ಕಲಬುರಗಿ: ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಹೆಚ್ಚು ಕೊರೋನಾ ಸೋಂಕಿನ ಸಾವಿನ ಜಿಲ್ಲೆಗಳಲ್ಲಿ ಕಲಬುರಗಿ ಗೆ ಸ್ಥಾನ,ಪಡೆದಿರುವ ಬಗ್ಗೆ ತೀವ್ರ ಕಳವಳ ಹಾಗೂ ಬೇಸರ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಶಾಸಕರಾದ ಪ್ರಿಯಾಂಕ್ ಖರ್ಗೆ, ಅತಿಹೆಚ್ಚು ಸಾವು ಸಂಭವಿಸಿದ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆ ಇರುವುದು ದುರ್ದೈವದ ಸಂಗತಿ ಎಂದಿದ್ದಾರೆ.
ಕೊರೋನಾ ಸೋಂಕಿನಿಂದಾಗಿ ರಾಷ್ಟ್ರದಲ್ಲಿಯೇ ಮೊಟ್ಟ ಮೊದಲ ಸಾವು ಕಲಬುರಗಿ ಯಲ್ಲಿ ಸಂಭವಿಸಿ ದೇಶದ ಗಮನ ಸೆಳೆದಿತ್ತು. ಇದೀಗ ಕೇಂದ್ರ ಸರಕಾರದ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅತಿಹೆಚ್ಚು ಸಾವು ಸಂಭವಿಸಿರುವ ರಾಷ್ಟ್ರದ ಇತರೆ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆ ಸ್ಥಾನ ಪಡೆದಿದೆ.
ರಾಷ್ಟ್ರದಲ್ಲೇ ಮೊದಲ ಕೊರೋನಾ ಸಂಬಂಧಿ ಸಾವು ಕಲಬುರಗಿಯಲ್ಲೇ ಸಂಭವಿಸಿದ್ದರೂ ಕೂಡಾ ರಾಜ್ಯ ಸರಕಾರ ಯಾವ ಪಾಠ ಕಲಿಯಲಿಲ್ಲ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸೋಂಕು ತಡೆದು ಯಾವ ಪಾಠವನ್ನು ಕೂಡಾ ದೇಶಕ್ಕೆ ಹೇಳಲಿಲ್ಲ ಎಂದು ಕಳವಳ ವ್ಯಕ್ತಪಡಿಸಿ ನಿಷ್ಕ್ರಿಯ ಸರಕಾರದ ವಿರುದ್ದ ತೀವ್ರ ಸಮಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಕೊರೋನಾದಿಂದಾಗಿ ಅತಿ ಹೆಚ್ಚು ಮರಣ ಪ್ರಮಾಣವನ್ನು ಹೊಂದಿರುವ ಜಿಲ್ಲಾ ಪಟ್ಟಿಯಲ್ಲಿ ಕಲಬುರಗಿ ಸೇರಿರುವುದು ದುರ್ದೈವದ ಸಂಗತಿ.
ಕೊರೋನಾದಿಂದ ದೇಶದಲ್ಲೇ ಮೊದಲ ಸಾವು ಕಲಬುರಗಿಯಲ್ಲಿ ಸಂಭವಿಸಿದ ನಂತರ ರಾಜ್ಯ ಸರ್ಕಾರ ಏನೂ ಪಾಠ ಕಲಿಯಲಿಲ್ಲ ಮತ್ತು ದೇಶಕ್ಕೂ ಯಾವ ಪಾಠವನ್ನೂ ಹೇಳಲಿಲ್ಲ.
(1/3) pic.twitter.com/BakOYjD2TE
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 8, 2020