ಡಿ.ಎಂ.ಧನ್ನೂರ ಲಿಂಗೈಕ್ಯ:ಸುರಪುರ ಬಸವ ಅನುಯಾಯಿಗಳ ಸಂತಾಪ

0
100

ಸುರಪುರ: ಬಸವಾದಿ ಶರಣರ ಆಚರಾ ವಿಚಾರವನ್ನು ಆಳವಾಗಿ ಅಧ್ಯಾಯನ ನಡೆಸಿ ಬಸವ ತತ್ವವನ್ನು ತಮ್ಮ ಬದುಕಿನುದ್ದಕ್ಕೂ ಭಿತ್ತುತ್ತ ಬಂದ ನಿವೃತ್ತ ಪ್ರಾಚಾರ್ಯ ಡಿ.ಎಂ.ಧನ್ನೂರ ಮಿಣಜಗಿಯವರ ಲಿಂಗೈಕ್ಕಕ್ಕೆ ಸುರಪುರದ ಬಸವ ಅನುಯಾಯಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ರೈತ ಹೊರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಡಿ.ಎಂ.ಧನ್ನೂರ ಶರಣರು ಅಪಾರವಾದ ಬಸವ ಅಭಿಮಾನವುಳ್ಳವರಾಗಿದ್ದರು.ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಧನ್ನೂರರು ಬಸವ ನಿಷ್ಠರು ಹಾಗು ಇಷ್ಟಲಿಂಗ ಯೋಗ ಮತ್ತು ಗಣಾಚಾರದ ಕುರಿತಾದ ಅವರ ಮಾತುಗಳನ್ನು ಕೇಳುವುದೆ ಪುಣ್ಯ.ಅವರು ಸಾವಿರಾರು ಜನ ಅನುಯಾಯಿಗಳನ್ನು ಹೊಂದಿದ್ದರು.

Contact Your\'s Advertisement; 9902492681

ಲಿಂಗಾಂಗ ಯೋಗದ ಕುರಿತು ಅವರು ಅನೇಕರಲ್ಲಿ ಅರಿವು ಮೂಡಿಸಿದ್ದಲ್ಲದೆ ಸಾವಿರಾರು ಜನರಿಗೆ ಲಿಂಗ ದೀಕ್ಷೆಯನ್ನು ನೀಡಿ ಲಿಂಗವಂತರನ್ನಾಗಿಸಿ ಬಸವಾದಿ ಶರಣರ ಅರಿವು ಮತ್ತು ಆಚರಣೆಯ ಬಗ್ಗೆ ತಿಳಿಸಿಕೊಟ್ಟ ಮಹನಿಯರು.ಅವರು ೯೦ ವರ್ಷಗಳು ಬಾಳಿ ಇಂದು ಲಿಂಗೈಕ್ಯರಾಗಿರುವುದು ನಮ್ಮ ಚೈತನ್ಯವನ್ನೆ ಕುಂದಿಸಿದೆ,ಆದರೆ ಶರಣರಿಗೆ ಮರಣವೆ ಮಹಾನವಮಿ ಎಂಬಂತೆ ಅವರ ಲಿಂಗೈಕ್ಯವನ್ನು ಸಹಿಸಿಕೊಳ್ಳಬೇಕಿದೆ ಎಂದು ತೀವ್ರ ಸಂತಾಪ ವ್ಯಕ್ತಪಡಿಸಿದರು.

ಅದರಂತೆ ಚನ್ನಮಲ್ಲಿಕಾರ್ಜುನ ಗುಂಡಾನೂರ,ಶರಣಪ್ಪ ಯಾಳಗಿ ಸತ್ಯಂಪೇಟೆ,ಸಂಗಣ್ಣ ಗುಳಗಿ, ಶಿವರುದ್ರ ಉಳ್ಳಿ,ಮಹಾದೇವಪ್ಪ ಗಾಳೆನೊರ,ನಾಗಭೂಷಣ ಯಾಳಗಿ ಸೇರಿದಂತೆ ಅನೇಕರು ಧನ್ನೂರರ ಲಿಂಗೈಕ್ಯಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here