ನಗರಸಭೆಯ ನಿಷ್ಕಾಳಜಿ-ಮಿಲತ್ ನಗರ ಬಡಾವಣೆಯಲ್ಲಿ ಕಸದ ರಾಶಿ

0
104

ಶಹಾಬಾದ: ನಗರದ ಮಿಲತ್ ನಗರ ಜನಬೀಡು ಪ್ರದೇಶದಲ್ಲಿ ಕಸದ ರಾಶಿ ಬಿದ್ದು ಕೊಳೆತು ಗಬ್ಬು ನಾರುತ್ತಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕಸದ ತಿಪ್ಪೆ ತುಂಬಿಕೊಂಡು ರಸ್ತೆಯ ಮೇಲೆ ಆವರಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೂ, ನಗರಸಭೆ ಸ್ವಚ್ಛತೆ ಕಾರ್ಯದಲ್ಲಿ ಕಾಳಜಿವಹಿಸದೇ ನಿಷ್ಕಾಳಜಿ ತೋರುತ್ತಿದೆ ಎಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ತಿಂಗಳುಳಿಂದ ಸ್ವಚ್ಛತೆಗಾಗಿ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಅಲ್ಲದೇ ಮಳೆಗಾಲ ಇರುವುದರಿಂದ ಕಸ ಮಳೆ ನೀರಿನಿಂದ ಕೊಳೆತು ದುವರ್ಾಸನೆ ಬೀರುತ್ತಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ದುಸ್ಥಿತಿ ಬಂದಿದೆ. ಸಾರ್ವಜನಿಕರು ಪ್ರತಿನಿತ್ಯ ಸಹಿಸಲಾಗದ ಗಬ್ಬು ವಾಸನೆ ಸೇವಿಸಿ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಇಷ್ಟೊಂದು ಕಸ ಕೊಳೆತು ನಾರುತ್ತಿರುವ ರಾಶಿಯ ಮುಂದೆ ನಗರಸಭೆಯ ಅಧಿಕಾರಿಗಳು ಹಾದು ಹೋದರೂ ಸ್ವಚ್ಛಗೊಳಿಸುವಲ್ಲಿ ಮುಂದಾಗುತ್ತಿಲ್ಲ. ಈ ಕಸದ ರಾಸಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಗಬ್ಬು ವಾಸನೆ ಹರಡುತ್ತಿದೆ ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ.

Contact Your\'s Advertisement; 9902492681

ನಗರದ ಮಧ್ಯದಲ್ಲಿ ಇಷ್ಟೊಂದು ಕಸ ಹರಡಿದರು ನಗರಸಭೆಯ ಅಧಿಕಾರಿಗಳಿಗೂ ಕಂಡು ಕಾಣದಿರುವಂತೆ ವತರ್ಿಸುತ್ತಿರುವುದು ಮಾತ್ರ ವಿಷಾದದ ಸಂಗತಿ. ಅನೇಕ ಹಬ್ಬಗಳು ಸಮೀಪಿಸುತ್ತಿವೆಯಾದರೂ ಸ್ವಚ್ಛತೆ ಕಡೆ ಗಮನಹರಿಸುತ್ತಿಲ್ಲ. ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಬಡಾವಣೆಯ ನಿವಾಸಿ ಲೋಹಿತ್ ಹಲಕಟ್ಟಿ.
ಕೊರೊನಾದ ಹೆಸರಿನಲ್ಲಿ ನಗರದ ಎಲ್ಲಾ ವಾರ್ಡಗಳಲ್ಲಿ ಸ್ವಚ್ಛತೆ ಕೈಗೊಂಡಿದ್ದೆವೆ ಹೇಳುವ ಅಧಿಕಾರಿಗಳು ಒಮ್ಮೆ ಇತ್ತ ಕಡೆ ಗಮನಹರಿಸಿ. ಕೂಡಲೇ ಬಡವಾಣೆಯಲ್ಲಿನ ಸ್ವಚ್ಛತೆಗಾಗಿ ಕಾಳಜಿವಹಿಸಬೇಕೆಂದು ಮುಖಂಡ ಪ್ರವೀಣ ರಾಜನ್ ಪೌರಾಯುಕ್ತ ಕೆ.ಗುರಲಿಂಗಪ್ಪನವರಿಗೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here