ನಗರದ ಹತ್ತು ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ ವಿತರಣೆ-ತಹಸೀಲ್ದಾರ ಸುರೇಶ ವರ್ಮಾ

0
363

ಶಹಾಬಾದ:ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ ಭಾರತ್ ಯೋಜನೆ ಆರೋಗ್ಯ ಕಾರ್ಡಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ 10 ಕೇಂದ್ರ ತೆರೆಯಲಿದ್ದು, ಅದರ ಸಂಪೂರ್ಣ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ಎಲ್ಲಾ ಜನರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯಬೇಕೆಂಬ ನಿಟ್ಟಿನಲ್ಲಿ ಜಾರಿಗೊಂಡ ಯೋಜನೆ ಇದಾಗಿದ್ದು,ಆ ದೃಷ್ಟಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪನವರೊಂದಿಗೆ ಸಭೆ ನಡೆಸಿ ಒಂಬತ್ತು ಕೇಂದ್ರಗಳನ್ನು ತೆರೆಯಲು ನಿರ್ಧರಿಸಿದ್ದೆವೆ. ಆಯುಷ್ಮಾನ ಕಾರ್ಡ ಪಡೆಯುವ ಸಾರ್ವಜನಿಕರು ಆಯಾ ಕೇಂದ್ರಗಳಲ್ಲಿ ಹೋಗುವ ಸಮಯದಲ್ಲಿ ಕಡ್ಡಾಯವಾಗಿ ಆಧಾರ ಕಾರ್ಡ ತೆಗೆದುಕೊಂಡು ಹೋಗಬೇಕು.ಈ ಕಾರ್ಡ ಪಡೆದ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಹಾಗೂ ಎಪಿಎಲ್ ಕಾರ್ಡದಾರರ ಕುಟುಂಬಗಳಿಗೆ 1.50 ಲಕ್ಷ ರೂ. ಉಚಿತ ಚಿಕಿತ್ಸೆ ದೊರೆಯಲಿದೆ. ನಿಮ್ಮ ಹತ್ತಿರದ ಕೇಂದ್ರದಲ್ಲಿ ಕಾಗದದ ಪ್ರತಿಗೆ 10 ರೂ.ಹಾಗೂ ಸ್ಮಾರ್ಟ ಕಾರ್ಡ ಪ್ರತಿಗೆ 35 ರೂ. ಪಾವತಿಸಿ ಪಡೆದುಕೊಳ್ಳಬಹುದು.

ನಗರದ ಕೇಂದ್ರಗಳಾದ ಹಳೆಶಹಾಬಾದ- ಕಸಬಾ ಕನ್ನಡ ಶಾಲೆ ಸಿಬರಕಟ್ಟಾ ಹಾಗೂ ಉರ್ದು ಕಸಬಾ ಶಾಲೆ, ಹನುಮಾನ ನಗರ- ಸಿದ್ರಾಮೇಶ್ವರ ಕನ್ನಡ ಪ್ರಾಥಮಿಕ ಶಾಲೆ, ಬಸವೇಶ್ವರ ನಗರ- ಸರಕಾರಿ ಪ್ರಾಥಮಿಕ ಶಾಲೆ, ರೇಲ್ವೆ ನಿಲ್ದಾಣದ ಪ್ರದೇಶ- ಸರಕಾರಿ ಪ್ರೌಢಶಾಲೆ, ಹೊನಗುಂಟಾ ರೋಡ ಬಡಾವಣೆ- ಸರಕಾರಿ ಪ್ರಾಥಮಿಕ ಲಕ್ಷ್ಮಿ ಗಂಜ್ ಶಾಲೆ, ರಾಂಭೋ ಫೈಲ್- ಸರಕಾರಿ ಪ್ರಾಥಮಿಕ ಶಾಲೆ ರಾಂಭೋ ಫೈಲ್, ದಕ್ಕಾ ತಾಂಡಾ ಪ್ರದೇಶ- ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದಕ್ಕಾ ತಾಂಡಾ, ಅಪ್ಪರ್ ಮಡ್ಡಿ ಪ್ರದೇಶ- ಸರಕಾರಿ ವಸತಿ ನಿಲಯ ಹಾಗೂ ಜಿಇ ಕಾಲೋನಿ(ಎಬಿಎಲ್)ನಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಲಾಗಿದೆ.ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ಇದರ ಸಂಪೂರ್ಣ ಸದುಪಯೋಗಪಡಿಸಿಕೊಳ್ಳಬೇಕೆಂದು ಹೆಲ್ತ್ ಕಾರ್ಡ ಪಡೆದುಕೊಳ್ಳಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here