ಕಲಬುರಗಿ: ಕೆ.ಎಸ್.ಆರ್.ಟಿ.ಸಿ. ಬಿ.ಎಂ.ಟಿ.ಸಿ. ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ವೇತನವನ್ನು ಭರಿಸಲು ಒಟ್ಟು.961.ಕೋಟಿ ರೂ.ಗಳನ್ನು ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು ಈಗಾಗಲೇ ಜೂನ್ ಮತ್ತು ಜುಲೈ ತಿಂಗಳುಗಳ ವೇತನಕ್ಕಾಗಿ ರೂ.426.ಕೋಟಿಗಳನ್ನು ಬಿಡುಗಡೆಗೋಳಿಸಿದಕ್ಕೆ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಗೆ ವೀರಶೈವ ಲಿಂಗಾಯತ ನೌಕರರ ಕಲ್ಯಾಣ ಸಂಘದ ಸದಸ್ಯರು ಅಭಿನಂದನೆ ವ್ಯಕ್ತಪಡಿಸ್ದಾರೆ.
ಈ ವೇಳೆಯಲ್ಲಿ ಸಂಘದ ಅಧ್ಯಕ್ಷರಾದ ಎಸ್ ಎಸ್ ಸಜ್ಜನ, ಪ್ರಧಾನ ಕಾರ್ಯದರ್ಶಿವಿವೇಕಾನಂದ ಪಾಟೀಲ ಕೋಗಟನೂರ, ರಾಜ್ಯಾಧ್ಯಕ್ಷರಾದ ಸಂಗಮನಾಥ ರಬಶೇಟ್ಟಿ, ವೀರಶೈವ ಲಿಂಗಾಯತ ನೌಕರರ ಸಂಘದ ಮುಖಂಡರಾದ ಶಿವಪುತ್ರಪ್ಪ ಬೆಳಮಗಿ, ಶಿವಶರಣಪ್ಪ ಮದಗುಣಕಿ, ಬಸವರಾಜ ದೇಸುಣಗಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಸಿದ್ದಣ್ಣ ಸಿಕೇದ ಕೋಳಕೂರ, ರವೀಂದ್ರ ಇಂಗಿನ್ ಮಹಾಂತ ಸಾಹೂಕಾರ ಗೊಬ್ಬುರ, ವೀರೇಶ ಮಾಲಿಪಾಟೀಲ, ಮಂಜುನಾಥ ಕಲ್ಯಾಣಿ, ಗುಂಡೆರಾಯ ವಾಡಿ, ಶರಣು ಕಣ್ಣಿ, ಅಶೋಕ್ ಸಾಹೂಕಾರ ಯಡ್ರಾಮಿ, ಪ್ರಭು ಅವಂಟಿ, ನಾಗರಾಜ ಪಾಟೀಲ ಗುರಣ್ಣ ವಸ್ತಾರಿ, ನಾಗಭೂಷಣ ಪಾಟೀಲ, ಇನ್ನಿತರ ವೀರಶೈವ ಲಿಂಗಾಯತ ನೌಕರರ ಕಲ್ಯಾಣ ಸಂಘದ ಮುಖಂಡರು ಇದ್ದರು.