- ರಾಜು ಮುದ್ದಡಗಿ
ಜೇವರ್ಗಿ: ಕೊರೋನಾ ವೈರಸ್ ವ್ಯಾಪಕ ಹರಡುವಿಕೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಾದರೆ ತಾಲೂಕಿನಲ್ಲಿಯೇ ಅವರಿಗೆ ಚಿಕಿತ್ಸೆಯನ್ನು ನೀಡಲು ಪ್ರಾಥಮಿಕ ಹಂತದಲ್ಲಿ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ನೀಡುವ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಅಗತ್ಯ ಸೌಲಭ್ಯಗಳು ತಾಲೂಕು ಆಡಳಿತ ಹಾಗೂ ಧರಂಸಿಂಗ್ ಫೌಂಡೇಶನ್ ಸಹಯೋಗದಲ್ಲಿ ಒದಗಿಸಲಾಗುವುದೆಂದು ಶಾಸಕ ಡಾ.ಅಜಯ್ ಸಿಂಗ್ ಹೇಳಿದರು.
ಜೇವರ್ಗಿ ತಾಲೂಕಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಬಸ್ ಡಿಪೋ ಹತ್ತಿರ ಇರುವ ಅಂಬೇಡ್ಕರ್ ವಸತಿ ನಿಲಯ ಹಾಗೂ ಯಾಳವಾರ ಕ್ರಾಸ್ ಹತ್ತಿರದ ಮುರಾರ್ಜಿ ವಸತಿ ಶಾಲೆಯಲ್ಲಿ ಕೆರ್ ಸೆಂಟರ್ ತೆರೆಯಲಾಗುತ್ತದೆ ಎಂದು ಹೇಳಿದರು.
ಇಲ್ಲಿವರೆಗೂ 181 ಕೊರನಾ ವೈರಸ್ ಪಾಸಿಟಿವ್ ವರದಿ ಬಂದಿವೆ.ಹಾಗೂ ಇದರಲ್ಲಿ 150 ಜನರು ಗುಣಮುಖರಾಗಿದ್ದಾರೆ .31 ಜನ ವಿವಿಧ ಕೋವಿಡ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಸೋಂಕಿತರ ಸಂಖ್ಯೆ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಕಡಿಮೆ ಇದೆ. ವಾಸ್ತವಿಕ ಸಂಖ್ಯೆ ಇದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸಿದ್ದರಾಯ ಬೋಸಗಿ, ತಾಲೂಕು ಪಂಚಾಯಿತಿ ಅಧಿಕಾರಿ ವಿಲಾಸ ರಾಜ್, ಪುರಸಭೆ ಮುಖ್ಯಾಧಿಕಾರಿ ಕೆ. ಲಕ್ಷ್ಮೀಶ್, ಸಿಪಿಐ ರಮೇಶ್ ರೊಟ್ಟಿ , ರಾಜಶೇಖರ್ ಸೀರಿ, ರಹಮಾನ್ ಪಟೇಲ ಸೇರಿದಂತೆ ವಿವಿಧ ಇಖೆಗಳ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.