ರಾಜಾ ಮದನಗೋಪಾಲ ನಾಯಕರಿಗೆ ತಾಲೂಕು ಕಸಾಪ ನುಡಿ ನಮನ

0
127

ಸುರಪುರ: ಮೊನ್ನೆ ತಾನೇ ನಿಧನರಾದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರು ಕೇವಲ ರಾಜಕಾರಣಿಗಳಾಗಿರಲಿಲ್ಲ, ಸಾಹಿತ್ಯ, ಸಂಸ್ಕೃತಿ, ಕಲೆ, ಶಿಲ್ಪಕಲೆ, ಸಂಗೀತ, ನೃತ್ಯ, ಲಲಿತಕಲೆ, ಸಾಮಾಜಿಕ ಕಾರ‍್ಯಗಳು, ಶೈಕ್ಷಣಿಕ ಚಟುವಟಿಕೆಗಳು, ಸ್ಕೌಟ್ ಮತ್ತು ಗೈಡ್ಸ್‌ನ ಜಿಲ್ಲಾಧ್ಯಕ್ಷರು ಹೀಗೆ ಅವರ ನಿರಂತರವಾದ ಕಾರ‍್ಯ ಚಟುವಟಿಕೆಗಳಿಂದ ಅವರು ಜನಮಾನಸದ ನಾಯಕರಾಗಿದ್ದರು. ಅವರ ಅಗಲಿಕೆ ನಿಜಕ್ಕೂ ನಮಗೆಲ್ಲಾ ಬರಸಿಡಿಲು ಬಡಿದಂತಾಗಿದೆ’ ಎಂದು ಹಿರಿಯ ಸಾಹಿತ್ಯ ಸಂಘಟಕ ಬಸವರಾಜ ಜಮದ್ರಖಾನಿ ಹೇಳಿದ್ದಾರೆ.

ಅವರು ಸುರಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಿದ್ದ ನುಡಿನಮನ ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ’ಸಾಹಿತಿಗಳನ್ನು ಬೆಳೆಸಿದ ಕೀರ್ತಿ, ಕ್ರೀಡಾಪಟುಗಳಿಗೆ ಬೆನ್ನೆಲುಬಾಗಿ ನಿಂತವರು, ಸದಾ ಬಡವರ, ದೀನ ದಲಿತರ, ಶೋಷಿತರ ಪರ ಹೋರಾಟ ಮಾಡಿದವರು ರಾಜಾ ಮದನ ಗೋಪಾಲ ನಾಯಕರು, ಅವರ ಅಭಿರುಚಿಯನ್ನು ನೋಡಬೇಕಾದರೇ, ಗರುಡಾದ್ರಿ ಕಲಾ ಮಂದಿರವನ್ನು, ಅಲ್ಲಿರುವ ಶಿಲ್ಪವನ್ನು ನೋಡಬೇಕು. ಅವರು ಸಾಹಿತ್ಯ, ಸಂಗೀತ, ಕಲೆ, ಕ್ರೀಡೆಗಳನ್ನು ಪ್ರೋತ್ಸಾಹಿಸಿದ ರಾಜರಾಗಿದ್ದರು, ಅವರು ನಿಜಕ್ಕೂ ಜನಸಾಮಾನ್ಯರ ಹೃದಯ ಸಿಂಹಾಸನದಲ್ಲಿ ನೆಲೆಯೂರಿದವರು’ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹೇಳಿದರು.

Contact Your\'s Advertisement; 9902492681

ನೊಂದವರ ಬಾಳಿನ ಆಶಾ ಕಿರಣರಾಗಿದ್ದ ಅವರ ಮೂರ್ತಿಯನ್ನು ಗರುಡಾದ್ರಿ ಕಲಾ ಮಂದಿರದಲ್ಲಿ ನಿಲ್ಲಿಸಬೇಕು, ಅವರ ಹೆಸರನ್ನು ಸುರಪುರ ಎಪಿಎಂಸಿ ಮಾರುಕಟ್ಟೆಗೆ ಹಾಗೂ ಒಂದು ವೃತ್ತಕ್ಕೆ ಇಡಬೇಕು, ಅವರ ಬಗ್ಗೆ ಸಂಸ್ಮರಣ ಗ್ರಂಥ ಹೊರ ತರಬೇಕು ಎಂದು ಹಲವರು ಅಭಿಪ್ರ್ರಾಯ ವ್ಯಕ್ತಪಡಿಸಿದರು. ರಾಜ್ಯ ರೈತ ನಾಯಕ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ,ರಾಜಾ ಮದನಗೋಪಾಲ ನಾಯಕ ಗರುಡಾದ್ರಿ ಕಲಾ ಮಂದಿರ ಎಂದು ಕರೆಯುವುದು ಸೂಕ್ತವಾಗಿದೆ ಎಂದರು.

ಕಾರ‍್ಯಕ್ರಮದಲ್ಲಿ ಬಸವರಾಜ ನಿಷ್ಠಿ ದೇಶಮುಖ, ನಿಂಗಣ್ಣ ಚಿಂಚೋಡಿ, ಕನಕಪ್ಪ ವಾಗಣಗೇರಿ, ಮಹಾಂತೇಶ ಗೋನಾಲ, ಜಯಲಲಿತಾ ಪಾಟೀಲ, ಇಕ್ಬಾಲ್ ರಾಹಿ, ಗೀತಾರಾಣಿ ಕಟ್ಟಿಮನಿ, ಸಿದ್ಧಯ್ಯ ಸ್ಥಾವರಮಠ, ಯಲ್ಲಪ್ಪ ನಾಯಕ, ರಾಘವೇಂದ್ರ ಭಕ್ರಿ, ಅರ್ಷದ್ ದಖನಿ, ಉಸ್ತಾದ ವಜಾಹತ್ ಹುಸೇನ್, ಸೋಮರೆಡ್ಡಿ ಮಂಗ್ಯಾಳ, ಎಚ್.ರಾಠೋಡ, ಪಂಡಿತ ನಿಂಬೂರೆ, ಅವಹ್‌ಬಿನ್ ಅಮರ ಜಾವುಶ್, ಮಾತನಾಡಿದರು.

ಶರಣಬಸವ ಯಾಳವಾರ, ಶಾಂತು ಬಾರಿ, ಹಸೀನಾ ಬಾನು, ಯಲ್ಲಪ್ಪ, ಯಂಕಣ್ಣ ಕಟ್ಟಿಮನಿ, ನಬೀಲಾಲ ಮಕಾನದಾರ, ಸಾಹೇಬರೆಡ್ಡಿ, ಸ್ಯಾಮ್ಯುಯಲ್ ಶಿಕ್ಷಕರು ಹಾಗೂ ಶಹಪುರ, ಯಾದಗಿರಿಯ ಸಾಹಿತಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕಸಾಪ ಗೌರವ ಕಾರ‍್ಯದರ್ಶಿ ದೇವು ಹೆಬ್ಬಾಳ ಕಾರ‍್ಯಕ್ರಮ ನಿರೂಪಿಸಿ, ಸ್ವಾಗತಿಸಿದರು, ಇನ್ನೊರ್ವ ಕಸಾಪ ಗೌ.ಕಾರ‍್ಯದರ್ಶಿ ರಾಜಶೇಖರ ದೇಸಾಯಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here