ಕಲಬುರಗಿ: ಜಿಲ್ಲೆಯಲ್ಲಿ ಮಳೆಯಿಂದ ಬೆಳೆಗಳು ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸರಕಾರ ಬೆಳೆ ಪರಹಾರಿ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಬೇಕೆಂದು ನಯಾ ಸವೇರಾ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಜಿಲ್ಲೆ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ ಕುರಿತಾಗಲಿ ಸಮೀಕ್ಷೆ ಯಾಗಲಿ ಯಾವುದೇ ಅಧಿಕಾರಿಗಳು ಗ್ರಾಮಗಳಿಗೆ ತೆರಳಿಲ್ಲ ಹೀಗಾಗಿ ರೈತರು ನಿರಾಶೆಗೊಂಡಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸದಿರುವುದು ಖಂಡನೀಯವಾಗಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಮೋದಿನ್ ಪಟೇಲ್ ಅಣಬಿ ಮನವಿಯಲ್ಲಿ ತಿಳಿಸಿದ್ದಾರೆ.
ಅತಿವೃಷ್ಟಿಯಿಂದ ನುಗ್ಗಿ ತೊಗರಿ, ಹೆಸರು, ಸೋಯಾಬಿನ್, ಹತ್ತಿ, ಬೆಳೆಗಳು ನಾಶವಾಗಿವೆ. ಬೆಳೆ ಜಾಗದಲ್ಲಿ ಮತ್ತೆ ಬಿತ್ತನೆ ಮಾಡಲು ತಕ್ಷಣವೇ ಉಚಿತವಾಗಿ ಬೀಜ ಸರಕಾರ ನೀಡಿ, ನೀರು ನಿಂತು ಬೆಳೆ ಹಾನಿಯಾಗಿರುವ ಬಗ್ಗೆ ಈ ಕೂಡಲೇ ಕಂದಾಯ ಮತ್ತು ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಸಿಗುವ ನೀಟ್ಟಿನಲ್ಲಿ ಕ್ರಮ ಕೈಗೊಳಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಪರಿಹಾರ ಘೋಷಣೆಗೆ ಸರಕಾರ ಹಿಂದೇಟು ಹಾಕಿದರರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಲಿಮ್ ಅಹಮದ್ ಚಿತಾಪುರ, ಸಜಿದ್ ಅಲಿ ರಂಜೋಳವಿ, ಶೇಕ್ ಸಿರಾಜ್ ಪಾಷಾ, ಹೈದರಲಿ ಇನಾಮ್ದಾರ್, ಸೈರಾ ಬಾನು ಅಬ್ದುಲ್ ವಾಹಿದ್, ಗೀತಾ ಮುದುಗಲ್, ರಾಬಿಯಾ ಶಿಕಾರಿ, ಸಾದಿಕ್ ಪಟೇಲ್, ಬಾಬಾ ಫಕ್ರುದ್ದಿನ್ ಅನ್ಸಾರಿ, ರಿಯಾಜ್ ಪಟೇಲ್, ಖಾಲಿಕ್ ಅಹಮದ್ ಸೇರಿದಂತೆ ಇತರರು ಇದ್ದರು.