ಸೋಂಕಿತರಿಗೆ ಚಿಕಿತ್ಸೆ ನೀಡಬೇಕಿದ್ದ ಸರಕಾರ ಹಣ ಲೂಟಿ ಮಾಡುವುದರಲ್ಲಿ ನಿರತವಾಗಿದೆ: ಶಾಸಕ ಖರ್ಗೆ

0
59

ಕಲಬುರಗಿ: ಕೊರೋನಾದಂತ ಸಂದಿಗ್ಧ ಸಮಯದಲ್ಲಿ ರಾಜಕೀಯ ಮಾಡದೇ ಸರಕಾರದೊಂದಿಗೆ ಕಾಂಗ್ರೆಸ್ ಸಂಪೂರ್ಣ ಸಹಕಾರ ನೀಡಿದೆ. ಕೇಂದ್ರ ಸರಕಾರ ನಾಲ್ಕು ಲಾಕ್ ಡೌನ್ ಹಾಗೂ ಮೂರು ಅನ್ ಲಾಕ್ ಆದರೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಬೇಕಿದ್ದ ರಾಜ್ಯ ಸರಕಾರ ಹಣ ಲೂಟಿ ಮಾಡುವುದರಲ್ಲಿ ನಿರತವಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು ವೈದ್ಯಕೀಯ ಸಲಕರಣೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

Contact Your\'s Advertisement; 9902492681

ದೇಶದಲ್ಲೆ ಮೊದಲ ಸಾವು ಸಂಭವಿಸಿರುವುದು ಕಲಬುರಗಿ ನಗರದಲ್ಲಿಯೇ ಆದರೂ ಕೇವಲ ಒಂದೇ ಒಂದು ಕೊರೋನಾ ಸೋಂಕು ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ. ಈ ಮೊದಲು ಹಲವಾರು ಬಾರಿ ನಾನು ಇಎಸ್ ಐ ಸಿ ನಲ್ಲಿ ಒಂದು ಕೇಂದ್ರ ಸ್ಥಾಪನೆಗೆ ಆಗ್ರಹಿಸಿ ಪತ್ರ ಬರೆದಿದ್ದೇನೆ. ಆದರೂ ಫಲಪ್ರದವಾಗಿಲ್ಲ ಹಾಗಾಗಿ‌ ಇಲ್ಲಿಯವರೆಗೆ ಕನಿಷ್ಠ ಐದು‌ಸಾವಿರ ವರದಿಗಳು ಬಾಕಿ ಉಳಿದಿವೆ. ಇದು ತಕ್ಷಣದ ಚಿಕಿತ್ಸೆ ನೀಡಲು ಅಡ್ಡಗಾಲು ಆಗಿದೆ.‌ ಇದು ಸರಕಾರಕ್ಕೆ ಯಾಕೆ ತಿಳಿಯುತ್ತಿಲ್ಲ, ಎಂದರು.

ಜಿಮ್ಸ್ ಹಾಗೂ ಇಎಸ್ ಐಸಿ ನಲ್ಲಿ ಎಷ್ಟು ಔಷಧಿ ಸಂಗ್ರಹಿಸಿಡಲಾಗಿದೆ ಎನ್ನುವ ಮಾಹಿತಿಯೂ ಯಾರು ಒದಗಿಸುತ್ತಿಲ್ಲ. ಮೂರು ಸಾವಿರಕ್ಕೆ ದೊರಕುವಂತ ಔಷಧಿ ಕಲಬುರಗಿ ಯಲ್ಲಿ ಲಭ್ಯವಿಲ್ಲದ ಕಾರಣ ಅದೇ ಔಷಧಿ ಸೋಲಾಪುರದಲ್ಲಿ ಬ್ಲಾಕ್ ಮಾರ್ಕೆಟ್ ನಲ್ಲಿ ಮೂರುಪಟ್ಟು ಹಣ‌ ತೆತ್ತು ಸೋಂಕಿತರು ಖರೀದಿಸುತ್ತಿದ್ದಾರೆ ಎಂದು ದಾಖಲೆ ಸಮೇತ ಶಾಸಕರು ವಿವರಿಸಿ ಸರಕಾರದ ವೈಫಲ್ಯತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರು.

ಕಲಬುರಗಿಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದರಿಂದ ಕೊವೀಡ್ ಹಾಗೂ ನಾನ್ ಕೊವೀಡ್ ಬೆಡ್ ಗಳ ವಿವರಗಳ ಲಭ್ಯತೆಯಿಲ್ಲ. ಸಿಎಂ, ಡಿಸಿಎಂ, ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಸಾಲು ಸಾಲು ಮೀಟಿಂಗ್ ತೆಗೆದುಕೊಂಡರೂ ಸೂಕ್ತ ವೈದ್ಯಕೀಯ ಸೌಲಭ್ಯ ಕಲಬುರಗಿಯಲ್ಲಿ ಸಿಗುತ್ತಿಲ್ಲ. ಜಿಮ್ಸ್, ಇಎಸ್ ಐಸಿ, ಬಸವೇಶ್ವರ ಹಾಗೂ ಧನ್ವಂತರಿ‌ ಹೀಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸೋಂಕಿತರು ಅಲೆದಾಡಿ‌ ಸಾಯುವಂತಾಗಿದೆ. ಮೊನ್ನೆ ನಡೆದ ಘಟನೆಯಲ್ಲಿ ಸೋಂಕಿತರೊಬ್ಬರು ಆಟೋದಲ್ಲಿ ಅಲೆದು ಸಾವನ್ನಪ್ಪಿದ್ದಕ್ಕೆ ಶವವನ್ನು ಡಿಸಿ‌ಕಚೇರಿಗೆ ತಂದ ಘಟನೆ ನಾಚಿಕೆಗೇಡು ಎಂದು ಶಾಸಕರು ಕುಟುಕಿದರು.

ಒಂದೇ ದಿನದಲ್ಲಿ ಎಂಟು ಜನ ಇಎಸ್ ಐ ಸಿನಲ್ಲಿ ಎಂಟು‌ಜನ ಸಾವಿಗೀಡಾಗಿದ್ದಕ್ಕೆ ಸಾರ್ವಜನಿಕರ ಹಿತದೃಷ್ಟಿಯಿಂದ ಮಾನವೀಯತೆ ದೃಷ್ಟಿಯಿಂದ ಪ್ರಶ್ನೆ ಮಾಡಿದ್ದಕ್ಕೆ ತಮ್ಮ ಲೋಪವನ್ನು ಒಪ್ಪಿಕೊಳ್ಳದೆ ನನ್ನನ್ನು ರಾಜಕೀಯ ಮಾಡುತ್ತಿದ್ದಾರೆ ಎನ್ನುತ್ತಾರೆ. ಅಲ್ಲಿ ಏನು ತಪ್ಪು‌ನಡೆಯದೇ ಇದ್ದರೆ ತನಿಖೆ ಸಮಿತಿ ರಚನೆ ಮಾಡಿದ್ದು ಯಾಕೆ? ಇಎಸ್ ಐ ಸಿ‌ ಡೀನ್ ವರ್ಗಾವಣೆ ಮಾಡಿದ್ದು ಯಾಕೆ? ಆಕ್ಷಿಜನ್ ಸಿಗದೆ ಮಹಿಳೆಯೊಬ್ಬರು ತೀರಿಕೊಂಡಿದ್ದಕ್ಕೆ ಆಕೆಯ ಮಗ ವಸ್ತುಸ್ಥಿತಿ ತಿಳಿಸಿ ವಿಡಿಯೋ ಮಾಡಿದ್ದಕ್ಕೆ ಅದನ್ನೂ ಕೂಡಾ ನಂಬುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊವೀಡ್ ಸಾವುಗಳನ್ನು ಮುಚ್ಚಿಡುವ ವ್ಯವಸ್ಥೆ ನಡೆಯುತ್ತಿದೆ. ಸೋಂಕಿತರೊಬ್ಬರು ಹೃದಯ ಸಂಬಂಧಿ‌ ಕಾಯಿಲೆ ಇದ್ದು ತೀರಿಕೊಂಡರೆ ಅಂತಹ ಸಾವುಗಳನ್ನು ಕೊವೀಡ್ ಸಾವು ಎಂದು ಹೇಳದೆ ಹೃದಯಾಘಾತದಿಂದಾದ ಸಾವು ಎಂದು ಹೇಳಿ‌ ಜನರ ದಾರಿ‌ ತಪ್ಪಿಸಲಾಗುತ್ತಿದೆ.

ಸರಕಾರದಲ್ಲಿ ನಡೆದ ಅವ್ಯವಹಾರದ‌ ಬಗ್ಗೆ‌ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ‌ ಶಿವಕುಮಾರ ಅವರು ಹೇಳಿದರೆ, ಬಿಜೆಪಿ ಕಾರ್ಯದರ್ಶಿ ರವಿಕುಮಾರ ಲೀಗಲ್ ನೋಟಿಸ್ ಕಳಿಸಿದ್ದಾರೆ. ಅವರಿಗೆ ಯಾವ ಅಧಿಕಾರ ಇದೆ? ಸರಕಾರದ ಪರವಾಗಿ ಯಾರಾದರೂ‌ ನೀಡಿದ್ದರೆ‌ ಅದು‌ ಸರಿ. ಅಂತಹ ನೋಟಿಸುಗಳಿಗೆ ಯಾವ ಮೌಲ್ಯವಿದೆ ಎಂದು ತಿಳಿದಿದೆ..

ರಾಜ್ಯದಲ್ಲಿರುವ ಸರಕಾರ ಏನು ಮಾಡುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ಕೋಟಿ‌ಕೋಟಿ‌ ಖರ್ಚು ಮಾಡಿ ತಿರುಪತಿಯಲ್ಲಿ ಕಲ್ಯಾಣ ಮಂಟಪ‌, ಪ್ರತಿಮೆ ನಿರ್ಮಾಣ ಮಾಡಲು, ಸರಕಾರದ‌ ಸಾಧನೆ ಬಿಂಬಿಸಲು ಖರ್ಚು ಮಾಡಲು ಕೋಟಿ‌ಕೋಟಿ‌ ದುಡ್ಡಿದೆ. ಕೊರೋನಾ ವಾರಿಯರ್ಸ್ ಗೆ ಮೂಲಭೂತ ಸೌಲಭ್ಯ ಒದಗಿಸುವ ನೆಪದಲ್ಲಿ ಲೂಟಿ ಮಾಡಲು‌ ಹಣವಿದೆ ಆದರೆ‌ ರಾಜ್ಯ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ ಸೌಲಭ್ಯ ಒದಗಿಸಲು ದುಡ್ಡಿಲ್ಲ. ನಾವು ಸರಕಾರಕ್ಕೆ ಸಹಕಾರ ನೀಡಿದ್ದೇವೆ ಆದರೆ ಭ್ರಷ್ಟಚಾರಕ್ಕೆ ಸಹಕಾರ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಸೋಂಕಿತರಿಗೆ ಬೇಕಾದ ಔಷಧಿ ಸೌಲಭ್ಯ, ಬೆಡ್ ವ್ಯವಸ್ಥೆ ಮಾಡಬೇಕು, ಟೆಸ್ಟಿಂಗ್ ಸೆಂಟರ ಸ್ಥಾಪನೆ ಮಾಡಬೇಕು, ಜಿಮ್ಸ್ ಹಾಗೂ ಇಎಸ್ ಐ ಸಿ‌ ನಲ್ಲಿ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಸಂಸದರು ಸುಮ್ಮನೆ ಫೋಟೋ ತೆಗೆದುಕೊಂಡು ಮಾನವೀಯತೆ ಮೆರೆಯುವ ಜೊತೆಗೆ ಈ ಕಡೆಗೂ ಸ್ವಲ್ಪ‌ ಗಮನಿಸಲಿ ಎಂದು ಶ್ರೀ ಪ್ರಿಯಾಂಕ್ ಖರ್ಗೆ ಕುಟುಕಿದರು.

ನೇರ ನೇಮಕಾತಿ ತಡೆ ಹಿಡಿದಿದ್ದನ್ನು ರದ್ದುಪಡಿಸಿ ಈ ಕೂಡಲೇ ನೇಮಕಾತಿ ನಡೆಸಲಿ ಎಂದು ಆಗ್ರಹಿಸಿದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಎಂಟು‌ ಜನ ಆಕ್ಷಿಜನ್ ಕೊರತೆಯಿಂದ ಮರಣ ಹೊಂದಿರುವ ಮಾಹಿತಿ‌ ಪ್ರಿಯಾಂಕ್ ಅವರಿಗೆ ಹೇಗೆ ಸಿಕ್ಕಿತು ? ಅವರೇನು ಡಾಕ್ಟರಾ? ಎನ್ನುವ ಬಿಜೆಪಿಯವರ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಶ್ರೀ ಪ್ರಿಯಾಂಕ್ ಖರ್ಗೆ ಅವರು, ನಮಗೆ ಹೇಗೋ ಮಾಹಿತಿ‌ ಸಿಕ್ಕಿದೆ. ನಾನು ಹೇಳಿದ್ದನ್ನು ಅವರು ಸುಳ್ಳು ಎಂದು ಸಾಬೀತುಪಡಿಸಲಿ. ಒಂದು ವೇಳೆ ಅಲ್ಲಿ ಏನೂ ನಡೆಯದೇ ಇದ್ದರೆ ಇಎಸ್ ಐ‌ ಎಸ್ ಡೀನ್ ಅವರನ್ನು ವರ್ಗಾವಣೆ ಮಾಡಿದ್ದು ಯಾಕೆ? ಅವರೇನು ಯಾವುದಾದರೂ ಭ್ರಷ್ಟಚಾರದಲ್ಲಿ‌ ಭಾಗಿಯಾಗಿದ್ದರೇ? ಎಂದು ಪ್ರಶ್ನಿಸಿದರು.  ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಡಾ‌ ಕಿರಣ್ ದೇಶಮಖ್, ಈರಣ ಝಳಕಿ, ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here