ಕಲ್ಯಾಣ ಕರ್ನಾಟಕದ(ಹೈ.ಕ.ಭಾಗದ) ಶಿಕ್ಷಣ ಶಿಲ್ಪಿ, ಲಿಂ. ಮಹಾದೇವಪ್ಪ ರಾಂಪುರೆ

0
678

ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ಭಾಗದ) ಶಿಕ್ಷಣ ಸಂಸ್ಥೆಯ ಜನಕ  ಶ್ರೀಮಹಾದೇವಪ್ಪ ರಾಂಪುರೆ ಅವರು ಕಲ್ಯಾಣ ಕರ್ನಾಟಕ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿ. ಮೂಲತಃ ಮಹಾರಾಷ್ಟ್ರ ರಾಜ್ಯದ ಸೋಲ್ಲಾಪುರ ಜಿಲ್ಲೆಯ ಕುಂಬಾರಿ ಎಂಬ ಹಳ್ಳಿಯ ರಾಂಪುರೆ ಮನೆತನದವರು.  ಒಕ್ಕಲುತನ ಮನೆತನದ ಯಶವಂತಪ್ಪ ಮತ್ತು ಗುರುದೇವಿ ಎಂಬ ಆದರ್ಶ ದಂಪತಿಯ ಪ್ರಥಮ ಸುಪುತ್ರನಾಗಿ ಮಹಾದೇವಪ್ಪ ರಾಂಪುರೆ ಅವರು 1.8.1922 ರಂದು ಜನಿಸಿದರು.  ಚೆನ್ನಬಸಪ್ಪ, ಸಾತಲಿಂಗಪ್ಪ, ದುಂಡಪ್ಪ, ಚಂದ್ರಶೇಖರ  ರಾಂಪುರೆ ಅವರ ತಮ್ಮಂದಿರು, ಒಬ್ಬಳು ತಂಗಿಯಾದ ಕಮಲಾದೇವಿ ಇದ್ದರು. ರಾಂಪುರೆ ಅವರ ಮನೆದೇವರಾದ ಪೂನಾದ ಸಿಂಗಣಾಪುರ ಮಹಾದೇವರು. ಮಹಾದೇವಪ್ಪ ಪ್ರಾಥಮಿಕ ಶಿಕ್ಷಣ ಹುಟ್ಟೂರಿನ ಕುಂಬಾರಿ ಎಂಬ ಗ್ರಾಮದಲ್ಲಿ. ನಂತರ ಸೊಲ್ಲಾಪುರದ ಪ್ರಸಿದ್ಧ ಶಿಕ್ಷಣ ಸಂಸ್ಥೆ ಹರಿಬಾಯಿ ದೇವಕರಣದಲ್ಲಿ ಪ್ರೌಢ ಶಿಕ್ಷಣ ಪಡೆದರು. ಮಹಾದೇವಪ್ಪ ರಾಂಪುರೆ 14 ವರ್ಷದ ಬಾಲ್ಯದ ಹುಡುಗನಾಗಿದ ಕಾಲದಲ್ಲಿ ಭಾರತ ದೇಶದ ಪ್ರಧಾನಮಂತ್ರಿಗಳಾದ ಜವಹರಲಾಲ್ ನೆಹರು ಅವರು ಸೋಲ್ಲಾಪುರಕ್ಕೆ ಬಂದಿದರು. ಆಗ ಅವರಿಗೆ ಹೂವಿನ ಹಾರ ಹಾಕಿ  ಎಲ್ಲರ ಗಮನ ಸೆಳೆದರು.  ಆ ಬಾಲಕನ ಧೈರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾದೇವಪ್ಪ ರಾಂಪುರೆ ಉನ್ನತ ಶಿಕ್ಷಣ ಕೋಲ್ಲಾಪುರದಲ್ಲಿ ಆರಂಭಿಸಿ ನಂತರ ಉನ್ನತ ಶಿಕ್ಷಣ ಮುಕ್ತಾಯಗೊಳಿಸಿದರು. ಬ್ರಿಟಿಷರ ವಿರುದ್ಧ ಚಳುವಳಿ, ಹೋರಾಟ, ಸಂಘಟನೆ ಮಾಡುತ್ತಾ ಜನ ನಾಯಕರಾದರು. ಮಹಾದೇವಪ್ಪ ರಾಂಪುರೆ ಅವರ ರಾಜಕೀಯ ಗುರುಗಳಾದ ಶ್ರೀ ಎಂ.ಎನ್. ರಾಯ್ (ಮಾನವೇಂದ್ರನಾಥ), ಭಾರತ ದೇಶದ ರಾಷ್ಟ್ರ ಪಿತಾಮಹ ಮಹ್ಮಾತ ಗಾಂಧಿ ಜೀ ಅವರ ಸತ್ಯಾಗ್ರಹದಲ್ಲಿ  ಜನರ ಸಹಾಯ, ಸಹಕಾರ ಒಂದು ಗೂಡಿಸುವ ಹರಸಾಹಸಕ್ಕೆ ಮಹಾದೇವಪ್ಪ ರಾಂಪುರೆ  ಬೆನ್ನು ಹತ್ತಿದರು. ನಂತರ ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದು. ಸಾರ್ವಜನಿಕರ ಸಭೆ ಸಮಾರಂಭಗಳನ್ನು ಮಾಡಿ ಜನರಿಗೆ ಶಕ್ತಿ ಮತ್ತು ವಿಚಾರಗಳನ್ನು  ತುಂಬುವ ಉದ್ದೇಶವಾಗಿತ್ತು.

Contact Your\'s Advertisement; 9902492681

ಮಹಾದೇವಪ್ಪ ರಾಂಪುರೆವರೆಗೆ ಬಂಧಿಸಿ ಜೈಲಿಗೆ ಕಳಿಸಬೇಕು ಎನ್ನುವುದು ಬ್ರಿಟಿಷ್  ಉದ್ದೇಶವಾಗಿತ್ತು. ಆದರೆ ಗುಪ್ತಚರ ಮಾಹಿತಿ ಪ್ರಕಾರ ಅವರ ಅಜ್ಜನಿಗೆ ತಿಳಿದು ಬರುತ್ತದೆ. ಆಗಿನ ಕಾಲದಲ್ಲಿ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಶ್ರೀಮಂತ ಮನೆತನದ ಶಿವಪ್ಪ ಬಂಡಕ ಅವರ ಮನೆಗೆ ಕಳಿಸುತ್ತಾರೆ. ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿ ಅಡತ ವ್ಯಾಪಾರಿಗಳು ಆಗಿದ್ದರು. ಬಂಡಕ ಮನೆಯಲ್ಲಿ ಮಹಾದೇವಪ್ಪ ರಾಂಪುರೆ  ವಾಸವಾಗಿದ್ದರು.

ಆದರ್ಶ ದಂಪತಿಗಳಾದ ಶಿವಪ್ಪ ಮತ್ತು ಚೆಂಗಳೆಮ್ಮ ಅವರ ಒಬ್ಬಳು ಸುಪುತ್ರಿಯಾದ ತಾರಾಬಾಯಿಗೆ ರಾಂಪುರೆ ಅವರು 1942 ರಲ್ಲಿ  ಮದುವೆ   ಆದರು. ಸಂಸಾರ ಆರಂಭವಾಯಿತು. ಹಾಗೆ ಸಾರ್ವಜನಿಕರ ಸೇವೆ  ಮಾಡುತ್ತೀದ್ದರು. ರಾಂಪುರೆ ಜೀವನದಲ್ಲಿ ಮಹತ್ವದ ಸ್ಥಾನ ಗಳಿಸಲು ನಿರಂತರ ಹೋರಾಟಗಳು, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ ಅವರು ಸಾರ್ವತ್ರಿಕ ಚುನಾವಣೆಗೆ ಧುಮುಕುತ್ತಾರೆ.

1957 ರಲ್ಲಿ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಲೋಕಸಭಾ ಸದಸ್ಯರಾಗಿ ಆಯ್ಕೆ. ನಂತರ 1962 ರಲ್ಲಿ ಮತ್ತು 1967 ರಲ್ಲಿ  ಲೋಕಸಭಾ ಸದಸ್ಯರಾಗಿ ಒಟ್ಟು ಮೂರು ಬಾರಿ  ಆಯ್ಕೆ ಆಗುತ್ತಾರೆ.  ಸಾರ್ವಜನಿಕರ ಸೇವೆ ನಿರಂತರವಾಗಿ ಮಾಡುವುದು ಮಹಾದೇವಪ್ಪ ರಾಂಪುರೆ ಅವರ ಉದ್ದೇಶ. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಉಪಾಧ್ಯಕ್ಷರಾಗಿ ಕಾರ್ಯದರ್ಶಿಗಳಾಗಿ, ಪೂಜೆ ದೊಡ್ಡಪ್ಪ ಅಪ್ಪಾನವರ ಕೈಯಲ್ಲಿ ಕೆಲಸ ಮಾಡುವ ಅವಕಾಶ, ಶ್ರೀ ಶರಣಬಸವೇಶ್ವರ  ಶಿಕ್ಷಣ ಸಂಸ್ಥೆಯಲ್ಲಿ  ಸೇವೆ ಮಾಡುವ ಅವಕಾಶ ಸಿಕ್ಕಿತು.

ಮಹಾದೇವಪ್ಪ ರಾಂಪುರೆ  ಹೆಚ್ಚು ಆಸಕ್ತಿ ಎಂದರೆ ಶಿಕ್ಷಣ ಕ್ಷೇತ್ರ, ರಾಜಕೀಯ ಕ್ಷೇತ್ರ, ಸಾಹಿತ್ಯ ಕ್ಷೇತ್ರದಲ್ಲಿ ಮಹಾದೇವಪ್ಪ ರಾಂಪುರೆ ಕನ್ನಡ ನಾಡು, ನುಡಿ, ಸಂಸ್ಕೃತಿ, ನೆಲ, ಜಲದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಆಗಿನ ಕಾಲದಲ್ಲಿ  ಕನ್ನಡ ಸಾಹಿತ್ಯ ಸಮ್ಮೇಳನದ  ಕಾಯ೯ದಶಿ೯ಗಳಾಗಿ 1949 ರಲ್ಲಿ ಕೆಲಸ ಮಾಡಿದ್ದರು. ಕಲಬುರಗಿ ಜಿಲ್ಲೆಯಲ್ಲಿ  ಶಿಕ್ಷಣ ಸಂಸ್ಥೆಯನ್ನು ಆರಂಭಿಸುತ್ತಾರೆ. ಅಂದಿನ ಕಾಲದಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು 3.4.1958 ರಲ್ಲಿ ಸರ್ಕಾರದ ನೋಂದಣಿ ಕಛೇರಿಯಲ್ಲಿ ಶಿಕ್ಷಣ ಸಂಸ್ಥೆಯ ಹೆಸರು ನೋಂದಣಿ  ಸಂಖ್ಯೆ 1/1350 (ರಿ). ಕಾನೂನು ಪ್ರಕಾರ ನೋಂದಣಿ ಮಾಡಿಸಿದರು.

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ 1958 ರಲ್ಲಿ ಸ್ಥಾಪನೆ ಮಾಡಿದರು. ಸಂಸ್ಥೆ ಆರಂಭದಲ್ಲಿ ರಾಂಪುರೆ ಮೊದಲ ಕಾಯಾ೯ಧರ್ಶಿಗಳಾಗಿ ನಂತರ 1959 ರಲ್ಲಿ  ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ಸಾರ್ವಜನಿಕರ ಬೆಂಬಲ ಜೊತೆಗೆ, ಜನರಿಂದಲೇ ಹಣ ಸಂಗ್ರಹಿಸಿ  ಶಿಕ್ಷಣ ಸಂಸ್ಥೆ ಕಟ್ಟಿದರು.  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಬೆಳೆಸಿದ ಕೀರ್ತಿ ಮಹಾದೇವಪ್ಪ ರಾಂಪುರೆ ಅವರಿಗೆ ಸಲ್ಲುತ್ತದೆ. ಅಂದಿನ ಕಾಲದ ಭಾರತ ದೇಶದ  ಪ್ರಥಮ ಉಪರಾಷ್ಟ್ರಪತಿಗಳಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಅಮೃತ ಹಸ್ತದಿಂದ 15.10.1958 ರಲ್ಲಿ ಪೂಜ್ಯ ದೋಡ್ಡಪ್ಪ ಅಪ್ಪಾ ಇಂಜಿನಿಯರಿಂಗ್ (PDA)  ಕಾಲೇಜು ಉದ್ಘಾಟನೆ ಮಾಡಿಸುತ್ತಾರೆ. ಶ್ರೀ ಶೇಠ ಶಂಕರ ಲಾಲ್ ಕಾನೂನು ಮಹಾವಿದ್ಯಾಲಯ ಅಂದಿನ ಕಾಲದಲ್ಲಿ 17.04.1966 ರಲ್ಲಿ ದೇಶದ ರಾಷ್ಟ್ರಪತಿಗಳಾದ

ಶ್ರೀ ವಿ.ವಿ.ಗಿರಿ ಅವರ ಅಮೃತ ಹಸ್ತದಿಂದ ಕಾಲೇಜು ಶಂಕುಸ್ಥಾಪನೆ ಮಾಡಿಸುತ್ತಾರೆ. ದೇಶದ ರಾಜಕೀಯ ನಾಯಕರಾದ ಶ್ರೀ ನೀಲಂ ಸಂಜೀವರೆಡ್ಡಿ ಅವರು 24.02.1968 ರಲ್ಲಿ ಉದ್ಘಾಟನೆ ಮಾಡುತ್ತಾರೆ. ನಂತರ ಬೀದರ್ ಜಿಲ್ಲೆಯಲ್ಲಿ ಬಿ.ವ್ಹಿ.ಭೂಮರೆಡ್ಡಿ ಮಹಾವಿದ್ಯಾಲಯ 1960 ರಲ್ಲಿ ಆರಂಭಿಸಿದರು. ವಿಶೇಷವಾಗಿ ನಮ್ಮ ಭಾಗದ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ  ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ವಸತಿ ಗೃಹವನ್ನು 1963ರಲ್ಲಿ, 1965 ರಲ್ಲಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಸ್ಥಾಪನೆ ಮಾಡಿದರು.

ಮಹಾದೇವಪ್ಪ ರಾಂಪುರೆ ಕನಸಿನ ಕೂಸು 1963 ರಲ್ಲಿ  ವೈದ್ಯಕೀಯ ಶಿಕ್ಷಣದ ಮಹಾವಿದ್ಯಾಲಯ ಅಂದಿನ ಮುಖ್ಯಮಂತ್ರಿಗಳು ಎಸ್. ನಿಜಲಿಂಗಪ್ಪನವರು ಶಂಕುಸ್ಥಾಪನೆ ಮಾಡಿಸಿದ್ದರು. 1967ರಲ್ಲಿ ಎಸ್. ಎಸ್. ಮರಗೋಳ ಮಹಾವಿದ್ಯಾಲಯ, ಶಹಾಬಾದದಲ್ಲಿ, ನಂತರ ಕಲಬುರಗಿಯ ಎಂ.ಎಸ್. ಐ. ಪದವಿ ಮಹಾವಿದ್ಯಾಲಯ, 1968 ರಲ್ಲಿ ಪ್ರಭು ಮಹಾವಿದ್ಯಾಲಯ, ಸುರಪುರ ತಾಲೂಕಿನಲ್ಲಿ ಆರಂಭಿಸಿದರು. ಶ್ರೀ ಚಂದ್ರಶೇಖರ ಪಾಟೀಲ ಸ್ಮಾರಕ (ವಿದ್ಯಾರ್ಥಿಗಳ)ವಸತಿ ನಿಲಯ 1969 ರಲ್ಲಿ, ಕಲಬುರಗಿ ನಗರದಲ್ಲಿ ಸ್ಥಾಪನೆ ಮಾಡಿದರು. ನಂತರ ಶ್ರೀ ವೀರೇಂದ್ರ ಪಾಟೀಲ ಮಹಾವಿದ್ಯಾಲಯ 1972ರಲ್ಲಿ ಬೆಂಗಳೂರು ರಾಜಧಾನಿಯಲ್ಲಿ ಸ್ಥಾಪನೆ ಮಾಡಿದರು. ಹತ್ತು ಹಲವಾರು ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಿದ ಕೀರ್ತಿ ರಾಂಪುರೆ ಅವರಿಗೆ ಸಲ್ಲುತ್ತದೆ. ಕುಟುಂಬದ ಜವಾಬ್ದಾರಿಯನ್ನು ಮಹಾದೇವಪ್ಪ ರಾಂಪುರೆ ಧರ್ಮಪತ್ನಿ ತಾರಾಬಾಯಿ ಅವರದು ಒಟ್ಟು 8 ಜನಮಕ್ಕಳು ಇದ್ದರು. ಐದು ಜನ ಗಂಡು ಮಕ್ಕಳು, ವಿದ್ಯಾಸಾಗರ, ಅಜಿತ್, ದಿಲೀಪ, ಶರತ, ಜಯದೀಪ, ಮೂರು ಜನ ಹೆಣ್ಣು ಮಕ್ಕಳು, ವಸಂತಪ್ರಭ, ಸುರೇಖ, ಮಾಯಾದೇವಿವರು, ಅವರ ಎಲ್ಲಾ ಮಕ್ಕಳಿಗೂ ಉನ್ನತ ಶಿಕ್ಷಣ ಜ್ಞಾನ ಕಲಿಸಿದರು. ಮಹಾದೇವಪ್ಪ ರಾಂಪುರೆ 06.02.1973 ರಲ್ಲಿ ಬೆಂಗಳೂರಿನ ಸದಾಶಿವ ನಗರದ ಅವರ ಮನೆಯಲ್ಲಿ ಹೃದಯಘಾತದಿಂದ ಮರಣ ಹೊಂದುತ್ತಾರೆ ಎಂದು ಹೇಳಲು ದುಃಖ ಅನಿಸುತ್ತದೆ.

ಕಲಬುರಗಿ ನಗರದಲ್ಲಿ ಅವರ ಪಾರ್ಥಿವ ಶರೀರ ನಗರದ ಪ್ರಮುಖ ಮುಖ್ಯ ರಸ್ತೆಯಲ್ಲಿ ಭವ್ಯ ಮೆರವಣಿಗೆ ಮೂಲಕ  ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ರಾಂಪುರೆ ಅವರ ಅಂತ್ಯಕ್ರಿಯೆ ನಡೆಯುತ್ತದೆ. ಶಿಕ್ಷಣ ಧ್ರುವತಾರೆ ಪಂಚಭೂತಗಳಲ್ಲಿ ಲೀನವಾಗುತ್ತಾರೆ.  ನಮ್ಮ ಕಲ್ಯಾಣ ಕರ್ನಾಟಕದ ಅತ್ಯಂತ ಪ್ರತಿಷ್ಠಿತ  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಡಿಯಲ್ಲಿ ‌ಸುಮಾರು 50 ಕ್ಕೂ ಹೆಚ್ಚು ಕಾರ್ಯನಿರ್ವಹಿಸುವ ಸಂಸ್ಥೆಗಳು ಆಗಿವೆ. ಸಂಸ್ಥೆಯ ಸದಸ್ಯರು ಚುನಾವಣೆಯಲ್ಲಿ ಮತದಾನ ಮಾಡುವ  ಮೂಲಕ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಕೆಲಸ ಮಾಡುತ್ತಾರೆ.

ಒಂದು ಬಾರಿ ಈ ಸಂಸ್ಥೆಯ ಆಡಳಿತವನ್ನು ಮಾನ್ಯ ಜಿಲ್ಲಾಧಿಕಾರಿಗಳು ಕೆಲಸ ಮಾಡಿದ್ದಾರೆ. ಆರಂಭದಿಂದ 1958 ರಿಂದ 2020 ಇಲ್ಲಿ ವರೆಗೆ  ಅಧ್ಯಕ್ಷರಾಗಿ ಕೆಲಸ ಮಾಡಿದ ಸಂಕ್ಷಿಪ್ತ ವಿವರಣೆ ಮತ್ತು ಅವರ ಹೆಸರುಗಳು ಜಿ.ಎನ್. ನಾಗರಾಜ, ಮಹಾದೇವಪ್ಪ ರಾಂಪುರೆ, ಅಂಗಡಿ ಸಂಗಣ್ಣ, ಶರಣಬಸಪ್ಪ ಅಪ್ಪಾ, ಡಾ.ಎ.ಬಿ.ಮಲಕರೆಡ್ಡಿ,     ಡಾ.ಬಿ.ಜಿ.ಜವಳಿ, ಬಸವರಾಜಪ್ಪ ಅಪ್ಪಾ, ಬಸವರಾಜ ಭೀಮಳ್ಳಿ, ಶೆಶೀಲ್ ಜಿ ನಮೋಶಿ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ಪ್ರಸ್ತುತವಾಗಿ ಡಾ. ಭೀಮಾಶಂಕರ ಬಿಲಗುಂದಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಅಧ್ಯಕ್ಷರಾಗಿ ಎರಡು ಬಾರಿ ಮಾತ್ರ  ಕೆಲಸ ಮಾಡುವ ಅವಕಾಶ ಇದೆ. ಅಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು ಅವಧಿ ಮೂರು ವರ್ಷವಾಗಿರುತ್ತದೆ. ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಭಾರತ ದೇಶ, ಕರ್ನಾಟಕ ರಾಜ್ಯಕ್ಕೆ  ಅಪಾರ ಕೊಡುಗೆ ನೀಡಿದ ಶಿಕ್ಷಣ ಸಂಸ್ಥೆ ಆಗಿದೆ.

ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಜಕೀಯ ನಾಯಕರು, ನ್ಯಾಯಮೂರ್ತಿಗಳು, ನ್ಯಾಯವಾದಿಗಳು, ವೈದ್ಯರು, ಇಂಜಿನಿಯರ್, ವಿಜ್ಞಾನಿಗಳು, ಪ್ರೊಫೆಸರ್, ಉಪನ್ಯಾಸಕರು ಇನ್ನೂ ಹೆಚ್ಚು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು, ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ, ನೇರೆ ರಾಜ್ಯ ಮುಖ್ಯಮಂತ್ರಿಗಳಾಗಿ, ನಮ್ಮ ರಾಜ್ಯದ ಸಚಿವರಾಗಿ, ಶಾಸಕರಾಗಿ, ಎಂ.ಎಲ್.ಸಿಗಳಾಗಿ ಮತ್ತು ವಾಯುಪಡೆಯಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ, ತಂತ್ರಜ್ಞಾನದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಕೈಗಾರಿಕಾ ಉದ್ಯಮದಲ್ಲಿ ಹತ್ತು ಹಲವಾರು ಕ್ಷೇತ್ರಗಳಲ್ಲಿ ಈ ಸಂಸ್ಥೆಯ ವಿದ್ಯಾರ್ಥಿಗಳು ಇದ್ದಾರೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಕಲಬುರಗಿ  ಜಿಲ್ಲೆ ಉನ್ನತ ಶಿಕ್ಷಣ ಕೇಂದ್ರ ಸ್ಥಾನವಾಗಿದೆ. ದೇಶದ ಹಲವಾರು ರಾಜ್ಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ  ಪಡೆಯಲು HKE ಶಿಕ್ಷಣ ಸಂಸ್ಥೆಗೆ ಬರುತ್ತಾರೆ ಎಂದು ಹೇಳಲು ಖುಷಿ ಎನ್ನಿಸುತ್ತದೆ. ಸಾವಿರಾರು, ಲಕ್ಷಾಂತರ ವಿದ್ಯಾರ್ಥಿಗಳು ಓದಿದ ಕೀರ್ತಿ ಈ ಸಂಸ್ಥೆಗೆ ಸಲುತ್ತೇದೆ. ಸಾವಿರಾರು ಉದ್ಯೋಗ ನೀಡಿದ    ಮಹಾ ಶಿಕ್ಷಣ ಸಂಸ್ಥೆ ಆಗಿದೆ.

ಅನೇಕ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಇದ್ದಾರೆ. ಉದ್ಯೋಗ ನೀಡುವ  ಉದ್ಯಮಿಗಳು ಆಗಿದ್ದಾರೆ.  ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ನಮ್ಮ ಭಾಗದಲ್ಲಿ ಇರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ನಮ್ಮ ರಾಜ್ಯದ ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಗಿದೆ. ಆಗಸ್ಟ್  ಒಂದನೇಯ ತಾರೀಖು ದಿ.ಮಹಾದೇವಪ್ಪ ರಾಂಪುರೆ ಅವರ 99 ನೇಯ ವರ್ಷದ ಜನ್ಮ ದಿನದ ಶುಭಾಶಯಗಳು

– ಬಿ.ಎಂ.ಪಾಟೀಲ ಕಲ್ಲೂರ, 

9845268676

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here