ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ಹಾಕಿದ ಕೇಸ್ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ

0
116

ಶಹಾಪುರ : 28 : ನಾಡಿನ ಪತ್ರಕರ್ತ, ಶರಣ ಸಾಹಿತಿ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆಯವರ ಮೇಲೆ ದಾವಣಗೆರೆಯ ಹೊನ್ನಾಳಿಯಲ್ಲಿ ಹಾಕಿರುವ ಖೊಟ್ಟಿ ಕೇಸ್‍ನ್ನು ವಾಪಾಸ ಪಡೆಯಬೇಕೆಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಶ್ರೀ. ವಿಶ್ವೇಶ್ವರಯ್ಯ ಶಿವಾಚಾರ್ಯ ಸ್ವಾಮಿಗಳ ಮೇಲೆ ಫೇಸ್ ಬುಕ್ ನಲ್ಲಿ ಬರೆದರೆನ್ನಲಾದ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಪ್ರತಿಯಾಗಿ ಸೆಕ್ಷನ್ 505 ಐ.ಪಿ.ಸಿ. ಪ್ರಕಾರ ಕೇಸು ದಾಖಲಿಸಿದ್ದು ಕುತಂತ್ರಗಳಿಂದ ಕೂಡಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭೆ ಆರೋಪಿಸಿದೆ.

Contact Your\'s Advertisement; 9902492681

ಕರ್ನಾಟಕದ ಜನತೆ ಬಲ್ಲಂತೆ ವಿಶ್ವಾರಾಧ್ಯ ಸತ್ಯಂಪೇಟೆ ದಿಟ್ಟ ಪತ್ರಕರ್ತರು. ಶರಣ ಸಾಹಿತ್ಯದ ಬಗೆಗೆ ಆಳವಾದ ಅಧ್ಯಯನ ಮಾಡಿದವರು. ಈಗಾಗಲೇ ಶರಣ ಸಾಹಿತ್ಯದ ಕುರಿತು ಮಹತ್ವದ ಪುಸ್ತಕಗಳೂ ಅವರಿಂದ ಪ್ರಕಟವಾಗಿವೆ. ಪ್ರಸ್ತುತ ಜಾಗತಿಕ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿಯೂ ಆಗಿರುವ ಅವರ ಮೇಲೆ ಮುದ್ದಾಂ ಕೇಸ್ ಗಳನ್ನು ದಾಖಲಿಸುವ ಮೂಲಕ ಅವರ ಮಾನಸಿಕ ಶಕ್ತಿಯನ್ನು ಕುಗ್ಗಿಸಲು ಯತ್ನಿಸುತ್ತಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸಿದೆ.

ಬುದ್ಧ ಬಸವ ಅಂಬೇಡ್ಕರ್ ಅವರ ತತ್ವಗಳ ಮೇಲೆ ಸಮ ಸಮಾಜ ಕಟ್ಟಬೇಕೆನ್ನುವ ಅವರ ವಿಚಾರಕ್ಕೆ ಧಕ್ಕೆ ಉಂಟು ಮಾಡಬೇಕೆಂಬ ಮೂಲಭೂತವಾದಿಗಳ ತಂತ್ರವನ್ನು ಸಂಘಟನೆ ಬಲವಾಗಿ ಖಂಡಿಸಿದೆ. ಸೈದ್ಧಾಂತಿಕ ತತ್ವದ ತಳಹದಿಯ ಮೇಲೆ ಚರ್ಚೆ ಮಾಡಲು ಬಯಸದೆ ಬೆದರಿಸುವ ತಂತ್ರಗಳನ್ನು ಅನುಸರಿಸಿ ಪೊಲೀಸ್ ಕೇಸ್ ದಾಖಲು ಮಾಡಿದರೆ ಸಂಘಟನೆಯೂ ರಾಜ್ಯಾದಾದ್ಯಂತ ಹೋರಾಟ ವನ್ನು ರೂಪಿಸುತ್ತದೆ ಎಂದು ಅದು ಎಚ್ಚರಿಸಿತು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ದಾವಲಸಾಬ ನದಾಫ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ರೈತ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ ,ಕರ್ನಾಟಕ ಪ್ರಾಂತ ರೈತ ಸಂಘದ ಚೆನ್ನಪ್ಪ ಆನೇಗುಂದಿ, ಜಾಗತಿಕ ಲಿಂಗಾಯತ ಮಹಾಸಭೆಯ ತಾಲೂಕು ಅಧ್ಯಕ್ಷ ಶಿವಣ್ಣ ಇಜೇರಿ, ಕಾರ್ಯದರ್ಶಿ ಷಣ್ಮುಖಪ್ಪ ಅಣಬಿ, ವಿವಿಧ ಸಂಘಟನೆಯ ಸದಸ್ಯರಾದ ಬಸವರಾಜ, ಶಿವಕುಮಾರ, ರಫೀಕ್, ಸಂತೋಷ ಶಹಾಪುರ, ಚಂದ್ರಕಾಂತ, ದೇವು, ಲಾಲಸಾಬ ಕಾಡಮಗೇರಾ, ಬಾಬು ಗುಂಡಳ್ಳಿ, ಮಹಿಬೂಬ ಸಾಬ ಗುಂಡಳ್ಳಿ, ಸಿದ್ಧಯ್ಯ ಗುಂಡಳ್ಳಿ, ನಿಂಗಣ್ಣ ನಾಟೇಕಾರ, ಮೈಲಾರೆಪ್ಪ ತಿಪ್ಪನಳ್ಳಿ, ಗಂಗಮ್ಮ ಕಟ್ಟಿಮನಿ, ಭೀಮಮ್ಮ ನಾಯ್ಕೋಡಿ, ಜೈಲಾಲ ತೋಟದ ಮನಿ, ಎಸ್.ಎಂ.ಸಾಗರ , ಶಿವರುದ್ರ ಉಳ್ಳಿ, ಶರಣಗೌಡ ಮದ್ರಿಕಿ, ಬಸವರಾಜ ನರಬೋಳಿ, ಸೈಯದ್ ಇಬ್ರಾಹಿಂಸಾಬ ವಕೀಲರು, ಎಂ.ಕೆ. ಕರಿಗುಡ್ಡ ವಕೀಲರು, ಬಸವರಾಜ ಕುಂಬಾರಳ್ಳಿ, ಶರಣು ಬೊಮ್ಮನಳ್ಳಿ ಮೊದಲಾದವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here