ಸುರಪುರ: ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಸೋಮವಾರ ನಡೆಯುತ್ತಿದ್ದ ಹೆಗ್ಗಣದೊಡ್ಡಿ ಮತ್ತು ಗೊಡ್ರಿಹಾಳ ಗ್ರಾಮದ ಆರಾಧ್ಯದೈವ ಶ್ರೀ ಮರುಳಸಿದ್ದೇಶ್ವರ ಜಾತ್ರೆಯನ್ನು ಈ ವರ್ಷ ರದ್ದುಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಕಾರ್ಯಾಧ್ಯಕ್ಷ ರಾವಸಾಬ್ ಪಾಟೀಲ್ ತಿಳಿಸಿದರು.
ಹೆಗ್ಗಣದೊಡ್ಡಿಯ ಮರುಳಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಸಭೆಯ ನೇತೃತ್ವವಹಿಸಿ ಮಾತನಾಡಿ,ಈ ಭಾಗದ ಧರ್ಮರ ಮಠವೆಂದೆ ಪ್ರಸಿದ್ದಿ ಪಡೆದಿರುವ ಮರುಳಸಿದ್ದೇಶ್ವರರ ಜಾತ್ರೆಯನ್ನು ಪ್ರತಿ ವರ್ಷ ತುಂಬಾ ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು.
ಆದರೆ ಈ ವರ್ಷ ಇಡೀ ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವುದರಿಂದ ಯಾದಗಿರಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಈ ವರ್ಷ ಜಾತ್ರೆಯನ್ನು ರದ್ದುಪಡಿಸಲಾಗಿದೆ.೧೭ನೇ ತಾರೀಖಿನಂದು ಸಾಂಕೇತಿಕವಾಗಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಜಾತ್ರೆಯನ್ನು ಮುಕ್ತಾಯಗೊಳಿಸಲಾಗುವುದು.ಆದ್ದರಿಂದ ಭಕ್ತಾದಿಗಳು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಾರದೆ ಮನೆಗಳಲ್ಲಿಯೆ ಆರಾಧನೆ ನಡೆಸುವಂತೆ ಕರೆ ನೀಡಿದರು.