ತಾಯಿಯ ಎದೆಹಾಲು ಮಗುವಿಗೆ ಶ್ರೇಷ್ಠ; ಸಂಗನಗೌಡ ಪಾಟೀಲ್

0
89

ಜೇವರ್ಗಿ : ಪ್ರತಿಯೊಂದು ಶಿಶುವಿಗೂ ಸಹ ತಾಯಿಯ ಎದೆಹಾಲು ಎಲ್ಲ ರೋಗಗಳನ್ನು ಗೆಲ್ಲಬಲ್ಲ ಅಮೃತಕ್ಕೆ ಸಮನಾಗಿದ್ದು ಇಂದಿನ ಆಧುನಿಕ ಕುಟುಂಬಗಳ ಸದಸ್ಯರು ಇದಕ್ಕೆ ಪ್ರೋತ್ಸಾಹಿಸಬೇಕು ಹಾಗೂ ವಾಸ್ತವ ಸಂಗತಿಯನ್ನು ಅರಿತು ಮನೆಯಲ್ಲಿರುವ ತಮ್ಮ ಮಕ್ಕಳಿಗೆ ಎದೆಹಾಲನ್ನು ಉಣಿಸಬೇಕು ಎಂದು ಜೇವರ್ಗಿ ತಾಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಂಗನಗೌಡ ಪಾಟೀಲ್ ತಿಳಿಸಿದರು.

ಇಲ್ಲಿನ ಅರಳಗುಂಡಗಿ ಹಾಗೂ ಯಡ್ರಾಮಿ ವಲಯಗಳ ವಿಶ್ವ ಸ್ತನ್ಯಪಾನ ಸಪ್ತಾಹ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

Contact Your\'s Advertisement; 9902492681

ಶಿಶುವಿನ ಸಂಪೂರ್ಣ ಸರ್ವತೋಮುಖವಾದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಎದೆಹಾಲು ಅಮೃತದಂತೆ ಕೆಲಸ ಮಾಡುತ್ತದೆ. ಮಕ್ಕಳಿಗೆ ಕಾಡುವ ಅತಿಸಾರ ಬೇದಿ ಹಾಗೂ ಉಸಿರಾಟದ ತೊಂದರೆ ಸೇರಿದಂತೆ ಇತರ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ .ತಮ್ಮ ಮಕ್ಕಳಿಗೆ ಕನಿಷ್ಠ ಆರು ತಿಂಗಳಾದರೂ ಎದೆಹಾಲನ್ನು ಉಣಿಸಲೇಬೇಕು ಎಂದು ಅವರು ಹೇಳಿದರು.

ದತ್ತಾತ್ರೆಯ ಬಳಿಚಕ್ರ ಹಾಗೂ ಮೇಲ್ವಿಚಾರಕರಾದ ಸುಧಾ ಜೋಶಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತರಾದ ಶರಣಮ್ಮ ಹಾಗೂ ಇತರ ಸಾರ್ವಜನಿಕರು ,ಗಣ್ಯರು ,ಗರ್ಭಿಣಿ ಸ್ತ್ರೀಯರು ಹಾಗೂ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here