ಕಲಬುರಗಿ: ಪ್ರತಿಷ್ಠಿತ ಹಳೇ ಬ್ರಹ್ಮ ಪೂರ್ ಬಡಾವಣೆಯಲ್ಲಿ ಇಂದು ಬೆಳ್ಳೆಗ್ಗೆ ಚಂದ್ರಶೇಖರ್ ಅಜಾದ್ ಚೌಕನಲ್ಲಿ, ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಅಜಾದ್ ಅವರ 114 ನೇ ಜಯಂತಿಯನ್ನು ಆಚರಿಸಲಾಯಿತು.
ಅಜಾದ್ ಅವರ ಭಾವಚಿತ್ರಕ್ಕೆ ಶ್ರೀ ಈರಣ್ಣ ಭಂದರ ವಾಡ ಸ್ವಾಮಿಗಳು ಪೂಜೆ ಸಲ್ಲಿಸಲಾಯಿತು, ಮೊದಲಿಗೆ ಸಂಘದ ಸದ್ಯಸ್ ಶ್ರೀ ತಿಪ್ಪಣ್ಣ ಬಾಳಿಕಾಯಿ ಎಲ್ಲರಿಗೂ ಸ್ವಾಗತಿಸಿದರು.
ಆಜಾದ್ ತರುಣ ಸಂಘದ ಗೌರವಾಧ್ಯಕ್ಷ ಹಾಗೂ ನ್ಯಾಯವಾದಿ ಜೇ. ವಿನೋದ ಕುಮಾರ ಜಯಂತಿ ಉದ್ದೇಶಿಸಿ ಮಾತನಾಡುತ್ತಾ ಆಗಿನ ಕಾಲದಲ್ಲಿ ಬಾಲ್ ಗಂಗಾಧರ ತಿಲಕ ಹಾಗೂ ಚಂದ್ರಶೇಖರ್ ಅಜಾದ್ ರಂತೆ ಈಗಿನ ಕಾಲದಲ್ಲಿ ಭಾರತದ ರಾಷ್ಟ್ರ ರಕ್ಷಣಾ ಮಂತ್ರಿ ಹಾಗೂ ಪ್ರಧಾನ ಸೇವಕ ರೆಂದು ಸೇವೆ ಸಲ್ಲಿಸುತ್ತಿದ್ದಾರೆ, ಕಾಕತಾಳೀಯ ವೇಬೆಂತೆ ಇಂದು 164 ನೆ ತಿಲಕರ ಜಯಂತಿ ಕೂಡ ಇದೆ. ಸಾಮಾಜಿಕ ಅಂತರ ನಿಯಮ ಮತ್ತು ಮಾಸ್ಕ್ ಧರಿಸಿ ಕಾನೂನಾತ್ಮಕ ವಾಗಿ ಸಂದೇಶ ನೀಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ಸಂಘದ ಅಧ್ಯಕ್ಷ ಕವಿರಾಜ್ ಕೋರಿ ವಹಿಸಿದ್ದರು. ಜಯಂತಿ ಪೂಜೆಯಲ್ಲಿ ಸಂಘದ ಸದ್ಯಸ್ ರಾದ, ರಾಕೇಶ್ ವರ್ಮ, ರತನಚಂದ್ ಕಾಸರ್, ಸಚಿನ್ ಲ್ಯಾಂದೆ ಹೆಚ್ಚಿನ ಸಂಖ್ಯೆ ಯಲ್ಲಿ ಮಕ್ಕಳು ಪಾಲಗೊಂಡಿದ್ದ ರು ಅಲ್ಲದೆ ಬಡಾವಣೆ ಇತರೆ ನಿವಾಸಿಗಳು ಉಪಸ್ಥಿತರಿದ್ದರು.