ಕಲಬುರಗಿ: ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಜನ ಸಾಮಾನ್ಯರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ವಕ್ತಾರ ಚೇತನ್ ಗೋನಾಯಕ್ ಹೇಳಿದರು.
ಕಲಬುರಗಿ ತಾಲ್ಲೂಕಿನ ಇಟಗಾ (ಅ) ಗ್ರಾಮದಲ್ಲಿ ಕೃಷಿ ಬೆಳೆ ಸಾಲ ವಿತರಣೆ ಸಮಾರಂಭದಲ್ಲಿ ಮಾತನಾಡುತ್ತಾ ಸಹಕಾರ ಸಂಘ, ಸಂಸ್ಥೆಗಳು ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸುವ ಮೂಲಕ ಹಲವು ರೈತರಿಗೆ, ಮಹಿಳೆಯರಿಗೆ ಸಹಕಾರಿಯಾಗಿವೆ. ಮಹಿಳಾ ಸಂಘ, ಸ್ತ್ರಿ ಶಕ್ತಿ ಸಂಘಗಳ ಮೂಲಕ ಮಹಿಳೆಯರು ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತಿಳಿಸಿದರು.
ಪ್ರತಿಯೊಬ್ಬರು ಈ ಸಹಕಾರಿ ಸಂಘಗಳ ಜತೆ ಭಾಗವಹಿಸಿ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಗೋನಾಯಕ್ ಹೇಳಿದರು.
ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷ ಭೀಮಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಬುರಾವ ರಾಠೋಡ, ಯುವ ಮುಖಂಡರಾದ ಅರುಣ್ ಗೋನಾಯಕ್, ಉಮಲಾ ಆಡೆ, ರಾವಯ್ಯ ಮಠಪತಿ, ಶಿವಯೋಗಿ, ಸಿದ್ದು ಬಾಳಿ, ಅತಥಿ, ವಿದ್ಯಾಧರ ಭೇರಜಿ ,ಶ್ರೀಮನಿ ಹಾಗೂ ಗ್ರಾಮಸ್ಥರು ಇದ್ದರು.