ಶಹಾಬಾದ ನಗರದ ಸಾರ್ವಜನಿಕರು ನೀರನ್ನು ಕಾಯಿಸಿ ಕುಡಿಯಲು ಮನವಿ

0
40

ಶಹಾಬಾದ:ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಲಮೂಲಗಳಾದ ಭೀಮಾಹಾಗೂ ಕಾಗಿಣಾ ನದಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಬರುತ್ತಿದೆ. ತಾಲೂಕಿನಲ್ಲಿ ಸಾಕಷ್ಟು ಮಳೆಯಾಗಿದಲ್ಲದೇ, ನದಿಗಳ ಮೇಲ್ಭಾಗದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಪ್ರವಾಹದ ನೀರಿನಲ್ಲಿ ಮಣ್ಣಿನ ಅಂಶ ಹಾಗೂ ಕಲುಷಿತ ಪದಾರ್ಥಗಳು ಹೆಚ್ಚಾಗುತ್ತಿದೆ.ಆದ್ದರಿಂದ ಕುಡಿಯುವ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯಬೇಕೆಂದು ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸ್ಥಳೀಯವಾಗಿ ಎಡಿಬಿಯವರು ನೀರನ್ನು ಶುದ್ಧಿಕರಿಸಿ, ಕ್ಲೋರಿನೇಶನ್ ಮಾಡಿ ನಗರಕ್ಕೆ ನೀರು ಸರಬರಾಜು ಮಾಡುತ್ತಿದೆ.ಒಂದು ವೇಳೆ ಮಣ್ಣಿನ ಅಂಶ ಹೆಚ್ಚಾದರೇ ಶುದ್ಧಿಕರಿಸುವುದಕ್ಕೆ ಸ್ವಲ್ಪ ತೊಂದರೆಯಾಗಬಹುದು.ಅಲ್ಲದೇ ಶುದ್ಧಿಕರಿಸುವಾಗ ಪೊಟಾಷ ಅಲಮ್ ಹೆಚ್ಚಾದರೆ , ಬೇಧಿ ಉಂಟಾಗುವ ಸಾಧ್ಯತೆಯಿದೆ.ಆದ್ದರಿಂದ ನೀರು ಬರಲು ತೊಂದರೆಯಾದರೇ ಅಥವಾ ಒಂದು ದಿನ ಬರದೇ ಇದ್ದರೇ ಸಾರ್ವಜನಿಕರು ಸಹಕರಿಸಬೇಕು.ಅಲ್ಲದೇ ನೀರನ್ನು ಕಾಯಿಸಿ, ಆರಿಸಿ ಸೋಸಿ ಕುಡಿಯಿರಿ.ಅಲ್ಲದೇ ಸಾರ್ವಜನಿಕರು ತಮ್ಮ ನಳದ ಜೋಡಣೆಯ ಪೈಪುಗಳಲ್ಲಿ ಸೋರುವಿಕೆ ಅಥವಾ ಒಡೆದು ಹೋದಲ್ಲಿ, ತಕ್ಷಣ ದುರಸ್ತಿಗೊಳಿಸಿ.ದುರಸ್ತಿ ಮಾಡಿಕೊಳ್ಳದಿದ್ದಲ್ಲಿ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಇರುತ್ತದೆ. ಕಡ್ಡಾಯವಾಗಿ ತಮ್ಮ ನಳಗಳಿಗೆ ತೊಟ್ಟಿಗಳನ್ನು ಅಳವಡಿಸಿಕೊಂಡು ನೀರು ಪೋಲಾಗದಂತೆ ನೋಡಿಕೊಳ್ಳಿ. ಮಳೆಗಾಲದಲ್ಲಿ ನೀರು ಸ್ವಚ್ಛವಾಗಿ ಕಂಡರೂ ಅದನ್ನು ಕಾಯಿಸಿ,ಆರಿಸಿ ಸೋಸಿ ಕುಡಿಯಬೇಕೆಂದು ಸಾರ್ವಜನಿಕರಲ್ಲಿ ಕೆ.ಗುರಲಿಂಗಪ್ಪ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here