ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ, ಆರೋಗ್ಯ ಕಾರ್ಯಕರ್ತರಿಂದ ಪ್ರತಿಭಟನೆ

0
32

ಜೇವರ್ಗಿ : ರಾಜ್ಯವ್ಯಾಪಿಯಾಗಿ ಜೂನ್ 30ರಂದು ಮತ್ತು ಕಳೆದ 15ದಿನಗಳಿಂದ ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ ಅಧಿಕಾರಿಗಳು ಹಾಗೂ ರಾಜ್ಯದ ಹಲವಾರು ಸಚಿವರು ಮತ್ತು ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರಕ್ಕೆ ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ವೈದ್ಯಕೀಯ ಸಚಿವರಿಗೆ ಈ ಕುರಿತು ಕ್ರಮವಹಿಸುವಂತೆ ತಿಳಿಸಿದರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆರೋಗ್ಯ ಸೇವೆ ಸ್ಥಗಿತಗೊಳಿಸಿ ಆಶಾ ಕಾರ್ಯಕರ್ತರು ಹಾಗೂ ನಿರ್ದಿಷ್ಟ ಹೋರಾಟ ಮುಂದುವರಿಸಿದ್ದಾರೆ. ಹೋರಾಟಕ್ಕೆ 15ದಿನಗಳು ಪೂರ್ಣಗೊಂಡಿವೆ.

Contact Your\'s Advertisement; 9902492681

ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಮಟ್ಟದಲ್ಲಿ ಪ್ರಮಾಣದ ಹೋರಾಟವನ್ನು ನಡೆಸುವದು ಅನಿವಾರ್ಯವೆಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಜೇವರ್ಗಿ ತಹಶಿಲ್ದಾರ ಮೂಲಕ ಸಲ್ಲಿಸಲಾಯಿತು .

ಪ್ರತಿಭಟನೆಯಲ್ಲಿ AIUTC ಉಪಾಧ್ಯಕ್ಷರಾದ ರಾಘವೇಂದ್ರ ಎಂ ಜಿ, ಲಕ್ಷ್ಮಿ ಮಂದೇವಾಲ ಆಶಾ ಕಾರ್ಯಕರ್ತರು ಸಂಘ ಕಾರ್ಯದರ್ಶಿ, ಮಹಾದೇವಿ ಮಳ್ಳಿ, ಆಶಾ ಕಾರ್ಯಕರ್ತರ ಸಂಘದ ಅಧ್ಯಕ್ಷರು ಸೇರಿದಂತೆ ಜಗನ್ನಾಥ್ ಎಸ ಎಚ. ಅವರಾದ ,ಗಂಗೂಬಾಯಿ ಕೆ.ಗಡೆದ, ಅಣ್ಣಮ್ಮ ಕೊಳಕುರ,ಸುಧಾ ವಡಿಗೇರ ಸೇರಿದಂತೆ ನೂರಾರು ಜನರನ್ನು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here