ನಿರುದ್ಯೋಗ ಸಮಸ್ಯೆ ನಿವಾರಣೆ ಅಗತ್ಯ: ಪಿಐ ರಮೇಶ ಕಾಂಬಳೆ 

0
83

ಕಲಬುರಗಿ: ನಗರದ ಸ್ವಯಂ ಬೆಳಕು ಫೌಂಡೇಷನ್ ಕರ್ನಾಟಕ ವತಿಯಿಂದ ಇಲ್ಲಿನ ಹಿಂದಿ ಪ್ರಚಾರ ಸಭಾಂಗಣದಲ್ಲಿ ಸಂಯೋಜಕರುಗಳಿಗೆ ಸ್ವಾಗತ ಮತ್ತು ಕಾರ್ಯಾಗಾರ ಜರುಗಿತು.

ಪಿಐ ರಮೇಶ ಕಾಂಬಳೆ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಪರಿವರ್ತನೆ ಮಾಡಿ, ಆರ್ಥಿಕ ಮತ್ತ ನಿರುದ್ಯೋಗ ಸಮಸ್ಯೆ ನಿವಾರಿಸುವುದು ಇಂದಿನ ಬಹುಮುಖ್ಯ ಕಾರ್ಯವಾಗಬೇಕಿದೆ. ಅದರ ಜೊತೆಗೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ, ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿ ಹೇಳುವ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ಸ್ವಯಂ ಬೆಳಕು ಫೌಂಡೇಷನ್ ಕೆಳಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಸ್ವಯಂ ಬೆಳಕು ಫೌಂಡೆಶನ್ ಉದೇಶ ಕುರಿತು ಕಾರ್ಯಕ್ರಮದ ಅಧ್ಯಕ್ಷರಾದ ಜೈಭೀಮ ಡಿ ಶಿಂಧೆ ಅವರು ಎಲ್ಲಾ ಸಂಯೋಜಕರಿಗೆ ಮಾರ್ಗದರ್ಶನ ಮಾಡಿದ್ದರು. ಸಂಸ್ಥೆಯಲ್ಲಿ ಉದ್ಯೋಗಾವಕಾಶ ಮತ್ತು ಗ್ರಾಮೀಣ ಪ್ರದೇಶದ ವಿಧ್ಯಾವಂತರಿಗೆ ಉಚಿತವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂಯೋಜಕರಾಗಿ ಸೇವೆ ಮಾಡುವುದಕ್ಕೆ ಅವಕಾಶ ಕಲ್ಪಿಸಲಾತ್ತದೆ.

ಸಂಸ್ಥೆಯ ಕಾನೊನು ಸಲೆಹೆಗಾರಾದ ವಕಿಲರಾದ ಶ್ರೀ ನಾಥೆ ಶಿಂಧೆ ಅವರು ಕಾನೊನು ಸಲೆಹೆಗಳನು ಕುರಿತು ಮಾತನಾಡಿದ್ದರು. ಮುಖ್ಯ ಅತಿಥಿಯಾದ ಮಹಾದೇವ ದಿಡ್ಡಿಮನಿ ಪಿ ಎಸ್ ಏ ಅವರು ಮಾರ್ಗದರ್ಶನ ಮಾಡಿದರು.
ಇನೊರ್ವ ಮುಖ್ಯ ಅತಿಥಿಯಾ ಡಾ.ರಾಹುಲ್ ತಮ್ಮನ್ ಅವರ ಎಲ್ಲಾ ಸಂಯೋಜಕರಿಗೆ ಗ್ರಾಮೀಣ ಪ್ರದೇಶದ ಜನರಿಗೆ ಆರೊಗ್ಯ ಬಗೆಯ ಸಮಾಜಕ್ಕೆ ವಿಧ್ಯಾವಂತರಾದ ತಮ್ಮಲ್ಲಾರ ಸೇವೆ ಅವಶ್ಯಕವಾಗಿದೆ ತಾವುಗಳು ಪ್ರಮಾಣಿಕತೆಯಿಂದ ಸೇವೆ ಸಲ್ಲಿಸಿ ಎಂದು ಕಲೆಯನ್ನು ನೀಡಿದ್ದರು.

ಈ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಗ್ರಾಮ ಪಂಚಾಯತ ವ್ಯಾಪ್ತಿಯ ನೂರಾರು ಸಂಯೋಜಕರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here