ಆಶಾಗಳ ಆಕ್ರಂಧನ ಕೇಳಿಸಕೊಳ್ಳದ ಕಿವುಡ ಬಿಜೆಪಿ ಸರ್ಕಾರ: ಕೊರೊನಾ ವಾರಿಯರ್ಸ್ ಹೋರಾಟಕ್ಕೆ ಎಐಡಿಎಸ್‌ಒ ಬೆಂಬಲ

0
64

ವಾಡಿ: ಸಾವಿಗೆ ಸವಾಲು ಹಾಕಿ ಸೋಂಕಿತರ ಮಧ್ಯೆ ಸೇವೆ ನೀಡಿದ್ದ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಬೇಡಿಕೆಯ ಕೂಗಿಗೆ ಕಿವುಡ ಬಿಜೆಪಿ ಸರ್ಕಾರ ಕಿವಿಗೊಡುತ್ತಿಲ್ಲ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಸ್ಟ್ ಆರ್ಗನೈಸೇಷನ್ (ಎಐಡಿಎಸ್‌ಒ) ನಗರ ಸಮಿತಿ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಆಕ್ರೋಶ ವ್ಯಕ್ತಪಡಿಸಿದರು.

ಕನಿಷ್ಟ ಮಾಸಿಕ ರೂ.೧೨೦೦೦ ಗೌರವಧನ ಹೆಚ್ಚಳ ಸೇರಿದಂತೆ ಇತರ ಬೇಡಿಕೆಗಳಿಗಾಗಿ ಆಗ್ರಹಿಸಿ ಕಳೆದ ೧೭ ದಿನಗಳಿಂದ ಮುಷ್ಕರದಲ್ಲಿರುವ ರಾಜ್ಯದ ಕೊರೊನಾ ಫ್ರಂಟ್ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ಹೋರಾಟವನ್ನು ಬೆಂಬಲಿಸಿ ಹಳಕರ್ಟಿ ಗ್ರಾಪಂ ಕಚೇರಿ ಮುಂದೆ ಎಐಡಿಎಸ್‌ಒ ಹಮ್ಮಿಕೊಂಡಿದ್ದ ಸಾಂಕೇತಿಕ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಮಹಮಾರಿ ಕೊರೊನಾ ವಿರುದ್ಧದ ಸರಕಾರದ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಆಶಾ ಕಾರ್ಯಕರ್ತೆಯರು, ವಲಸಿಗರ ಕ್ವಾರಂಟೈನ್ ಕೇಂದ್ರಗಳಲ್ಲಿ, ಸೀಲ್ಡೌನ್ ಏರಿಯಾಗಳಲ್ಲಿ, ರೆಡ್ ಝೋನ್ ಬಡಾವಣೆಗಳಲ್ಲಿ ಮತ್ತು ಕೋವಿಡ್ ಶಂಕಿತರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ಕಾಪಾಡುವ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಸೇವೆಯನ್ನು ಗೌರವದಿಂದ ಕಾಣಬೇಕಾದ ರಾಜ್ಯ ಸರ್ಕಾರ, ಲಾಕ್‌ಡೌನ್ ತಿಂಗಳುಗಳಲ್ಲಿ ಸಮರ್ಪಕವಾಗಿ ಗೌರವಧನ ನೀಡದೆ ಅಗೌರವ ಮತ್ತು ಅಮಾನದಿಂದ ಕಂಡಿತು ಎಂದು ದೂರಿದರು.

Contact Your\'s Advertisement; 9902492681

ಮುಷ್ಕರದಲ್ಲಿರುವ ಆಶಾ ಕಾರ್ಯಕರ್ತೆಯರು ತಾಳ್ಮೆ ಕಳೆದುಕೊಂಡಿದ್ದಾರೆ. ಸರಕಾರದ ಅಸಡ್ಡೆ ಭಾವನೆಗೆ ಕೆರಳಿದ್ದಾರೆ. ಮುಖ್ಯಮಂತ್ರಿಗಳ ನಿವಾಸ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಮುಂದೆ ಜೈಲ್ ಭರೋ ಚಳುವಳಿಗೂ ಮುಂದಾಗುತ್ತಾರೆ. ಈ ಎಲ್ಲಾ ಹೋರಾಟಗಳಿಗೆ ಎಐಡಿಎಸ್‌ಒ ಬೆಂಬಲ ವ್ಯಕ್ತಪಡಿಸಿ ಚಳುವಳಿಯಲ್ಲಿ ಭಾಗವಹಿಸಲಿದೆ ಎಂದು ಎಚ್ಚರಿಸಿದರು. ಮುಖಂಡರಾದ ಅರುಣಕುಮಾರ ಹಿರೆಬಾನರ, ದತ್ತಾತ್ರೇಯ ಹುಡೇಕರ, ಸುನೀಲ ಪೂಜಾರಿ, ಭೀಮಾಶಂಕರ ಮಳಗೇರ, ಸಿದ್ದಾರ್ಥ ತಿಪ್ಪನೋರ ಪಾಲ್ಗೊಂಡಿದ್ದರು.

ಇಂಗಳಗಿ ಪಿಡಿಒಗೆ ಮನವಿ: ಆಶಾ ಕಾರ್ಯಕರ್ತೆಯರ ರಾಜ್ಯ ವ್ಯಾಪಿ ಮುಷ್ಕರವನ್ನು ಬೆಂಬಲಿಸಿ ಎಐಡಿಎಸ್‌ಒ ಕಾರ್ಯಕರ್ತರು ಸೋಮವಾರ ಇಂಗಳಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರೇಶ್ಮಾ ಕೊತ್ವಾಲ ಅವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಇಂಗಳಗಿ ಗ್ರಾಮ ಘಟಕದ ನಾಯಕಿ ಪ್ರೀತಿ ಬಳವಡಗಿ ಇದ್ದರು.

ಮುಖ್ಯಾಧಿಕಾರಿಗೆ ಮನವಿ: ಕೊರೊನಾ ಫ್ರಂಟ್ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ಹೋರಾಟವನ್ನು ಬೆಂಬಲಿಸಿ ವಿದ್ಯಾರ್ಥಿ ಸಂಘಟನೆ ಎಐಡಿಎಸ್‌ಒ ಮುಖಂಡರು ವಾಡಿ ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಅವರ ಮೂಲಕ ರಾಜ್ಯ ಸರ್ಕಾಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಪುರಸಭೆ ಸದಸ್ಯ ತಿಮ್ಮಯ್ಯ ಪವಾರ, ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರ್ತೂರಕರ, ಕಾರ್ಯದರ್ಶಿ ವೆಂಕಟೇಶ ದೇವದುರ್ಗ, ಮುಖಂಡರಾದ ತುಕಾರಾಮ ರಾಠೋಡ, ರಾಜಾ ಪಟೇಲ, ಅರುಣಕುಮಾರ ಹಿರೇಬಾನರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here