ಜ್ಞಾನ ಪಡೆಯುವುದು ಪ್ರತಿಯೊಬ್ಬನ ಜನ್ಮಸಿದ್ದ ಹಕ್ಕು ಗುರುವಿನ ಮೂಲಕ ಮನುಷ್ಯನು ಎಷ್ಟೇ ಕಲಿತರು ನಿಜವಾದ ಜ್ಞಾನ ಪಡೆಯಲು ಅವನು ಪುಸ್ತಕಗಳಿಗೆ ಶರಣು ಹೋಗುಬೇಕಾಗುತ್ತದೆ. ಸರ್ವಧರ್ಮಗಳನ್ನು ವ್ಯಾಜ್ಯ ಮಾಡಿ ನೀನು ನನ್ನನ್ನೇ ಶರಣು ಹೋಗು ಎಂದು ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದಂತೆ ಗ್ರಂಥಾಲಯ ನಮಗೆ ಹೇಳುತ್ತದೆ.
ಮನುಷ್ಯ ನಿರ್ಮಿಸಿದೆಲ್ಲವೂ ಇಂದಲ್ಲ ನಾಳೆ ನಶೀಸಿ ಹೋಗುತ್ತದೆ. ಕಟ್ಟಡಗಳು ಕುಸಿದು ಬಿಳುತ್ತದೆ. ರಾಷ್ಟ್ರಗಳು ಹಾಳಾಗುತ್ತದೆ. ನಾಗರೀಕತೆ ನಾಶವಾಗುತ್ತದೆ. ಆದರೆ ಪುಸ್ತಕಗಳು ಜವಾಹರಲಾಲ ನೆಹರುರವರು ಹೇಳುವ ಹಾಗೆ “ಗ್ರಂಥಗಳ ನಾಡಿನ ಸಂಸ್ಕøತಿಯ ಪ್ರತೇಕ”ವೆಂದಿದ್ದಾರೆ.
“ ಎಲ್ಲರೂ ಓದಬೇಕು, ಎಲ್ಲರ ಮನೆಯಲ್ಲಿಯೂ ಪುಸ್ತಕಗಳು ಇರಬೇಕು. ಪುಸ್ತಕಗಳಲ್ಲದ ಮನೆಯು ಕಿಟ್ಟಕಿಯಿಲ್ಲದ ಕೋಣೆಯಿಂದ್ದಂತೆ” ಎನ್ನಬಹುದು ಮನೆಯಲ್ಲಿ ಪುಸ್ತಕಗಳು ತುಂಬಿದ್ದರೆ, ಮಕ್ಕಳು ಪುಸ್ತಕದ ವಾತಾವರಣದಲ್ಲಿ ಬೆಳೆಯುತ್ತಾರೆ. ಪುಸ್ತಕಗಳು ಎದುರಿಗೆದ್ದರೆ ಮಕ್ಕಳು ಓದುವದನ್ನು ಕಲಿಯುತ್ತಾರೆ. ತಂದೆ-ತಾಯಿಗಳು ಪುಸ್ತಕಗಳನ್ನು ಕೈಗೆ ಎತ್ತಿಕೊಂಡರೆ, ಅದು ಮಕ್ಕಳ ಮನಸ್ಸಿನ ಮೇಲೆ ತಾವು ಓದಬೇಕೆನ್ನುವ ಪರಿಣಾಮ ಬೀರುತ್ತದೆ.
ಮನುಷ್ಯನ ಓದು, ಅವನ ಜ್ಞಾನವನ್ನು ಹೆಚ್ಚಿಸುತ್ತದೆ. ಹೊಸ ವಿಚಾರಗಳಿಗೆ ಆಸ್ಪದ ಮಾಡಿಕೊಡುತ್ತದೆ. “ಒಳ್ಳೆಯ ಪುಸ್ತಕ ಉತ್ತಮ ಸ್ನೇಹಿತನಿದ್ದಂತೆ, ಓದು ಮನುಷ್ಯನನ್ನು ಪರಿಪೂರ್ಣ ಮಾನವನನ್ನಾಗಿಸುತ್ತದೆ”
ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹರೆಂದೇ ಹೆಸರುವಾಸಿಯಾಗಿರುವ ಪದ್ಮಶ್ರೀ ಶಿಯ್ಯಾಳಿ ರಾಮಾಮೃತ ರಂಗನಾಥನ್ ಅವರ ಜನ್ಮದಿನಾಯಣೆಯ ಸಂದರ್ಭದಲ್ಲಿ 12ನೇ ಆಗಸ್ಟ್ ದಿನವನ್ನು ಗ್ರಂಥಪಾಲಕರ ದಿನಾಚರಣೆ ಎಂದು ಕರ್ನಾಟಕ ಸರ್ಕಾರವು ಘೋಷಿಸಿದೆ, ಇದು ಗ್ರಂಥಪಾಲಕತ್ವಕ್ಕೆ ಸರ್ಕಾರವು ನೀಡಿರುವ ಮಹತ್ವದ ಕೊಡಿಗೆ ಆಗಿದೆ.
ಭಾರತದ ಶಿಕ್ಷಣ ಪ್ರಸಾರ ಕಾರ್ಯದಲ್ಲಿ ಗ್ರಂಥಾಲಯಗಳು, ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ಬೆಳೆಯಲು, ಗ್ರಂಥಾಲಯ ವಿಜ್ಞಾನವನ್ನು ಪರಿಚಯಿಸಿ, ಪ್ರೇರೇಪಿಸಿ ಬೆಳೆಸಿದವರು, ಡಾ|| ಎಸ್.ಆರ್ ರಂಗನಾಥನ್ ಅವರು, ಇಂದು ಆಧುನಿಕ ಗ್ರಂಥಾಲಯಗಳ ವ್ಯವಸ್ಥೆ ಮುಕ್ತ ಸೇವಾ ಸೌಲಭ್ಯಗಳು ಅವರ ದೂರದೃಷ್ಟಿ ಹಾಗೂ ಪರಿಶ್ರಮದ ಫಲಗಳಾಗಿದೆ. ತಮ್ಮ ಜೀವನವನ್ನೇ ಗ್ರಂಥಾಲಯ ವಿಜ್ಞಾನ ಮತ್ತು ಶಿಕ್ಷಣಕ್ಕೆ ಮುಡುಪಾಗಿಟ್ಟಿದ್ದರು ಎಂದರೂ ಅತಿಶಯೋತ್ತಿಯಾಗಲಾರದು.
ಡಾ|| ಎಸ್.ಆರ್ ರಂಗನಾಥನ್‍ರು ಆಗಷ್ಟು 9, 1892 ರಂದು ಶಿಯಾಳಿಯಲ್ಲಿ ತಿರುವರೂರು ಜಿಲ್ಲೆ ತಮಿಳುನಾಡಿನಲ್ಲಿ ಸಾಮಾನ್ಯ ಹಿನ್ನೆಲೆಯ ಕುಟುಂಬದಲ್ಲಿ ಶ್ರೀಯುತರು ಜನಿಸಿದರು.
ರಾಮಾದದ್ಯತ ಅಯ್ಯರ್ ಮತ್ತು ಸೀತಾಲಕ್ಷ್ಮೀ ದಂಪತಿಗಳ ಹಿರಿಯ ಮಗುವೆ ರಂಗನಾಥನ್ ಶಿಯ್ಯಾಳಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾಡಿದರು, ನಂತರ 1909 ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 1911ರಲ್ಲಿ ಇಂಟರ್ ಮಿಡಿಯೇಟ್ ಪರೀಕ್ಷೆಯಲ್ಲಿ ಮುಗಿಸಿದರು. ಮದ್ರಾಸಿನ ಕ್ರಿಶ್ಚಿಯನ್ ಕಾಲೇಜ್ ಸೇರಿ 1913ರಲ್ಲಿ ಬಿ.ಎ ಪದವಿ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದರು. ಗಣಿತ ಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ ರಂಗನಾಥನ್‍ರು 1916 ರಲ್ಲಿ ಎಂ.ಎ ಪದವಿ ಪರೀಕ್ಷೆಯನ್ನು ಗಣಿತ ಶಾಸ್ತ್ರವನ್ನು ಐಚ್ಚಿಕ ವಿಷಯವನ್ನಾಗಿ ತೇಗೆದುಕೊಂಡು ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಉತ್ತೀರ್ಣರಾದರು.
1917 ರಲ್ಲಿ ಎಲ್.ಟಿ ಪದವಿಯನ್ನು ಸಹಗಳಿಸಿಕೊಂಡರು, ನಂತರ ಬೋಧನ ಕ್ರಮದ ವಿಧಾನದಲ್ಲಿ ಅರ್ಹತೆ ಪಡೆದರು. ಇವರ ಜೀವನ ಆಸೆ ಗಣಿತ ವಿಷಯವನ್ನು ಕಲಿಸಲು ಇಚ್ಚಿಸಿದ್ದರು. ಕ್ರಿಶ್ಚಿಯನ್ ಕಾಲೇಜಿನಲ್ಲಿರುವಾಗ ಪ್ರಾಧ್ಯಾಪಕರಾದ ಎಡ್ವಿರ್ಡ್ ಡಿ. ರಾಸ್ ರಂಗನಾಥನ್‍ರ ಪ್ರತಿಭೆ ಮೇಚ್ಚಿಕೊಂಡು ಅವರಿಗೆ ವ್ಯಾಸಂಗ ಕಾಲದಲ್ಲಿ ಸಹಾಯ ಮಾಡಿ ಉತ್ತೇಜಿಸಿದರು, ಎಡ್ವರ್ಡ್ ಡಿ.ರಾಸ್ ರವರ ಬಗ್ಗೆ ರಂಗನಾಥನ್‍ರಲ್ಲಿ ಅಪಾರ ಗೌರವ ಹಾಗೂ ಭಕ್ತಿ ಇತ್ತು.
ಶ್ರೀ ಯೂತರು ನಂತರ ಮಂಗಳೂರು ಕೊಯಿಮತ್ತೂರ್ ಹಾಗೂ ಮದ್ರಾಸಿನ ವಿಶ್ವವಿದ್ಯಾಲಯಗಳಲ್ಲಿ ಗಣಿತ ವಿಭಾಗದ ಸದಸ್ಯರಾದರು, ಈ ಎಲ್ಲವನ್ನು ಕೇವಲ ಐದು ವರ್ಷಗಳಲ್ಲಿ ಪಡೆದುಕೊಂಡರು, ಇವರು ಗಣಿತಶಾಸ್ತ್ರ ಪ್ರೋಫೆಸ್‍ರಾಗಿ ಹಲವಾರು ಪ್ರಭಂದ ಸಂಪಾದಕೀಯಗೆಳನ್ನು ಗಣಿತ ಹಾಗೂ ಇದರ ಇತಿಹಾಸ ಬಗ್ಗೆ ಪ್ರಕಟಿಸಿದರು.
ಡಾ|| ಎಸ್.ಆರ್ ರಂಗನಾಥನ್‍ರ ವಿದ್ಯಾಭ್ಯಾಸದ ನಂತರ 1917ರಲ್ಲಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿ ನಂತರ 1920ರಲ್ಲಿ ಕೊಯುಮುತ್ತೂರಿನ ಸರಕಾರಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಸೇರಿದರು. ಇವರು ಜನವರಿ 4, 1924ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಗ್ರಂಥಪಾಲರ ಹುದ್ದೆಗೆ ಆಯ್ಕೆಯಾದರು, ಮದ್ರಾಸ್ ವಿಶ್ವವಿಧ್ಯಾಲಯದಲ್ಲಿ ಇವರನ್ನು ಗ್ರಂಥಪಾಲಕ ತರಬೇತಿಗಾಗಿ ಇಂಗ್ಲೆಂಡಿಗೆ ಕಳುಹಿಸಿಕೊಟ್ಟರು, 1924 ಸೆಪ್ಟೆಂಬರ್ 24 ರಂದು ಲಂಡನ್ ಸ್ಕೂಲ್ ಆಫ್ ಲೈಬ್ರರಿಯನ್‍ಶಿಪ್‍ಗೆ ಸೇರಿದರು.
ಲಂಡನ್‍ನಿಂದ ಭಾರತಕ್ಕೆ ಹಿಂತಿರುಗಿದ ರಂಗನಾಥನ್ ಅವರು ಮದ್ರಾಸಿನ ವಿಶ್ವವಿದ್ಯಾಲಯ ಗ್ರಂಥಾಲಯವನ್ನು ತಮ್ಮ ಪ್ರಯೋಗ ಶಾಲೆಯಾಗಿ ಮಾಡಿಕೊಂಡರು, ಶ್ರೀ ರಂಗನಾಥನವರು ಹಿಂದೆ ಬರೆದಿದ್ದ ಹಲವಾರು ಗ್ರಂಥಾಲಯ ವಿಜ್ಞಾನ ಸಂಬಂಧ ಬರಹಗಳು, ಪ್ರಭಂದಗಳು, ವಿಶ್ವವಿದ್ಯಾಲಯ ಹುಡುಕಾಡತ್ತಿದ್ದ ಸಮಿತಿಗೆ ಪತ್ತೆಯಾಗಿ, ಶ್ರೀ ರಂಗನಾಥನ್‍ರು ಗ್ರಂಥಪಾಲಕರ ಹುದ್ದೆಯ ಅಭ್ಯಾರ್ಥಿಯಾಗಿ ಆಯ್ಕೆಯಾದರು, ಮುಂದೆ ಇವರನ್ನು “¸ಪಾಶ್ಚೀ ಮಾತ್ಯ ಗ್ರಂಥಪಾಲಕ” ಬಗ್ಗೆ ವ್ಯಾಸಂಗಕ್ಕಾಗಿ ಲಂಡನಿಗೆ ಕಳುಹಿಸಲಾಯಿತು. ಆಗಿನ ಕಾಲಕ್ಕೆ ಇಡೀ ಬ್ರಿಟನ್‍ನಲ್ಲಿ ಏಕೈಕ ಗ್ರಂಥಾಲಯ ವಿಜ್ಞಾನ ಪದವಿ ಪ್ರಧಾನ ಕೇಂದ್ರವಾಗಿತ್ತು. ಆಗ ಹೆಚ್ಚು ಪ್ರಸ್ತುತಿಯಲ್ಲಿದ (ಆಆಅ) ಆeತಿeಥಿ ಆeಛಿimಚಿಟ ಅಟಚಿssiಜಿiಛಿಚಿಣioಟಿ Sಛಿheme) ದಿವೆ ಡ್ಯುಯಿ ದಶಮಾಂಶ ವರ್ಗೀಕರಣ ಪದ್ಧತಿಯಲ್ಲಿ ಇದ್ದ ನೂನ್ಯತೆಗಳನ್ನು ಸರಿಪಡಿಸಲು ಹೊಸ ಪ್ರಯೋಗಗಳನ್ನು ಅಳವಡಿಸಲು ಯತ್ನಿಸಿದರು, ಡಿ.ಡಿ.ಸಿ ಯ ಕೇಲ ನೂನ್ಯತೆಗಳನ್ನು ಸರಿಸಪಡಿಲು ಹೊಸ ತಂತ್ರ ರೂಪಿಸಿ ಅದರಿಂದ ಎರಡು ವಿಭಿನ್ನ ಪರೋಕ್ಷವಾಗಿ ಸೂಚಿಸಲು ಎರಡು ರೀತಿಯ ವಾಸ್ತವಾಂಶ ಮಾಹಿತಿಯನ್ನು ವರ್ಗೀಕರಿಸಬಹುದೆಂದರು, ಗ್ರಂಥಾಲಯದ ಸಂಗ್ರಹದಲ್ಲಿದ್ದ ಡ್ಯೂಯಿ ದಶಮಾಂಶ ವರ್ಗೀಕೃತ ಪುಸ್ತಕರಗಳನ್ನು ತಮ್ಮ ಹೊಸ ಪದ್ದತಿಯಿಂದ ವರ್ಗೀಕರಣ ಜೋಡಣೆಯ ಪದ್ದತಿಯ ವ್ಯವಸ್ಥೆ ತಂದರು.
ಸ್ರೀಯುತರ ನಿರಂತರ ಪರಿಸ್ರಮದ ಫಲದಿಂದ ಈ ಹೊಸ ವರ್ಗೀಕರಣವನ್ನು ಇಂಗ್ಲೆಂಡ್‍ನಲ್ಲಿ ವಾಸವಿದ್ದ ಕಾಲ ಹಾಗೂ ಭಾರತಕ್ಕೆ ಮರಳಿ ಮತಷ್ಟು ಪರಿಷ್ಕರಿಸಿ ಅದನ್ನು ದ್ವಿಬಂದು ವರ್ಗೀಕರಣ (ಅoಟuಡಿ ಅಟಚಿssiಜಿiಛಿಚಿಣioಟಿ Sಛಿheme) ಎಂದು ಹೆಸರಿಸಿದರು, ಇಂಇಗೂ ಗೋಗಲ್ ಸಂಸ್ಥೆ ಈ ಪದ್ದತಿಯನ್ನು ತನ್ನಲ್ಲಿ ಅಳವಡಿಸಿದೆ.
ಮತ್ತೆ ಭಾರತಕ್ಕೆ ಹಿಂದಿರುಗಿದ ಇವರು “ಮದ್ರಾಸ್ ಗ್ರಂಥಪಾಲಕ ಸಂಘ” ಸ್ಥಾಪಿಸಿದರು, ದಿನಪ್ರತಿ 13 ತಾಸುಗಳು ಹಾಗೂ ವಾರದ 7 ದಿನಗಳಂದೂ ಗ್ರಂಥಾಲಯ, ಗ್ರಂಥಪಾಲಕ ಇವುಗಳ ಸುಧಾರಣೆ ಬಗ್ಗೆ ಶ್ರಮಿಸುತ್ತಿದ್ದರು.
ಈ ಸಮಯದಲ್ಲೆ ಎರಡು ಮಹಾನ್ ಪರಂಪರಾ ಸಾಗತವಾದ ಗ್ರಂಥಕರಾದ “ ಗ್ರಂಥಾಲಯ ವಿಜ್ಞಾನದ ಪಂಚ ಸೂತ್ರಗಳು 1931” ಹಾಗೂ “ದ್ವಿಬಂದು ವರ್ಗೀಕರಣ” ಪದ್ದತಿಗೆ ಕಾರಣೀಕರ್ತರಾದರು.
ಡಾ|| ಎಸ್.ಆರ್ ರಂಗನಾಥನ್‍ರವರು ಗ್ರಂಥಾಲಯಕ್ಕೆ ನಿಡಿದ ಮುಖ್ಯ ಕೊಡುಗೆ ‘ಗ್ರಂಥಾಲಯ ಪಂಚಸೂತ್ರಗಳು” ಅವುಗಳು ಈ ಕೆಳಗಿನಂತಿವೆ.
1) ಗ್ರಂಥಗಳು ಉಪಯೋಗಕ್ಕಾಗಿ.
2) ಪ್ರತಿ ಓದುಗರಿಗೆ ಅವರ ಗ್ರಂಥ
3) ಪ್ರತಿ ಗ್ರಂಥಕ್ಕೆ ಅವರ ಓದುಗ
4) ಓದುಗನ ಸಮಯ ಉಳಿಸಿ
5) ಗ್ರಂಥಾಲಯ ಒಂದು ಬೆಳೆಯುವ ಶಿಶು.
ಗ್ರಂಥಾಲಯ ವಿಜ್ಞಾನ ಶಾಲೆಯೊಮದನ್ನು ರಂಗನಾಥನ್‍ರ ನೇತೃತ್ವದಲ್ಲಿ 1929ರಲ್ಲಿಯೇ ತರುವಾಯ 15 ವರ್ಷಗಳ ಕಾಲ ಶಾಲೆಯ ನಿರ್ದೇಶಕರಾಗಿದ್ದರು.
ಮದ್ರಾಸಿನಲ್ಲಿ ಎರಡು ದಶಕಗಳ ಕಾಲ ಗ್ರಂಥಪಾಲರಾಗಿ ಸೇವೆ ಸಲ್ಲಿಸಿ ತಮ್ಮ 54ನೇ ವಯಸ್ಸಿನಲ್ಲಿ ಹುದ್ದೆಗೆ ರಾಜೀನಾಮೆ ನೀಡಿದರು, ಕಾಲಾಂತರ ವಾರಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು, ತಮ್ಮ 4 ವರ್ಷಗಳ ಕಾಲಾವಧಿಯಲ್ಲಿ ಅವರೊಬ್ಬರೆ ಸುಮಾರು 1,00,000 ವರ್ಗೀಕರಣ ಪುಸ್ತಕಗಳನ್ನು ಮಾಡಿದರು.
1949 ರಿಂದ 1955ರಲ್ಲಿ ದೆಹಲಿ ವಿಶ್ವವಿದ್ಯಾಲಯ ಗೌರವ ಪ್ರಾಧ್ಯಾಪಕರ ಸ್ಥಾನ ವಹಿಸಿದರು ಅಂದಿನ ಎಫ್.ಐ.ಡಿ ಮುಖ್ಯ ಕಾರ್ಯದರ್ಶಿ ಡಾಂಕರ್ ಡಯಯುವಿಸ್ ಅವರ ನಡುವಿನ ಸಂಬಂಧ ಉತ್ತಮವಾಗಿತ್ತು. ಈIಆ/ಅಖ ಅಟಚಿssiಜಿiಛಿಚಿಣioಟಿ ಖeseಚಿಡಿಛಿh ಉಡಿouಠಿ ಅಧ್ಯಕ್ಷರಾಗಿದ್ದು 12 ಸಂಶೋಧನಾ ವರದಿ ಸಲ್ಲಿಸದ್ದರು.
ಭಾರತದ ಗ್ರಂಥಾಲಯ ಬೆಳವಣಿಗೆ ವ್ಯವಸ್ಥೆಯ ಬಗ್ಗೆ 20 ವರ್ಷದ ವಿಸ್ತತ ಕರಡು ವರದಿಯೊಂದನ್ನು ಸಿದ್ದಿಗೊಳಿಸದ್ದರು. ಭಾರತೀಯ ಮಾನಕ ಸಂಸ್ಥೆಯ ಪ್ರಲೇಖನ ಸಮಿತಿಯನ್ನು ಹುಟ್ಟು ಹಾಕಿದುವಲ್ಲದೆ 1967ರ ವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು, ಇದೇ ಸಮಯದಲ್ಲಿ ರಾಕ್‍ಫಿಲರ್ ಸಂಸ್ಥೇಯ ನೆರನೊಂದಿಗೆ 1950ರಲ್ಲಿ ಅಮೇರಿಕಕ್ಕೆ ಭೆಟಿಕೊಟ್ಟ ಸಮಯದಲ್ಲಿ “ಕ್ಲಾಸಿಫಿಕೇಶನ್ ಆ್ಯಂಡ್ ಕಮ್ಯೂನಿಕೇಶನ್” ಗ್ರಂಥವನ್ನು ಬರೆದರು.
ಆಡು ಮುಟ್ಟದ ಸೊಪ್ಪಿಲ್ಲ, ಎಂಬ ಗಾದೆಯಂತೆ ರಂಗನಾಥನ್ ಅವರು ಗ್ರಂಥಾಲಯ ವಿಜ್ಞಾನ ಕ್ಷೇತ್ರಕ್ಕೆ ನೀಡದೇ ಇರುವ ಸೇವೆಗಳಲ್ಲ ಎಂದರೆ ಇದು ಉತ್ಪತ್ರೇಕ್ಷೆ ಮಾತಲ್ಲ, ಗ್ರಂಥಾಲಯ ಆಡಳಿತ, ಸರ್ವಹಣೆ, ವರ್ಗೀಕರಣ, ಸಬೆಕರಣ, ನಿರ್ದೇಶಿಕರಣ, ಸೇವೆ, ಪ್ರಲೇಖನ ಸೇವೆ, ಗ್ರಂಥಾಲಯ ವಿಜ್ಞಾನದ ಪಂಚ ಸೂತ್ರಗಳು ಹೀಗೆ ಅವರ ಕೊಡುಗೆಗಳನ್ನು ದಾಖಲಿಸುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತವೆ. 60 ಕ್ಕೂ ಹೆಚ್ಚು ಪುಸ್ತಕಗಳು, 2000ಕ್ಕೂ ಹೆಚ್ಚು ಗ್ರಂಥಾಲಯ ವಿಜ್ಞಾನದ ವಿದ್ವತ್ ಲೇಖನಗಳನ್ನು ಪ್ರಕಟಿಸಿದ್ದಾರೆ.
ಡಾ|| ಎಸ್.ಆರ್ ರಂಗನಾಥರು, 1957 ಬೆಂಗಳೂರಿಗೆ ಬಂದು ನೆಲೆಸಿದರು. 1962ರಲ್ಲಿ ಡಿ.ಆರ್.ಟಿ.ಸಿ (ಆoಛಿumeಟಿಣಚಿಣioಟಿ ಖeseಚಿಡಿಛಿh ಚಿಟಿಜ ಣಡಿಚಿಜiಟಿg ಅeಟಿಣಡಿe) ಇಲಾಖೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು, ಮುಂದೆ 5 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.
ದೆಹಲಿ ವಿಶ್ವವಿದ್ಯಾಲಯವು 1948 ರಲ್ಲಿ ಹಾಗೂ ಪಿಟ್ಸ್‍ಬರ್ಗ ವಿಶ್ವವಿದ್ಯಾಲಯವು 1964ರಲ್ಲಿ ಡಾಕ್ಟರ್ ಆಪ್ ಲೇಟಕರ್ ಪದವಿಯನ್ನು ದಯಪಾಲಿಸಿದವು. 1954ಕ್ಕೆ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಅವರು ರಾಷ್ಟ್ರೀಯ ಪ್ರಾದ್ಯಾಪಕರಾಗಿ ಗಳಿಸಿದ ಹಣವನ್ನು ಹಾಗೂ ಅವರು ಬರೆದ ಪುಸ್ತಕಗಳ ಮಾರಾಟದಿಂದ ಬರುತ್ತಿದ್ದ ಸ್ವಾದ್ಯ ಹಣವನ್ನು 1961ರಲ್ಲಿ “ಶಾರದು ರಂಗನಾಥನ್ ಗ್ರಂಥಾಲಯ ವಿಜ್ಞಾನ ದತ್ತಿ” ಸಂಸ್ಥೆಗೆ ದಾನವಾಗಿ ಕೊಟ್ಟರು.
ಭಾರತ ಸರ್ಕಾರ ಶ್ರೀ ರಂಗನಾಥನ್ ರವರು ಸಾಧಿಸಿದ ಮಹತ್ವದ ಸಾಧನೆಗಳನ್ನು ಗುರುತಿಸಿ ಅವರಿಗೆ 1962ರಲ್ಲಿ ರಾಷ್ಟ್ರೀಯ ಸಂಶೋಧಕ ಪ್ರಾದ್ಯಾಪಕ’ರೆಂಬ ಬಹು ಅಪರೂಪದ ಗೌರವ ಬಿರುವು ನೀಡಿ ಸನ್ಮಾನಿಸಿತು.
ಅವರ ಕರ್ತಸಪ್ಮಾತ ಪ್ರಜ್ಞೆ ಹೊಂದಿದ ವೈಜ್ಞಾನಿಕ ವಿಚಾರವಾದಿಯಾಗಿದದರು, ಅವರ ಜೀವನಾದರ್ಶ ಮತ್ತು ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿತ ಕೆಲಸಗಳೆಲ್ಲಾ ವೈಚಾರಿಕ ತಳಹದಿಯ ಮೇಲೆ ನಿರ್ಮಿತವಾದವುಗಳಾಗಿವೆ.
ಶ್ರೀ ರಂಗನಾಥನ್‍ರು ಅವರ ಕೊನೆಯ ಜೀವತಾವಧಿಯನ್ನು ಅನಾರೋಗ್ಯದ ನಿಮಿತ್ತ ಮಂಚದ ಮೇಲೆ ಸೀಮಿತಾರಾಗಿದ್ದರು, ಅಸ್ತಮಾ, ರೋಗ ಉಲ್ಬಣದಿಂದ 27ನೇ ಸೆಪ್ಟೆಂಬರ್ 1972 ರಂದು ಬೆಂಗಳೂರಿನಲ್ಲಿ ದೈಮಧೀನತಾದರು.
ಅವರ ಜೀವನ ಒಂದು ರೀತಿಯ ಅಮರತ್ವಕ ಸಂಕೇತವಾಗಿತ್ತು. ಅವರ ತತ್ವಗಳ ಸಮಗ್ರತ್ಸವು ಸಾಂದರ್ಭಿಕ ಸಹಜ ಜ್ಞಾನದಿಂದ ಉಪಸಿಸ್ಥತವಾದವು.
ರಂಗನಾಥನ್‍ರವರ ನೆನಪನ್ನು ಜನಮನದಲ್ಲಿ ಅಜರಾಮರವಾಗಿ ಉಳಿಯಲೂ ಕರ್ನಾಟಕ ಸರ್ಕಾರವು ಪ್ರತಿ ವರ್ಷ ಆಗಷ್ಟ 12 ರಂದು “ಗ್ರಂಥಪಾಲಕರ ದಿನಾಚರಣೆಯಾಗಿ ಆಚರಿಸಲು ಆದೇಶಿಸಿದೆ.
ಹುಟ್ಟಿದ ಹಬ್ಬಕ್ಕೆ ನೀಡದಿರಿ ವಸ್ತುಗಳನ್ನು ಒಂದು ಉತ್ತಮ ಗ್ರಂಥವನ್ನು ನೀಡಿರಿ ಕಾಣಿಕೆಯಾಗಿ ಜ್ಞಾನದ ಹೂ ಅರಳಲಿ ಆ ಪುಸ್ತಕದಿಂದ ಮನೆ ಮನೆಯಲ್ಲಿ ಪ್ರಾರಂಭವಾಗಲಿ ಒಂದು ಚಿಕ್ಕ ಗ್ರಂಥಾಲಯ ಇದುವೆ ನಮ್ಮಯ ಜ್ಞಾನದ ಆಲಯ
ಸಾವಿತ್ರಿ. ಬಿ. ಪಟ್ಟಣ, ಸಹಾಯಕ ಗ್ರಂಥಪಾಲಕರು,
ವ್ಹಿ.ಜಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿ.