ಸರ್ಕಾರದ ಯೋಜನೆ ರೈತ ಸಂಘ ಅವಶ್ಯಕ !

0
85

ಶಹಾಪುರ : ಪ್ರಸ್ತುತ ದಿನಮಾನದಲ್ಲಿ ರೈತರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಬಹಳ ಕಷ್ಟಕರವಾಗಿದೆ, ಆದ ಕಾರಣ ಸಂಘಟನೆಗೆ ಯುವಕರ ಪಾತ್ರ ಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾಧ್ಯಕ್ಷರಾದ ಮಹೇಶ್ ಗೌಡ ಎಮ್. ಸುಬೇದಾರ್ ಹೇಳಿದರು.

ಶಹಾಪುರ ತಾಲೂಕಿನ ದೊರನಹಳ್ಳಿಯಲ್ಲಿ ಗ್ರಾಮ ಘಟಕ ರಚನೆ ಮಾಡಿ ಅವರು ಮಾತನಾಡಿದರು.

Contact Your\'s Advertisement; 9902492681

ಭೂಸುಧಾರಣೆ ಕಾಯ್ದೆ ಸರಕಾರ ವಾಪಸ್ ಪಡಿಬೇಕು ಇದರಿಂದ ರೈತರಿಗೆ ಮರಣ ಶಾಸನ ಹೊರಡಿಸಿದಂತೆ ಮತ್ತು ಕಾರ್ಪರೇಟರ್ ಕಂಪನಿಗಳು ಕೃಷಿ ಭೂಮಿಯನ್ನ ಖರೀದಿ ಮಾಡುತ್ತಿವೆ. ಇದರಿಂದ ರೈತರ ಕೃಷಿ ಕಡಿಮೆ ಆಗುತ್ತಿದೆ ಮತ್ತು ಚುನಾವಣೆ ಬಂದಾಗ ಮಾತ್ರ ಮತಕಾಗಿ ರಾಜಕೀಯ ವ್ಯಕ್ತಿಗಳು ಗ್ರಾಮಕ್ಕೆ ಬೇಟಿ ಮಾಡುತ್ತಾರೆ ನಂತರ ಜನರ ಕಷ್ಟಕ್ಕೆ ಯಾರು ಬರುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತ ಹೊರ ಹಾಕಿದರು.

ಆದ್ದರಿಂದ ತಮ್ಮ ಕಷ್ಟಗಳಿಗೆ ರೈತ ಸಂಘಟನೆ ಬಹಳ ಅವಶ್ಯಕತೆ ಇದೆ ಎಂದು ಯುವಕರಿಗೆ ತಿಳಿಹೇಳಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಮಹಾಂತೇಶ್ವರ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ನಾಯಕತ್ವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕವನ್ನು ರಚಿಸಲಾಯಿತು.

ಹುಣಚಪ್ಪ ಕಣದಾಳ (ಗೌರವಾಧ್ಯಕ್ಷರು),ಶಿವರಾಜ್ ಜಂಗಳಿ (ಅಧ್ಯಕ್ಷರು),ಶಿವರಾಜ್ ಅಲ್ಲಿಪುರ (ಉಪಾಧ್ಯಕ್ಷರು), ಮಲ್ಲಿಕಾರ್ಜುನ್ (ಪ್ರಧಾನ ಕಾರ್ಯದರ್ಶಿಗಳು), ಶಶಿಕುಮಾರ್ ಮಲಗೊಂಡ, (ಪ್ರಧಾನ ಕಾರ್ಯದರ್ಶಿಗಳು) ಶ್ರೀಧರ್ ಖಜಾಂಚಿ), ಅರುಣ್ ಕುಮಾರ್ (ಸಂಚಾಲಕ), ಮಹಾಂತೇಶ್ (ಸಹ ಸಂಚಾಲಕ),ರಾಗಿ ನೇಮಕ ಮಾಡಿ ಜಿಲ್ಲಾಧ್ಯಕ್ಷರಾದ ಮಹೇಶಗೌಡ ಸುಬೇದಾರ ಆದೇಶ ಹೊರಡಿಸಿದ್ದಾರೆ.

ಸರ್ಕಾರದಿಂದ ಸಿಗುವ ಯೋಜನೆಗಳು ಸಮರ್ಪಕವಾಗಿ ರೈತರಿಗೆ ಸಿಗುವಂತೆ ಹಾಗೂ ರೈತರ ಹಿತರಕ್ಷಣೆಗಾಗಿ ಹೋರಾಟ ಮಾಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಪೂರ್ವದಲ್ಲಿ ರೈತ ಚೇತನ ದಿವಂಗತ ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಮತ್ತು ಮಾಜಿ ಪ್ರಧಾನಿಗಳಾದ ಚೌಧರಿ ಚರಣಸಿಂಗ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಗೌರವಾಧ್ಯಕ್ಷರಾದ ಸಿದ್ದಣ್ಣ ಬಡಿಗೇರ,ತಾಲ್ಲೂಕು ಅಧ್ಯಕ್ಷರಾದ ಸಂಗಣ್ಣ ಮೂಡಬೂಳ,ನಗರ ಘಟಕ ಅಧ್ಯಕ್ಷ ಗಂಟೆಪ್ಪ,ಹಾಗೂ ಗ್ರಾಮದ ಯುವಕರು,ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಸಂಘದ ತಾಲೂಕಿನ ಗೌರವ ಅಧ್ಯಕ್ಷರಾಗಿ ಸಿದ್ದಣ್ಣ ಬಡಿಗೇರ, ತಾಲೂಕಿನ ಘಟಕದ ಅಧ್ಯಕ್ಷರಾದ ಸಂಗಣ್ಣ ಮೂಡಬುಳ, ನಗರ ಘಟಕ ಅಧ್ಯಕ್ಷರು ಗಂಟೆಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here