ಅಫಜಲಪುರ: ಕಳೆದ ನಾಲ್ಕು ತಿಂಗಳಿಂದ ಲಾಕ್ ಡೌನ್ ಸಮಯದಲ್ಲಿ ಬೇರೆ ರಾಜ್ಯಗಳಿಂದ ಬಂದು ಕ್ವಾರಂಟೈನ್ ಕೇಂದ್ರದಲ್ಲಿದ್ದ ವಲಸಿಗರಿಗೆ ಹೋಳಿಗೆ ತುಪ್ಪದ ಊಟ ಮತ್ತು ತಾಲೂಕಿನಲ್ಲಿನ ಪ್ರತಿ ಹಳ್ಳಿಗಳಿಗೆ ಹೋಗಿ ಸ್ವತಃ ತಾವೇ ಬಡ ಜನರಿಗೆ ಆಹಾರದ ಕಿಟ್ ಮತ್ತು ಮಾಸ್ಕ್ ಗಳನ್ನು ವಿತರಿಸುವುದರ ಮೂಲಕ ಕರೋನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.
ಶುಕ್ರವಾರ ಸಮಾಜ ಸೇವಕ ಜೆ.ಎಂ.ಕೋರಬು ಮತ್ತು ಅವರ ಚಿರಂಜೀವಿ ಶುಭಂ ಕೊರಬು ಅವರಿಗೆ ಕರೋನಾ ಪಾಸಿಟಿವ್ ಧೃಢಪಟ್ಟಿದೆ. ಕೊರಬು ತಮ್ಮ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್ ಗೆ ಒಳಗಾಗಿ ಮತ್ತು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಮತ್ತು ತಾಲೂಕಿನ ನಾಗರೀಕರು ಯಾವುದೇ ಕೆಲಸಗಳು ಇದ್ದರೆ ದೂರವಾಣಿ ಮುಖಾಂತರ ಸಂಪರ್ಕಿಸಿ.
ಶುಕ್ರವಾರ ಮಧ್ಯಹ್ನ ತಮ್ಮ ತೋಟದ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐವತ್ತಕ್ಕೂ ಹೆಚ್ಚು ಕೃಷಿ ಕಾರ್ಮಿಕರನ್ನು ಪರೀಕ್ಷೆ ಮಾಡಿಸಿದ್ದಾರೆ.
ಅಗಸ್ಟ್ ನಾಲ್ಕರಂದು ಗಾಣಗಾಪೂರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಸಮಾಜ ಸೇವಕ ಜೆ.ಎಂ.ಕೊರಬು ಚೌಡಾಪೂರದಲ್ಲಿ ಸನ್ಮಾನಿಸಿದ್ದರು.