರ್ವರು ಮೃತಪಟ್ಟ ಬೆನ್ನಲ್ಲೇ, ಈಗ ಮತ್ತೊಬ್ಬರು ಮೃತಪಟ್ಟಿರುವ ಅರೋಪಗಳು ಕೇಳಿಬರುತ್ತಿದೆ. ಮೂಲಗಳ ಪ್ರಕಾರ ಕಳೆದೆರಡು ದಿನಗಳಿಂದ ಮೃತಪಟ್ಟವರಲ್ಲಿ ಬಹುತೇಕರು ಆಕ್ಸಿಜನ್ ಕೊರತೆಯಿಂದ ಬಳಲುತ್ತಿದ್ದವರೇ ಎಂಬ ಆರೋಪ ಜಿಲ್ಲೆಯಲ್ಲಿ ದಟ್ಟವಾಗಿ ಕೇಳಿಬರುತ್ತಿದೆ.

ಕೊರೊನಾ ವಾರಿಯರ್ ಆಶಾ ಕಾರ್ಯಕರ್ತೆ ಅಕ್ಕನಾಗಮ್ಮ ಅವರಿಗೆ ಸಕಾಲಕ್ಕೆ ವೆಂಟಿಲೇಟರ್ ವ್ಯವಸ್ಥೆ ಸಿಗದಿದ್ದಕ್ಕೆ ಮೃತಪಟ್ಟಿದ್ದಾರೆ ಎಂಬ ಆರೋಪ‌ಕ್ಕೆ ಇ.ಎಸ್.ಐ.ಸಿ ಮತ್ತು ಜಿಮ್ಸ್ ವೆಂಟಿಲೇಟರ್ ಕಾರಣದಿಂದ ಮೃತಪಟ್ಟಿಲ್ಲ ಎಂದು ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡಿ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು.

Contact Your\'s Advertisement; 9902492681

ಆದರೆ ಈ ನಡುವೆ ನಿನ್ನೆ ಅಫಜಲಪುರ ಪಟ್ಟಣದ ಶಿಕ್ಷಕ ಬಸವರಾಜ ಪದಕಿ ಎಂಬುವರು ಇಂತಹುದೇ ಸಮಸ್ಯೆಯಿಂದಾಗಿ ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ಕುಟುಂಬಸ್ಥರು ಮಾಡಿದ್ದಾರೆ.

ಮೃತರ ಗಂಟಲು ದ್ರವ ಕೋವಿಡ್ ಪರೀಕ್ಷೆಗೆ ಕಳುಹಿಸಲಾಗಿದೆ. ಇದಲ್ಲದೇ ನಿನ್ನೆ ಜಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ವೃದ್ಧೆಯ ಸಾವಿಗೂ ವೆಂಟಿಲೇಟರ್​ ಕೊರತೆಯೇ ಕಾರಣ ಎಂದು ಮಗ ದೂರಿದ್ದು, ಶಾಸಕ ಪ್ರಿಯಾಂಕ್ ಖರ್ಗೆ ಕೂಡಾ ಈ ಬಗ್ಗೆ ಟ್ವೀಟ್​ ಮಾಡಿ ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

ಒಟ್ಟಾರೆ ಜಿಲ್ಲಾಡಳಿತ ಆಕ್ಸಿಜನ್ ಅಥವಾ ವೆಂಟಿಲೇಟರ್ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸುತ್ತಿದೆ. ಆದರೆ, ಮೃತರ ಸಂಬಂಧಿಕರು ಮಾತ್ರ ಆಕ್ಸಿಜನ್, ವೆಂಟಿಲೇಟರ್ ಕೊರತೆಯಿಂದಲೇ ತಮ್ಮವರನ್ನು ಕಳೆದುಕೊಂಡಿರುವುದಾಗಿ ಆರೋಪಗಳು ಮಾಡುತ್ತಿದ್ದಾರೆ.

ಕೊರೊನಾ ಮಹಾಮಾರಿಗೆ ಸಂದರ್ಭದಲ್ಲಿ ಆತಂಕ ಒಳಗಾಗಿದ್ದ ಜನರಿಗೆ ಈ ಘಟನೆಗಳು ಮತ್ತಷ್ಟು ಆತಂಕದ ಸುಳಿವಿಗೆ ಸಿಲುಕುವಂತ ಮಾಡಿದೆ.

ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕಾರ್ಯವೈಖರಿ ಮತ್ತು ಜಿಲ್ಲಾಡಳಿತ ಹೇಳಿಕೆಗಳ ಬಗ್ಗೆ ಜನರಲ್ಲಿ ಹಲವು ಅನುಮಾನ ಹಾಗೂ ಸಂಶಯ ಸೃಷ್ಠಿಸುವಂತಾಗಿದೆ.

ಈ ಬಗ್ಗೆ ರಾಜ್ಯ ಸರಕಾರ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಅನ್ನೋದು ಜಿಲ್ಲೆಯ ಜನರ ಆಗ್ರಹವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here