Monday, July 15, 2024
ಮನೆಬಿಸಿ ಬಿಸಿ ಸುದ್ದಿಕಲಬುರಗಿ ಜಿಮ್ಸ್, ಇ.ಎಸ್.ಐ.ಸಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಣೆ: ರೋಗಿಗಳು ಪರದಾಟ

ಕಲಬುರಗಿ ಜಿಮ್ಸ್, ಇ.ಎಸ್.ಐ.ಸಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಣೆ: ರೋಗಿಗಳು ಪರದಾಟ

ಕಲಬುರಗಿ: ಕೊರೊನಾ ಮಹಾಮಾರಿ ನೆಪದಲ್ಲಿ ಜಿಲ್ಲೆಯ ಇ.ಎಸ್.ಐ.ಸಿ ಮತ್ತು ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಹೊರೆತು ಪಡಿಸಿ ಇತರೆ ರೋಗಿಗಳನ್ನು ನಿರಾಕರಿಸಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು ಜು. 18 ರಂದು ಚಿಕಿತ್ಸೆಯ ನಿರೀಕ್ಷೆಯಲ್ಲಿ ಇಲ್ಲಿನ ಇ.ಎಸ್‌.ಐ.ಸಿ ಆಸ್ಪತ್ರೆಗೆ ಶಹಾಪುರ ತಾಲ್ಲೂಕಿನ ಖವಾಸ್ಪುರ ಗ್ರಾಮದ ನಿವಾಸಿ ರಹಿಮುನ್ನಿಸಾ ಎಂಬ ಗರ್ಭಿಣಿ ಮಹಿಳೆ ಓರ್ವರಿಗೆ ದಾಖಲಿಸಿಕೊಂಡು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಕಡೆಗೆ ಚಿಕಿತ್ಸೆ ಪಡೆಯಲು ಜು. 24 ಡಿಸ್ಚಾರ್ಜ್ ಮಾಡಿದರು ಎನ್ನಲಾಗಿದೆ.

ಬಡತನ ಮತ್ತು ಗ್ರಾಮೀಣ ನಿವಾಸಿಯಾದ ಏನು ತೋಚದ ಹಿನ್ನೆಲೆಯಲ್ಲಿ ನಗರದ ಸರಕಾರಿ ಜಿಮ್ಸ್ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ವೈದ್ಯರ ಎದುರು ಅಂಗಲಚಾಚಿದ್ದಾರೆ ಎಂದು ತಿಳಿದುಬಂದಿದೆ.

ಇಂತಹ ಘಟನೆಗಳು ಜಿಲ್ಲೆಯಲ್ಲಿ ಏರುತ್ತಿರುವ ಸಾವಿನ ಸಂಖ್ಯೆಗೆ ಮತ್ತಷ್ಟು ಪುಷ್ಟಿ ನೀಡವಂತದಾಗುದ್ದು, ದಿನೇ ದಿನೇ ಆರೋಗ್ಯ ಇಲಾಖೆಯ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸ ಕುಂಟಿತವಾಗುತ್ತಿದೆ. – ರಿಯಾಜೋದ್ದಿನ್, ಮಾನವ ಹಕ್ಕುಗಳ ಹೋರಾಟಗಾರ

ಇದಕ್ಕೆ ಸ್ಪಂದಿಸದ ವೈದ್ಯರು ಜಿಮ್ಸ್ ಲ್ಲಿ ಕೆವಲ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಆದರಿಂದ ದಾಖಲಿಸಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಬೆರೆ ರೋಗಿಗಳೆ ಚಿಕಿತ್ಸೆ ನೀಡಿದಿರಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆಂದು ಅಲ್ಲಿನ ವೈದ್ಯವಾಧಿಕಾರಿಗಳು ಕೈತೊಳೆದುಕೊಂಡಿದ್ದಾರೆ ಎಂದು ಎಸ್.ಡಿ.ಪಿ.ಐ ಸಂಘಟನೆ ಮುಖಂಡರಾದ ರಹೀಮ್ ಪಟೇಲ್ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್-19 ನಾನ್ ಕೋವಿಡ್-19 ನೆಪದಲ್ಲಿ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಕೊರೊನಾ ಪೀಡಿತರರಿಗೆ ಬೇಡ್ ಇಲ್ಲ ಎಂದು ದಾಖಲಿಸಿಕೊಳ್ಳಲು ನಿರಾಕರಿಸುತ್ತಿದರೆ, ಇನ್ನೊಂದೆಡೆ ನಾನ್ ಕೋವಿಡ್-19ಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಯಲ್ಲಿ ಪಡೆಯಬೇಕೆಂಬ ಗೊಂದಲ ಇದ್ದು, ಬಡವರು ಈ ಗೊಂದಲ್ಲಿ ಅಸ್ಪತ್ರೆ ಅಸ್ಪತ್ರೆಗಳಿಗೆ ಅಲೇದಾಡಿ ಪ್ರಾಣ ಬಿಡುವಂತಹದಾಗಿದೆ. ಅಬ್ದುಲ್ ರಹೀಮ್ ಪಟೇಲ್, ಜಿಲ್ಲಾ ಮುಖಂಡ ಎಸ್‌.ಡಿ.ಪಿ.ಐ ಕಲಬುರಗಿ.

ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯನ್ನು ದಾಖಲಿಸಿಕೊಂಡು 18 ರಿಂದ 24 ವರೆಗೆ ದಾಖಲಿಸಿ ಚಿಕಿತ್ಸೆ ನೀಡದೆ ಬೀದಿಗಟ್ಟಿರುವದು ಖಂಡನೀಯ.ಕೊರೋನಾ ಹೆಸರಲ್ಲಿ ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುವುದ ನಿರಾಕರಿಸುವುದು ವೈದ್ಯಕೀಯ ಧರ್ಮಕ್ಕೆ ಮಾಡುವ ಅಪಮಾನ ವಲ್ಲವೆ ಎಂದು ಪ್ರಸ್ನಿಸಿದ್ದಾರೆ.

ಯಾದಗಿರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಚಿಕಿತ್ಸೆಯಲ್ಲಿನ ನಿರ್ಲಕ್ಷ್ಯ ಮತ್ತು ಕಲಬುರಗಿ ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ಐದು ದಿನ ದಾಖಲಿಸಿಕೊಂಡು ಚಿಕಿತ್ಸೆ ನೀಡದೆ ಕಾಲ ಹರಣ ಮಾಡಿರುವ ಬಗ್ಗೆ ತನಿಖೆ ನಡೆಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಸಂಸದ ಡಾ. ಉಮೇಶ್ ಜಾಧವ್, ಅವರ ಪುತ್ರ ಶಾಸಕರಾದ ಡಾ.ಅವಿನಾಶ್ ಜಾಧವ್ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರಂತ ನೂವರು ಜನಪ್ರತಿನಿಧಿಗಳು ವೈದ್ಯಕೀಯ ಪದವಿ ಪಡೆದಿದ್ದಾರೆ. ಇದು ನಮ್ಮ ಪುಣ್ಯ ಆದರೆ, ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನಿರಾಸಕ್ತಿ ತೋರುವುದರಿಂದ ಸೂಕ್ತ ಚಿಕಿತ್ಸೆ ಇಲ್ಲದೆ ಸಾವಿನ ಸಂಖ್ಯೆ ಏರಿಕೆ ಕಾಣುತ್ತಿದೇವೆ ಮತ್ತು ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿಗೆ ಜಿಲ್ಲೆ ತಲುಪಿದೆ ಎಂಬುದು ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸದ್ಯ ಹಲವು ಪ್ರಯತ್ನನದ ನಂತರ ಮಹಿಖೆಯನ್ನು ಎಂ.ಎಸ್.ಕಿ. ಮೀಲ್ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಜಿಲ್ಲಾಡಳಿತ ಮತ್ತು ಅರೋಗ್ಯ ಇಲಾಖೆ ಎಚ್ಚೆತುಗೊಂಡ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ನೀಡಿ ಪ್ರಾಣ ಕಾಪಡಬೇಕೆಂದು ಆಗ್ರವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular