ಕಲಬುರಗಿ: ದಕ್ಷಿಣ ಮತ ಕ್ಷೇತ್ರದ ಶಾಸಕರಾದ ದತ್ರಾತ್ರೇಯ ಸಿ.ಪಾಟೀಲ್ ರೇವೂರ ಅವರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದಕ್ಕೆ ದಕ್ಷಿಣ ಮತಕ್ಷೆತ್ರದ ಬಿಜೆಪಿ ರೈತಮೊರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷರಾದ ಭೀಮಾಶಂಕರ.ಎನ್.ಯಳಮೇಲಿ ಅವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಶಾಸಕರ ನಿರಂತರ ಶ್ರಮಕ್ಕೆ ಪ್ರಯತ್ನ ಒಲಿದು ಬಂದ ಅವಕಾಶವಾಗಿದೆ. ಈ ಬಾಗ ಹೆಚ್ಚಿನ ಅಭಿವೃದ್ದಿಯಾಗಲಿ ತಮ್ಮ ದಾರಿ ಯಶಸ್ವಿಯಾಗಲಿ ಹಾರೈಸಿದ್ದಾರೆ.
ಸೇಡಂ ಶಾಸಕರಾದ ರಾಜಕುಮಾರ ಪಾಟೀಲ್ ತೇಲಕೂರ ಅವರು ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ಯಳಮೇಲಿ ಅವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.