ಕಲಬುರಗಿ: ಹವಾಮಾನ ಇಲಾಖೆಯ ವಿಶೇಷ ಸೂಚನೆಯಂತೆ ಜಿಲ್ಲೆಯಲ್ಲಿ 2020ರ ಆಗಸ್ಟ್ 3ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಆದ್ದರಿಂದ ಚಿಂಚೋಳಿ ತಾಲೂಕಿನ ಲೋವರ್ ಮುಲ್ಲಾಮಾರಿ ಹಾಗೂ ಚಂದ್ರಂಪಳ್ಳಿ ಜಲಾಶಯಗಳಲ್ಲಿ ನೀರಿನ ಒಳ ಹರಿವು ಹೆಚ್ಚಾದಲ್ಲಿ ಜಲಾಶಯದ ಕ್ರಿಸ್ ಗೇಟಿನ ಮೂಲಕ ನದಿಗಳಿಗೆ ನೀರು ಬೀಡುವ ಸಂಭವ ಇರುತ್ತದೆ ಎಂದು ಚಿಂಚೋಳಿ ತಹಶೀಲ್ದಾರರು ತಿಳಿಸಿದ್ದಾರೆ.
ಗ್ರಾಮಸ್ಥರು ನದಿ, ಹಳ್ಳ, ಕಾಲುವೆ ದಂಡೆಯಲ್ಲಿ ಹೋಗದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ನದಿಯಲ್ಲಿ ಮೀನು ಹಿಡಿಯಲು, ದಂಡೆಯಲ್ಲಿ ಬಟ್ಟೆ ಒಗೆಯಲು ಹೋಗಬಾರದು. ವಾಹನ ತೊಳೆಯುವುದಾಗಲಿ ಮಾಡಬಾರದು. ಮಕ್ಕಳನ್ನು ದಡದಲ್ಲಿ/ ಹಳ್ಳ ಕೊಳ್ಳಗಳಲ್ಲಿ ಈಜಾಡಲು ಬಿಡಬಾರದು ಹಾಗೂ ಜಾನುವಾರುಗಳನ್ನು ನದಿ ದಂಡೆಯಲ್ಲಿ ತೆಗೆದುಕೊಂಡು ಹೋಗಬಾರದು ಎಂದು ಚಿಂಚೋಳಿ ತಹಸೀಲ್ದಾರರು ಎಚ್ಚರಿಕೆ ನೀಡಿದ್ದಾರೆ.