ಶಹಾಬಾದ: ಕರ್ನಾಟಕ ರಾಜ್ಯ ಸರಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಅವರು ಮನವಿ ಸಲ್ಲಿಸಿದ ಮೇರೆಗೆ ಕೋವಿಡ್ -19 ಕಾರ್ಯದಲ್ಲಿರುವ ಸರಕಾರಿ ನೌಕರರಿಗೆ 30 ಲಕ್ಷ ವಿಮೆ ಪರಿಹಾರ ನೀಡುವ ತೀರ್ಮಾನವನ್ನು ಆದೇಶ ಮಾಡಿದ್ದಾರೆ.
ಅಲ್ಲದೇ ಕರ್ತವ್ಯ ನಿರತ ಸರಕಾರಿ ನೌಕರರಿಗೆ ಸಂಪೂರ್ಣವಾದ ಉಚಿತ ಚಿಕಿತ್ಸೆಯನ್ನು ನೀಡಲು ಮುಖ್ಯಮಂತ್ರಿಗಳು ಆದೇಶ ಮಾಡಿದ್ದರಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಾಗೂ ಇದೆಲ್ಲಕ್ಕೂ ಕಾರಣೀಭೂತರಾದ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಅವರಿಗೆ ಸರಕಾರಿ ನೌಕರರ ಸಂಘದ ಶಹಾಬಾದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ ಮತ್ತು ಸರ್ವ ಸದಸ್ಯರು ಅಭಿನಂದಿಸಿದ್ದಾರೆ.